ಪುಣೆಯಲ್ಲಿಂದು ಎರಡನೇ ಏಕ ದಿನ ಕ್ರಿಕೆಟ್ ಪಂದ್ಯ: ಸರಣಿ ಕೈವಶಕ್ಕೆ ಆತಿಥೇಯರ ಸಜ್ಜು

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯ ಎರಡನೇ ಪಂದ್ಯ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿಂದು ನಡೆಯಲಿದೆ.

Published: 26th March 2021 12:01 PM  |   Last Updated: 26th March 2021 12:01 PM   |  A+A-


surya

ಸೂರ್ಯ ಕುಮಾರ್ ಯಾದವ್

Posted By : Lingaraj Badiger
Source : UNI

ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯ ಎರಡನೇ ಪಂದ್ಯ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿಂದು ನಡೆಯಲಿದೆ.

ಪಂದ್ಯ ಮಧ್ಯಾಹ್ನ ೧.೩೦ಕ್ಕೆ ಆರಂಭವಾಗಲಿದೆ. ಸದ್ಯ ಸರಣಿಯಲ್ಲಿ ಭಾರತ ೧-೦ ಅಂತರದ ಮುನ್ನಡೆ ಗಳಿಸಿದ್ದು, ಹಾಲಿ ಪ್ರವಾಸದಲ್ಲಿ ಹ್ಯಾಟ್ರಿಕ್ ಸರಣಿ ಜಯಿಸುವ ಗುರಿಯೊಂದಿಗೆ ಕಣಕ್ಕಿಳಿಯುತ್ತಿದೆ. ಈಗಾಗಲೇ ನಾಲ್ಕು ಪಂದ್ಯಗಳ ಟೆಸ್ಟ್ ಹಾಗೂ ಐದು ಪಂದ್ಯಗಳ ಟಿ೨೦ ಸರಣಿಯನ್ನು ಆತಿಥೇಯ ತಂಡ ವಶಪಡಿಸಿಕೊಂಡಿದೆ.

ಸರಣಿ ಜೀವಂತವಾಗಿರಸಲು ಇಂಗ್ಲೆಂಡ್ ತಂಡಕ್ಕೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಈ ಮಧ್ಯೆ, ಮೊದಲ ಪಂದ್ಯದಲ್ಲಿ ಗಾಯಗೊಂಡಿದ್ದ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಸರಣಿಯಿಂದ ಹೊರಬಿದ್ದಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯಕ್ಕೆ ಎರಡು ತಂಡಗಳು ಸಜ್ಜಾಗುತ್ತಿರುವಂತೆಯೇ ಉಭಯ ತಂಡಗಳಿಗೆ ಗಾಯದ ಸಮಸ್ಯೆ ಕಾಡತೊಡಗಿದೆ. ಭಾರತದ ಶ್ರೇಯಸ್ ಅಯ್ಯರ್ ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೇ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ಅಲ್ಲದೆ ಬಾಕಿ ಉಳಿದಿರುವ ಎರಡು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ತಿಳಿದುಬಂದಿದೆ.

ಪುಣೆಯಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಪರವಾಗಿ ಲಿಯಾನ್ ಲಿವಿಂಗ್‌ಸ್ಟನ್ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಮತ್ತೊಂದೆಡೆ ಇಂಗ್ಲೆಂಡ್ ತಂಡದಲ್ಲಿ ಮೀಸಲು ಆಟಗಾರನಾಗಿದ್ದ ಟಿ20 ಸ್ಪೆಷಲಿಸ್ಟ್ ಡೇವಿಡ್ ಮಲನ್ ಈಗ ತಂಡ ಸೇರಿಕೊಳ್ಳಲ್ಲಿದ್ದಾರೆ. 

ಭಾರತ ತಂಡದಲ್ಲಿಯೂ ಮೊದಲ ಏಕದಿನ ಪಂದ್ಯದಲ್ಲಿ ಇಬ್ಬರು ಆಟಗಾರರು ಗಾಯಗೊಂಡಿದ್ದರು. ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಐಯ್ಯರ್ ಅಂಗಳದಿಂದ ಹೊರಗುಳಿದಿದ್ದರು. ರೋಹಿತ್ ಶರ್ಮಾ ಎರಡನೇ ಪಂದ್ಯಕ್ಕೆ ಫಿಟ್ ಆಗುವ ಸಾಧ್ಯತೆಯಿದ್ದು ಶ್ರೇಯಸ್ ಐಯ್ಯರ್ ಸರಣಿಯಿಂದ ಹೊರಬಿದ್ದಿದ್ದಾರೆ. ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನೂ ಆಗಿರುವ ಐಯ್ಯರ್ ಏಪ್ರಿಲ್ 9 ರಿಂದ ಆರಂಭವಾಗುವ ಪ್ರತಿಷ್ಟಿತ ಟೂರ್ನಿಯಿಂದಲೂ ಸಂಪೂರ್ಣವಾಗಿ ಹೊರಗುಳಿಯಲಿದ್ದಾರೆ ಎಂದು ತಿಳಿದುಬಂದಿದೆ.

Stay up to date on all the latest ಕ್ರಿಕೆಟ್ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp