ಮತ್ತೊಮ್ಮೆ ಥರ್ಡ್ ಅಂಪೈರ್ ಎಡವಟ್ಟು: ಮೈದಾನದ ಅಂಪೈರ್ ಮುಂದೆ ಕೊಹ್ಲಿಯ ಅಳಲು ವ್ಯರ್ಥ್ಯ, ವಿಡಿಯೋ ವೈರಲ್

ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ. ಇದರ ಬೆನ್ನಲ್ಲೇ ಬೆನ್ ಸ್ಟೋಕ್ಸ್ ನಾಟ್ ಔಟ್ ತೀರ್ಪು ನೀಡಿದ್ದ ಮೂರನೇ ಅಂಪೈರ್ ವಿರುದ್ಧದ ಆಕ್ರೋಶ ವ್ಯಕ್ತವಾಗಿದೆ.

Published: 27th March 2021 04:56 PM  |   Last Updated: 27th March 2021 04:56 PM   |  A+A-


pant-Kohli

ಪಂತ್-ಕೊಹ್ಲಿ

Posted By : Vishwanath S
Source : Online Desk

ಪುಣೆ: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ. ಇದರ ಬೆನ್ನಲ್ಲೇ ಬೆನ್ ಸ್ಟೋಕ್ಸ್ ನಾಟ್ ಔಟ್ ತೀರ್ಪು ನೀಡಿದ್ದ ಮೂರನೇ ಅಂಪೈರ್ ವಿರುದ್ಧದ ಆಕ್ರೋಶ ವ್ಯಕ್ತವಾಗಿದೆ. 

ಪುಣೆಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಟೀಂ ಇಂಡಿಯಾ ನಿಗದಿತ ಓವರ್ 336 ರನ್ ಬಾರಿಸಿದ್ದು ಇಂಗ್ಲೆಂಡ್ ತಂಡಕ್ಕೆ ಬೃಹತ್ ಮೊತ್ತದ ಗುರಿ ನೀಡಿತ್ತು. ಈ ಗುರಿಯನ್ನು ಸುಲಭವಾಗಿ ಮುಟ್ಟಿತ್ತು. ಬೈರ್ ಸ್ಟೋವ್ ಶತಕ ಮತ್ತು ಬೆನ್ ಸ್ಟೋಕ್ಸ್ 52 ಎಸೆತಗಳಲ್ಲಿ 99 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 

ಬೆನ್ ಸ್ಟೋಕ್ಸ್ 31 ರನ್ ಗಳಿಸಿದ್ದಾಗ ಇನ್ನಿಂಗ್ಸ್ ನ 25.5ನೇ ಓವರನಲ್ಲಿ ಭುವನೇಶ್ವರ್ ಕುಮಾರ್ ಬೌಲಿಂಗ್ ನಲ್ಲಿ ಸ್ಟೋಕ್ಸ್ ಎರಡು ರನ್ ತೆಗೆದುಕೊಂಡಿದ್ದರು. ಎರಡನೇ ರನ್ ಗೆ ಓಡುವಾಗ ಕುಲದೀಪ್ ಯಾದವ್ ವಿಕೆಟ್ ಗೆ ನೇರವಾಗಿ ಥ್ರೋ ಮಾಡಿದ್ದರು. ಟೀಂ ಇಂಡಿಯಾ ಆಟಗಾರರ ಮನವಿ ಮೇರೆಗೆ ರನ್ ಔಟ್ ಪರಿಶೀಲಿಸಲು ಮೈದಾನದ ಅಂಪೈರ್ ಥರ್ಡ್ ಅಂಪೈರ್ ಗೆ ಮನವಿ ಮಾಡಿದರು. 

ಟಿವಿಯಲ್ಲಿ ರೀ-ಪ್ಲೇಗಳಲ್ಲಿ ಸ್ಟೋಕ್ಸ್ ಗೆರೆ ದಾಟದೇ ಇರುವುದು ಸ್ಪಷ್ಟವಾಗಿತ್ತು. ಆದರೆ ಮೂರನೇ ಅಂಪೈರ್ ನಾಟ್ ಔಟ್ ಎಂದು ಘೋಷಿಸಿದರು. ಈ ಬಗ್ಗೆ ಕೊಹ್ಲಿ ಮೈದಾನದಲ್ಲೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ತೀರ್ಪಿನ ವಿರುದ್ಧ ತಮ್ಮ ಮೂಕ ವೇದನೆಯನ್ನು ಪ್ರದರ್ಶಿಸಿದರು. 

ಇನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಸೇರಿದಂತೆ ಭಾರತೀಯ ಅಭಿಮಾನಿಗಳು ಸಹ ಮೂರನೇ ಅಂಪೈರ್ ವಿರುದ್ಧ ಮೀಮ್ಸ್ ಗಳ ಮೂಲಕ ಕಾಲೆಳೆಯುತ್ತಿದ್ದಾರೆ.

Stay up to date on all the latest ಕ್ರಿಕೆಟ್ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp