3ನೇ ಏಕದಿನ ಪಂದ್ಯ: ಟೀಂ ಇಂಡಿಯಾ ಭರ್ಜರಿ ಆರಂಭ; 2 ವಿಶ್ವ ದಾಖಲೆ ಬರೆದ ರೋಹಿತ್-ಧವನ್ ಜೋಡಿ

ಇಂಗ್ಲೆಂಡ್ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡಕ್ಕೆ ಭರ್ಜರಿ ಆರಂಭ ನೀಡಿರುವ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿ ಶತಕದ ಜೊತೆಯಾಟವಾಡುವ ಮೂಲಕ ವಿಶ್ವದಾಖಲೆ ಬರೆದಿದೆ.

Published: 28th March 2021 03:05 PM  |   Last Updated: 28th March 2021 03:06 PM   |  A+A-


Posted By : Srinivasamurthy VN
Source : Online Desk

ಪುಣೆ: ಇಂಗ್ಲೆಂಡ್ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡಕ್ಕೆ ಭರ್ಜರಿ ಆರಂಭ ನೀಡಿರುವ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿ ಶತಕದ ಜೊತೆಯಾಟವಾಡುವ ಮೂಲಕ ವಿಶ್ವದಾಖಲೆ ಬರೆದಿದೆ.

ಹೌದು.. ಪುಣೆಯಲ್ಲಿ ಮಹಾರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡಕ್ಕೆ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿ ಭರ್ಜರಿ ಆರಂಭ ನೀಡಿದೆ. ಕೇವಲ 86 ಎಸೆತಗಳಲ್ಲಿ ಈ  ಜೋಡಿ 16 ಬೌಂಡರಿಗಳ ಸಹಿತ 103 ರನ್ ಕಲೆಹಾಕಿದೆ. ಈ ಪೈಕಿ ಕೇವಲ 51 ಎಸೆತಗಳಲ್ಲಿ ಶಿಖರ್ ಧವನ್ 63 ರನ್ ಸಿಡಿಸಿ, ತಮ್ಮ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ವೃತ್ತಿ ಜೀವನದ 32ನೇ ಅರ್ಧಶತಕವನ್ನು ತಮ್ಮದಾಗಿಸಿಕೊಂಡರು. ಧವನ್ ಗೆ ಉತ್ತಮ ಸಾಥ್ ನೀಡಿದ ರೋಹಿತ್ ಶರ್ಮಾ ಕೂಡ 37  ಎಸೆತಗಳಲ್ಲಿ 37 ರನ್ ಗಳಿಸಿ ಅದಿಲ್ ರಶೀದ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು.

ದಾಖಲೆಯ ಜೊತೆಯಾಟ
ಇನ್ನು ಈ ಪಂದ್ಯದ ಶತಕದ ಜೊತೆಯಾಟದ ಮೂಲಕ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿ ದಾಖಲೆ ಬರೆದಿದ್ದು, ಅತೀ ಹೆಚ್ಚು ಶತಕದ ಜೊತೆಯಾಟವಾಡಿದ ವಿಶ್ವದ 4ನೇ ಮತ್ತು ಅತೀ ಹೆಚ್ಚು ಶತಕದ ಜೊತೆಯಾಟವಾಡಿದ ವಿಶ್ವದ 2ನೇ ಆರಂಭಿಕ ಜೋಡಿ ಎಂಬ ಕೀರ್ತಿಗೆ ಭಾಜನವಾಗಿದೆ. ಧವನ್  ಮತ್ತು ರೋಹಿತ್ ಶರ್ಮಾ ಜೋಡಿ 17 ಬಾರಿ ಶತಕದ ಜೊತೆಯಾಟವಾಡಿದೆ. ವಿಶ್ವ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಬಾರಿ ಶತಕದ ಜೊತೆಯಾಟವಾಡಿದ ಜೋಡಿ ಎಂದರೆ ಭಾರತದ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ.. ಈ ಜೋಡಿ ಆರಂಭಿಕರಾಗಿ 21 ಬಾರಿ ಮತ್ತು ಆರಂಭಿಕರಲ್ಲದೇ ಜೊತೆಯಾಗಿ 26 ಬಾರಿ  ಶತಕದ ಜೊತೆಯಾಟವಾಡಿದ್ದಾರೆ.

Stay up to date on all the latest ಕ್ರಿಕೆಟ್ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp