ಸಚಿನ್ ತೆಂಡುಲ್ಕರ್ ನಂತರ ಯೂಸಫ್ ಪಠಾಣ್ ಗೆ ಕೊರೋನಾ ಪಾಸಿಟಿವ್ 

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ನಂತರ ಇದೀಗ ಮಾಜಿ ಕ್ರಿಕೆಟಿಗ ಯೂಸಫ್ ಪಠಾಣ್ ಗೆ ಸಹ ಕೋವಿಡ್-19 ಪಾಸಿಟಿವ್ ಬಂದಿದ್ದು ಹೋಂ ಕ್ವಾರಂಟೈನ್ ನಲ್ಲಿದ್ದಾರೆ.

Published: 28th March 2021 08:48 AM  |   Last Updated: 28th March 2021 08:48 AM   |  A+A-


Yusuf Patan

ಯೂಸಫ್ ಪಠಾಣ್

Posted By : Sumana Upadhyaya
Source : The New Indian Express

ನವದೆಹಲಿ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ನಂತರ ಇದೀಗ ಮಾಜಿ ಕ್ರಿಕೆಟಿಗ ಯೂಸಫ್ ಪಠಾಣ್ ಗೆ ಸಹ ಕೋವಿಡ್-19 ಪಾಸಿಟಿವ್ ಬಂದಿದ್ದು ಹೋಂ ಕ್ವಾರಂಟೈನ್ ನಲ್ಲಿದ್ದಾರೆ.

ಈ ವಿಷಯವನ್ನು ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. ಸಚಿನ್ ತೆಂಡುಲ್ಕರ್ ಅವರಿಗೆ ಮಾತ್ರ ಕೊರೋನಾ ಪಾಸಿಟಿವ್ ಬಂದಿದ್ದು ಅವರ ಕುಟುಂಬ ಸದಸ್ಯರು ಸದ್ಯ ಸುರಕ್ಷಿತವಾಗಿದ್ದಾರೆ. ಮನೆಯಲ್ಲಿ ಹೋಂ ಕ್ವಾರಂಟೈನ್ ಆಗಿದ್ದು ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸುತ್ತಿದ್ದೇನೆ. ವೈದ್ಯರ ಸಲಹೆ-ಸೂಚನೆಗಳನ್ನು ಪಾಲಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದರು.

ಕಳೆದ ತಿಂಗಳು ಎಲ್ಲಾ ರೀತಿಯ ಕ್ರಿಕೆಟ್ ಗೆ ವಿದಾಯ ಹೇಳಿರುವ 38 ವರ್ಷದ ಯೂಸಫ್ ಪಠಾಣ್ ನಿನ್ನೆ ಸಾಯಂಕಾಲ ತಮಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ ಎಂದು ತಿಳಿಸಿದ್ದಾರೆ.

ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದು ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸುತ್ತಿದ್ದೇನೆ ಎಂದು ಯೂಸಫ್ ಬರೆದುಕೊಂಡಿದ್ದಾರೆ. ನನ್ನ ಜೊತೆ ಸಂಪರ್ಕಿತರೆಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿದ್ದು ಮುಂಬೈಯಲ್ಲಿ ಮೊನ್ನೆ ಶುಕ್ರವಾರ 36 ಸಾವಿರಕ್ಕೂ ಅಧಿಕ ಕೊರೋನಾ ಪಾಸಿಟಿವ್ ಕೇಸುಗಳು ಬಂದಿವೆ. 

Stay up to date on all the latest ಕ್ರಿಕೆಟ್ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp