ಐಸಿಸಿ ವಿಶ್ವಕಪ್ ಸೂಪರ್ ಲೀಗ್ ಅಂಕ ಪಟ್ಟಿ ಪ್ರಕಟ: ವಿರಾಟ್ ಪಡೆಗೆ ಏಳನೇ ಸ್ಥಾನ

ಪುಣೆಯಲ್ಲಿ ನಡೆದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ ಸರಣಿಯಲ್ಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು 2-1ರಿಂದ ಮಣಿಸಿದ ಭಾರತ 20 ಅಂಕಗಳನ್ನು ಗಳಿಸಿದೆ.

Published: 29th March 2021 07:18 PM  |   Last Updated: 29th March 2021 07:18 PM   |  A+A-


Team India

ಟೀಂ ಇಂಡಿಯಾ

Posted By : Vishwanath S
Source : UNI

ದುಬೈ: ಪುಣೆಯಲ್ಲಿ ನಡೆದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ ಸರಣಿಯಲ್ಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು 2-1ರಿಂದ ಮಣಿಸಿದ ಭಾರತ 20 ಅಂಕಗಳನ್ನು ಗಳಿಸಿದೆ.

ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ಭಾರತ ಭಾನುವಾರ ಇಂಗ್ಲೆಂಡ್ ತಂಡವನ್ನು 7 ರನ್ ಗಳಿಂದ ಸೋಲಿಸಿ ಸರಣಿಯನ್ನು 2-1ರಿಂದ ಗೆದ್ದುಕೊಂಡಿತು.

ಈ ಗೆಲುವಿನೊಂದಿಗೆ ಭಾರತವು 29 ಅಂಕ ಕಲೆ ಹಾಕಿದ್ದು, ಏಳನೇ ಸ್ಥಾನದಲ್ಲಿದೆ. ಪಾಕಿಸ್ತಾನ ಒಂದು ಸ್ಥಾನ ಕುಸಿತ ಕಂಡಿದ್ದು, ಎಂಟನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ನಿಧಾನಗತಿಯ ನಡೆಸಿದ್ದಕ್ಕಾಗಿ ಪಾಕ್ ತಂಡ ಒಂದು ಅಂಕ ಕಳೆದುಕೊಂಡಿದೆ.

ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ ಅರ್ಹತಾ ಪಂದ್ಯವಾದ ಸೂಪರ್ ಲೀಗ್ ನಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಲಾ 40 ಪಾಯಿಂಟ್ ಗಳಿಸಿವೆ. ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ತಂಡಗಳು 30 ಅಂಕ ಹೊಂದಿವೆ.

ಎಲ್ಲಾ ತಂಡಗಳು ನಾಲ್ಕು ತವರು ಮತ್ತು ನಾಲ್ಕು ವಿದೇಶಿ ನೆಲದಲ್ಲಿ ಮೂರು ಪಂದ್ಯಗಳ ಸರಣಿಯನ್ನು ಆಡುತ್ತವೆ. ಏಳು ತಂಡಗಳು ಹಾಗೂ ಆತಿಥೇಯ ಭಾರತ 2023ರ ಟೂರ್ನಿಯಲ್ಲಿ ನೇರವಾಗಿ ಅರ್ಹತೆ ಪಡೆಯಲಿವೆ.
 
ತಂಡಗಳು ಗೆಲುವಿಗೆ 10 ಅಂಕಗಳನ್ನು ಪಡೆಯುತ್ತವೆ, ಐದು ಅಂಕಗಳನ್ನು ರದ್ದಾದರೆ, ಟೈ ಆದರೆ ನೀಡಲಾಗುತ್ತದೆ. ಸೋತರೆ ಯಾವುದೇ ಅಂಕವಿಲ್ಲ. ಆದರೆ ನಿಧಾನಗತಿಯ ಬೌಲಿಂಗ್ ಗೆ ಅಂಕಗಳನ್ನು ಕಡಿತಗೊಳಿಸಬಹುದು.

Stay up to date on all the latest ಕ್ರಿಕೆಟ್ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp