ರಸ್ತೆ ಸುರಕ್ಷತೆ ವಿಶ್ವ ಸರಣಿಯಲ್ಲಿ ಭಾಗಿಯಾಗಿದ್ದ ಇರ್ಫಾನ್ ​ಗೂ ಕೊರೋನಾ, 4ನೇ ಭಾರತೀಯ ಆಟಗಾರ!

ಇತ್ತೀಚೆಗೆ ರಾಯ್‌ಪುರದಲ್ಲಿ ನಡೆದ ರಸ್ತೆ ಸುರಕ್ಷತೆ ವಿಶ್ವ ಸರಣಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಗೆ ಕೊರೋನಾ ವಕ್ಕರಿಸಿದ್ದು ಈ ಮೂಲಕ ಸಚಿನ್ ತೆಂಡೂಲ್ಕರ್, ಯೂಸಫ್ ಪಠಾಣ್ ಬಳಿಕ ಕೊರೋನಾಗೆ ತುತ್ತಾದ ನಾಲ್ಕನೇ ಭಾರತೀಯ ಕ್ರಿಕೆಟಿಗನಾಗಿದ್ದಾರೆ.

Published: 30th March 2021 09:27 AM  |   Last Updated: 30th March 2021 12:31 PM   |  A+A-


Irfan Pathan

ಇರ್ಫಾನ್ ಪಠಾಣ್

Posted By : Vishwanath S
Source : PTI

ನವದೆಹಲಿ: ಇತ್ತೀಚೆಗೆ ರಾಯ್‌ಪುರದಲ್ಲಿ ನಡೆದ ರಸ್ತೆ ಸುರಕ್ಷತೆ ವಿಶ್ವ ಸರಣಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಗೆ ಕೊರೋನಾ ವಕ್ಕರಿಸಿದ್ದು ಈ ಮೂಲಕ ಸಚಿನ್ ತೆಂಡೂಲ್ಕರ್, ಯೂಸಫ್ ಪಠಾಣ್ ಬಳಿಕ ಕೊರೋನಾಗೆ ತುತ್ತಾದ ನಾಲ್ಕನೇ ಭಾರತೀಯ ಕ್ರಿಕೆಟಿಗನಾಗಿದ್ದಾರೆ.  

ಇರ್ಫಾನ್ ಗೂ ಮೊದಲು ಸಹೋದರ ಯೂಸುಫ್ ಪಠಾಣ್, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ಎಸ್ ಬದ್ರಿನಾಥ್ ಗೆ ಕೊರೋನಾ ವಕ್ಕರಿಸಿತ್ತು. 

ಕೊರೋನಾದ ಯಾವುದೇ ರೋಗಲಕ್ಷಣಗಳಿಲ್ಲದಿದ್ದರೂ ಪಾಸಿಟಿವ್ ವರದಿ ಬಂದಿದೆ. ಹೀಗಾಗಿ ನನ್ನನ್ನು ನಾನು ಮನೆಯಲ್ಲೇ ಕ್ವಾರಂಟೈನ್ ಆಗಿದ್ದೇನೆ. ಇತ್ತೀಚಿನ ದಿನಗಳಲ್ಲಿ ನನ್ನೊಂದಿಗೆ ಸಂಪರ್ಕಕ್ಕೆ ಬಂದವರನ್ನು ದಯವಿಟ್ಟು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ವಿನಂತಿಸುತ್ತೇನೆ ಎಂದು ಇರ್ಫಾನ್ ಟ್ವೀಟ್ ಮಾಡಿದ್ದಾರೆ.

ಇದೇ ವೇಳೆ ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಎಂದು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ನಿಮ್ಮೆಲ್ಲರಿಗೂ ಉತ್ತಮ ಆರೋಗ್ಯವನ್ನು ಬಯಸುತ್ತೇನೆ ಎಂದು ಅವರು ಬರೆದಿದ್ದಾರೆ.

ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಖಾಸಗಿ ಪಂದ್ಯಾವಳಿಯಾಗಿತ್ತು. ಇದು ನಿವೃತ್ತ ಕ್ರಿಕೆಟಿಗರಿಗೆ ಸೀಮಿತವಾಗಿದ್ದರಿಂದ ಈ ಟೂರ್ನಿ ಬಿಸಿಸಿಐ ಅನುಮೋದನೆ ಪಡೆದಿಲ್ಲ.

Stay up to date on all the latest ಕ್ರಿಕೆಟ್ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp