ಆರ್ಸಿಬಿಯೊಂದಿಗೆ ದೀರ್ಘಕಾಲದ ಒಪ್ಪಂದಕ್ಕೆ ಪೂಮಾ ಸಹಿ, ಅಧಿಕೃತ ಕಿಟ್ ಪಾಲುದಾರ!
ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಫ್ರಾಂಚೈಸಿ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಜಾಗತಿಕ ಕ್ರೀಡಾ ಬ್ರಾಂಡ್ ಪೂಮಾ ಜೊತೆ ದೀರ್ಘಕಾಲಿನ ಸಹಭಾಗಿತ್ವಕ್ಕೆ ಸಹಿ ಹಾಕಿದೆ.
Published: 30th March 2021 01:47 PM | Last Updated: 30th March 2021 05:56 PM | A+A A-

ಆರ್ ಸಿಬಿ
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಫ್ರಾಂಚೈಸಿ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಜಾಗತಿಕ ಕ್ರೀಡಾ ಬ್ರಾಂಡ್ ಪೂಮಾ ಜೊತೆ ದೀರ್ಘಕಾಲಿನ ಸಹಭಾಗಿತ್ವಕ್ಕೆ ಸಹಿ ಹಾಕಿದೆ.
ಒಪ್ಪಂದದ ನಿಯಮಗಳ ಪ್ರಕಾರ, ಪೂಮಾ ಲೀಗ್ನ ಮುಂಬರುವ ಋತುವಿನಿಂದ ಆರ್ಸಿಬಿಯ ಅಧಿಕೃತ ಕಿಟ್ ಪಾಲುದಾರರಾಗಲಿದ್ದಾರೆ. ಪೂಮಾ ಈಗಾಗಲೇ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ನಿರಂತರ ಒಡನಾಟ ಹೊಂದಿದೆ.
ಆರ್ಸಿಬಿ ಕುಟುಂಬಕ್ಕೆ ಪೂಮಾವನ್ನು ಸ್ವಾಗತಿಸುವುದು ಅದ್ಭುತವಾಗಿದೆ! ಬಲವಾದ ಕ್ರೀಡಾ ದೃಷ್ಟಿ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಹೊಂದಿರುವ ಜಾಗತಿಕ ಬ್ರ್ಯಾಂಡ್, ಆಫ್ಲೈನ್ ಮತ್ತು ಆನ್ಲೈನ್ ಮೂಲಕ ವ್ಯಾಪಕ ವಿತರಣಾ ಜಾಲ ಹೊಂದಿದೆ ಎಂದು ಕೊಹ್ಲಿ ಉಲ್ಲೇಖಿಸಿದ್ದಾರೆ ಮಾಧ್ಯಮ ಪ್ರಕಟಣೆಯಲ್ಲಿ ಹೇಳುತ್ತಿದ್ದಾರೆ.
When powerhouses join forces to compete. It’s gonna be an amazing ride @pumacricket.#PlayBold #WeAreChallengers #RCBxPUMA pic.twitter.com/g0JDdXaAwv
— Royal Challengers Bangalore (@RCBTweets) March 30, 2021
'ಇಂಡಿಯನ್ ಪ್ರೀಮಿಯರ್ ಲೀಗ್ನ ಅತ್ಯಂತ ಜನಪ್ರಿಯ ತಂಡಗಳಲ್ಲಿ ಒಂದಾದ ಆರ್ಸಿಬಿಯೊಂದಿಗೆ ಪಾಲುದಾರರಾಗಲು ನಾವು ಉತ್ಸುಕರಾಗಿದ್ದೇವೆ. ನಮ್ಮ ಇದೇ ರೀತಿಯ ಬ್ರಾಂಡ್ ನೀತಿಗಳು ಮತ್ತು ತಂಡದ ಬೆಳೆಯುತ್ತಿರುವ ಅಭಿಮಾನಿಗಳ ಸಂಖ್ಯೆ ಮತ್ತು ವ್ಯಾಪಕವಾದ ಸಾಮಾಜಿಕ ಅನುಸರಣೆಯೊಂದಿಗೆ ಆರ್ಸಿಬಿಯನ್ನು ಕ್ರಿಕೆಟ್ ಪಿಚ್ನಲ್ಲಿ ನಮ್ಮ ಆದರ್ಶ ಪಾಲುದಾರರನ್ನಾಗಿ ಮಾಡುತ್ತದೆ ಎಂದು ಪೂಮಾ ಇಂಡಿಯಾ ಮತ್ತು ಆಗ್ನೇಯ ಏಷ್ಯಾ ವ್ಯವಸ್ಥಾಪಕ ನಿರ್ದೇಶಕ ಅಭಿಷೇಕ್ ಗಂಗೂಲಿ ಹೇಳಿದ್ದಾರೆ.
ಏಪ್ರಿಲ್ 9ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಆರ್ಸಿಬಿ ಸೆಣೆಸಲಿವೆ.