ತಂಡಕ್ಕಾಗಿ ದೊಡ್ಡ ರಿಸ್ಕ್ ತೆಗೆದುಕೊಳ್ಳುತ್ತಾನೆ, ಆದರೆ ಅದೇ ಅವನ ಶಕ್ತಿ: ಪಂತ್ ಕುರಿತಂತೆ ಆಕಾಶ್ ಚೋಪ್ರಾ ಮಾತು!

ಭಾರತ ಮತ್ತು ಇಂಗ್ಲೆಂಡ್ ನಡುವೆ ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ಸರಣಿಯಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಹೆಚ್ಚು ಗಮನ ಸೆಳೆದರು. ಕಳೆದ ಎರಡು ಪಂದ್ಯಗಳಲ್ಲಿ ಬ್ಯಾಕ್-ಟು-ಬ್ಯಾಕ್ ಅರ್ಧಶತಕಗಳನ್ನು ಗಳಿಸಿದ್ದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತ್ತು.

Published: 30th March 2021 08:14 AM  |   Last Updated: 30th March 2021 12:30 PM   |  A+A-


Pant

ಪಂತ್

Posted By : Vishwanath S
Source : Online Desk

ಮುಂಬೈ: ಭಾರತ ಮತ್ತು ಇಂಗ್ಲೆಂಡ್ ನಡುವೆ ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ಸರಣಿಯಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಹೆಚ್ಚು ಗಮನ ಸೆಳೆದರು. ಕಳೆದ ಎರಡು ಪಂದ್ಯಗಳಲ್ಲಿ ಬ್ಯಾಕ್-ಟು-ಬ್ಯಾಕ್ ಅರ್ಧಶತಕಗಳನ್ನು ಗಳಿಸಿದ್ದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತ್ತು.

ಮೊದಲು ಬ್ಯಾಟಿಂಗ್ ಮಾಡುವಾಗ ಭಾರತವು ದೊಡ್ಡ ಮೊತ್ತವನ್ನು ದಾಖಲಿಸಲು ಇದು ಸಹಾಯ ಮಾಡಿತು. ಇದಲ್ಲದೆ, ಎರಡೂ ಸಂದರ್ಭಗಳಲ್ಲಿ ಅವರ ಸ್ಫೋಟಕ ಆಟ ಪ್ರಮುಖ ಆಟಗಾರರು ಔಟಾದ ನಂತರ ಇನ್ನಿಂಗ್ಸ್  ತ್ವರಿತ ಕುಸಿತದಿಂದ ಮೇಲೆತ್ತಲು ಸಾಧ್ಯವಾಯಿತು ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ.

ಪಂತ್ ಎರಡು ಇನ್ನಿಂಗ್ಸ್‌ಗಳಲ್ಲಿ 152ರ ಸ್ಟ್ರೈಕ್ ರೇಟ್‌ನಲ್ಲಿ 155 ರನ್ ಗಳಿಸಿದರು. 11 ಸಿಕ್ಸರ್, 8 ಬೌಂಡರಿ ಬಾರಿದ್ದು ಏಕದಿನ ಸರಣಿಯಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಗಳಿಸಿದ ಅತಿ ಹೆಚ್ಚು ಬೌಂಡರಿಯಾಗಿದೆ. ಬಿಕ್ಕಟ್ಟಿನ ಸಂದರ್ಭಗಳಲ್ಲಿ ಅವರ ನಿರ್ಭೀತ ಆಟ ಹಲವಾರು ಕ್ರಿಕೆಟ್ ತಜ್ಞರನ್ನು ಮಂತ್ರಮುಗ್ಧಗೊಳಿಸಿದೆ. ಆಕಾಶ್ ಚೋಪ್ರಾ, ಅಪಾಯಗಳನ್ನು ಎದುರಿಸುತ್ತಿದ್ದರೂ ಸ್ಥಿರ ಆಟಕ್ಕಾಗಿ ಪಂತ್ ಅವರನ್ನು ‘ವಿಶೇಷ ಆಟಗಾರ’ ಎಂದು ಕರೆದಿದ್ದಾರೆ.

ಯುವ ಕ್ರಿಕೆಟಿಗ ‘ಸ್ವಲ್ಪ ಹೆಚ್ಚು ಅಪಾಯವನ್ನು’ ತೆಗೆದುಕೊಳ್ಳುತ್ತಾನೆ, ಅದು ಅವನ ಶಕ್ತಿಯಾಗಿದೆ ಎಂದು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

Stay up to date on all the latest ಕ್ರಿಕೆಟ್ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp