ಐಸಿಸಿ ರ್ಯಾಂಕಿಂಗ್: 9 ಸ್ಥಾನ ಮೇಲೆರಿದ ಭುವನೇಶ್ವರ್, ಟಾಪ್ 100ರಲ್ಲಿ ಸ್ಥಾನ ಪಡೆದ ಪಂತ್!

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದ ಭುವನೇಶ್ವರ್ ಕುಮಾರ್ ಒಂಬತ್ತು ಸ್ಥಾನ ಮೇಲೆರಿದ್ದು ಟಾಪ್ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದ್ದಾರೆ.

Published: 31st March 2021 04:23 PM  |   Last Updated: 31st March 2021 04:23 PM   |  A+A-


Rishabh-Bhuvaneshwar

ರಿಷಬ್ ಪಂತ್-ಭುವನೇಶ್ವರ್ ಕುಮಾರ್

Posted By : Vishwanath S
Source : ANI

ದುಬೈ: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದ ಭುವನೇಶ್ವರ್ ಕುಮಾರ್ ಒಂಬತ್ತು ಸ್ಥಾನ ಮೇಲೆರಿದ್ದು ಟಾಪ್ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದ್ದಾರೆ.

ಅಂತಿಮ ಪಂದ್ಯದಲ್ಲಿ 42ಕ್ಕೆ 3 ವಿಕೆಟ್ ಪಡೆದ ಭಾರತದ ವೇಗಿ ಭುವನೇಶ್ವರ್ ಕುಮಾರ್ ಒಂಬತ್ತು ಸ್ಥಾನಗಳನ್ನು ಮೇಲೇರಿ 11 ನೇ ಸ್ಥಾನವನ್ನು ತಲುಪಿದ್ದಾರೆ. ಇದು ಸೆಪ್ಟೆಂಬರ್ 2017ರಲ್ಲಿ 10ನೇ ಸ್ಥಾನ ಪಡೆದ ನಂತರ ಅವರ ಅತ್ಯುತ್ತಮ ಪಂದ್ಯವಾಗಿದೆ. ಅದೇ ಪಂದ್ಯದಲ್ಲಿ ಶಾರ್ದುಲ್ ಠಾಕೂರ್ 67ಕ್ಕೆ 4 ವಿಕೆಟ್ ಗಳಿಸಿದ್ದರಿಂದ 93ರಿಂದ 80ನೇ ಸ್ಥಾನಕ್ಕೆ ಏರಿದೆ.

ಐಸಿಸಿ ಬೌಲಿಂಗ್ ನಲ್ಲಿ ಟ್ರೆಂಟ್ ಬೌಲ್ಟ್ 737 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. 690 ಅಂಕಗಳೊಂದಿಗೆ ಜಸ್ ಪ್ರೀತ್ ಬುಮ್ರಾ ನಾಲ್ಕನೇ ಸ್ಥಾನದಲ್ಲಿದ್ದಾರೆ. 

ಐಸಿಸಿ ಏಕದಿನ ಬ್ಯಾಟಿಂಗ್ ವಿಭಾಗದಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ 857 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, 837 ಅಂಕಗಳೊಂದಿಗೆ ಪಾಕ್ ನ ಬಾಬರ್ ಅಜಾಂ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು 825 ಅಂಕಗಳೊಂದಿಗೆ ರೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ರಿಷಬ್ ಪಂತ್ 91ನೇ ಸ್ಥಾನಕ್ಕೇರಿದ್ದಾರೆ.

Stay up to date on all the latest ಕ್ರಿಕೆಟ್ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp