ಗಾಯದ ಸಮಸ್ಯೆಯಿಂದ ಶ್ರೇಯಸ್ ಅಯ್ಯರ್ ಐಪಿಎಲ್ ನಿಂದ ಔಟ್; ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ರಿಷಬ್ ಪಂತ್ ನಾಯಕ

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಗಾಯಗೊಂಡಿದ್ದ ಶ್ರೇಯಸ್ ಅಯ್ಯರ್ ಐಪಿಎಲ್ ಟೂರ್ನಿಯಿಂದಲೇ ದೂರಉಳಿದಿರುವ ಹಿನ್ನಲೆಯಲ್ಲಿ ಪ್ರಸಕ್ತ ಸಾಲಿನ ಐಪಿಎಲ್ ಟಿ-20 ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಿಷಬ್ ಪಂತ್ ಮುನ್ನಡೆಸಲಿದ್ದಾರೆ.

Published: 31st March 2021 01:09 PM  |   Last Updated: 31st March 2021 01:31 PM   |  A+A-


Rishabh Pant

ರಿಷಬ್ ಪಂತ್

Posted By : Srinivasamurthy VN
Source : PTI

ನವದೆಹಲಿ: ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಗಾಯಗೊಂಡಿದ್ದ ಶ್ರೇಯಸ್ ಅಯ್ಯರ್ ಐಪಿಎಲ್ ಟೂರ್ನಿಯಿಂದಲೇ ದೂರಉಳಿದಿರುವ ಹಿನ್ನಲೆಯಲ್ಲಿ ಪ್ರಸಕ್ತ ಸಾಲಿನ ಐಪಿಎಲ್ ಟಿ-20 ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಿಷಬ್ ಪಂತ್ ಮುನ್ನಡೆಸಲಿದ್ದಾರೆ.

ಈ ಕುರಿತಂತೆ ಸ್ವತಃ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ, ವಿಕೆಟ್‌ಕೀಪರ್ ಮತ್ತು ಬ್ಯಾಟ್ಸ್‌ಮನ್ ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಟ್ವೀಟ್ ಮಾಡಿದೆ. 

ಇಂಡಿಯನ್ ಪ್ರೀಮಿಯರ್ ಲೀಗ್‌ನ ಈ ಬಾರಿಯ ಸೀಸನ್‌ನಿಂದ ಶ್ರೇಯಸ್ ಐಯ್ಯರ್ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ. ಗಾಯದ ಸಮಸ್ಯೆಯಿಂದ ಶ್ರೇಯಸ್ ಐಯ್ಯರ್ ಬಳಲುತ್ತಿದ್ದು, ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ಅವರು ಆಟವಾಡುತ್ತಿಲ್ಲ. ಶ್ರೇಯಸ್‌ರನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ, ಅವರು ಬೇಗನೆ ಗುಣಮುಖರಾಗಿ ಮತ್ತೆ ತಂಡಕ್ಕೆ ಮರಳುವಂತಾಗಲಿ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಂಗಳವಾರ ಹೇಳಿಕೆ ನೀಡಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಣ ಏಕದಿನ ಪಂದ್ಯದಲ್ಲಿ ಶ್ರೇಯಸ್ ಎಡಭುಜಕ್ಕೆ ಗಾಯವಾಗಿದೆ. ಭುಜದ ನೋವಿಗೆ ಒಳಗಾಗಿದ್ದ ಶ್ರೇಯಸ್ ಅಯ್ಯರ್ ಪ್ರಸಕ್ತ ಸಾಲಿನ ಐಪಿಎಲ್ ಟಿ-20 ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ರಿಷಭ್ ಪಂತ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಡೆಲ್ಲಿ ಕ್ಯಾಪಿಟಲ್ ತಂಡದ ಅಧ್ಯಕ್ಷ ಮತ್ತು ಸಹ ಮಾಲೀಕ ಕಿರಣ್ ಕುಮಾರ್ ಗಾಂಧಿ ಅವರು, 'ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ, ನಮ್ಮ ತಂಡವು ಹೊಸ ಎತ್ತರಕ್ಕೆ ಏರಿತ್ತು. ನಾವು ನಿಜಕ್ಕೂ ಹಾಲಿ ಟೂರ್ನಿಯಲ್ಲಿ ಶ್ರೇಯಸ್ ಅವರ ನಾಯಕತ್ವ ಮತ್ತು ಪ್ರದರ್ಶನವನ್ನು ಮಿಸ್ ಮಾಡಿಕೊಳ್ಳುತ್ತೇವೆ. ಅವರ ಅನುಪಸ್ಥಿತಿಯಲ್ಲಿ ಈ ವರ್ಷ ತಂಡವನ್ನು ಮುನ್ನಡೆಸಲು ನಮ್ಮ ಎಲ್ಲ ಫ್ರಾಂಚೈಸಿಗಳು ರಿಷಬ್ ಪಂತ್ ರನ್ನು ಆಯ್ಕೆ ಮಾಡಿದ್ದೇವೆ.  ಪಂತ್ ಗೆ ಬೆಳೆಯಲು ಇದು ಉತ್ತಮ ಅವಕಾಶ. ಹೊಸ ಜವಾಬ್ದಾರಿಯಲ್ಲಿ ಅವರು ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸುತ್ತೇವೆ ಎಂದು ಹೇಳಿದ್ದಾರೆ.

ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಪಂತ್, 'ದೆಹಲಿ ನಾನು ಬೆಳೆದ ಸ್ಥಳ.. ಆರು ವರ್ಷಗಳ ಹಿಂದೆ ನನ್ನ ಐಪಿಎಲ್ ಪ್ರಯಾಣ ಪ್ರಾರಂಭವಾಗಿದ್ದು ಕೂಡ ಇಲ್ಲಿಂದಲೇ... ದೆಹಲಿ ತಂಡವನ್ನು ಒಂದು ದಿನ ಮುನ್ನಡೆಸುವುದು ನನ್ನ ಕನಸಾಗಿತ್ತು. ಇದೀಗ ಅದು ಈಡೇರುತ್ತಿದೆ ಎಂದು ಪಂತ್ ಹೇಳಿದರು. ಅಂತೆಯೇ ನಾಯಕ ಸ್ಥಾನಕ್ಕೆ ನಾನು ಸಮರ್ಥ ಎಂದು ಪರಿಗಣಿಸಿದ ನಮ್ಮ ತಂಡದ ಮಾಲೀಕರಿಗೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ಅದ್ಭುತ ಕೋಚಿಂಗ್ ಸಿಬ್ಬಂದಿ ಮತ್ತು ನನ್ನ ಸುತ್ತಲಿರುವ ಹಿರಿಯರ ಸಲಹೆಗಳೊಂದಿಗೆ ದೆಹಲಿ ಕ್ಯಾಪಿಟಲ್ಸ್ ತಂಡಕ್ಕೆ ಅತ್ಯುತ್ತಮವಾದದನ್ನು ನೀಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.

ಇನ್ನು ದೆಹಲಿ ತಂಡದ ಮುಖ್ಯ ಕೋಚ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, 'ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಪಂತ್ ಅವರ ಯಶಸ್ಸು ಹೊಸ ಪಾತ್ರವನ್ನು ವಹಿಸಿಕೊಳ್ಳಲು ಅಗತ್ಯವಾದ ವಿಶ್ವಾಸವನ್ನು ನೀಡುತ್ತದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಪಂತ್ ಸಾಧಿಸಿರುವ ಯಶಸ್ಸು ಅವರಿಗೆ ಹೊಸ ಅವಕಾಶಗಳ ಬಾಗಿಲು ತೆರೆದಿದೆ. ಯುವ ರಿಷಭ್‌ಗೆ ಇದು ಒಂದು ಅದ್ಭುತ ಅವಕಾಶ, ಇದು ಹೆಚ್ಚಿನ ಜವಾಬ್ದಾರಿಯೊಂದಿಗೆ ಬರುವ ಹೊಸ ಪಾತ್ರವನ್ನು ವಹಿಸಿಕೊಳ್ಳಲು ಅಗತ್ಯವಾದ ವಿಶ್ವಾಸವನ್ನು ನೀಡುತ್ತದೆ ಎಂದು ಹೇಳಿದರು.

ಅಂತೆಯೇ ಶ್ರೇಯಸ್ ಅಯ್ಯರ್ ರನ್ನು ನಾವು ಮಿಸ್ ಮಾಡಿಕೊಳ್ಳಲ್ಲಿದ್ದೇವೆ. ಆದರೆ ಶೀಘ್ರದಲ್ಲೇ ಅವರನ್ನು ಮೈದಾನದಲ್ಲಿ ನೋಡಲು ಆಶಿಸುತ್ತೇವೆ ಎಂದು ತಂಡದ ಮಾಲೀಕರಾದ ಜಿಂದಾಲ್ ಹೇಳಿದ್ದಾರೆ.  ಒಂದು ತಂಡವಾಗಿ ದೆಹಲಿ ಕ್ಯಾಪಿಟಲ್ಸ್ ಕ್ರಿಕೆಟ್ ನ ಉತ್ಸಾಹಭರಿತ ಮತ್ತು ನಿರ್ಭೀತ ಬ್ರಾಂಡ್ ಆಟವನ್ನು ಆಡುತ್ತದೆ. ರಿಷಭ್ ಪಂತ್ ಅದನ್ನು ಅತ್ಯುತ್ತಮವಾಗಿ ಸಾಕಾರಗೊಳಿಸಲಿದ್ದಾರೆ ಎಂದು ಹೇಳಿದ್ದಾರೆ.

ಏಪ್ರಿಲ್ 9ರಿಂದ ಪ್ರಸಕ್ತ ಸಾಲಿನ ಐಪಿಎಲ್ ಸರಣಿ ಆರಂಭವಾಗುತ್ತಿದೆ. ಚೆನ್ನೈ ಸೂಪರ್ ಕಿಂಗ್ ಮತ್ತು ಡೆಲ್ಲಿ ಡೇರ್‌ಡೆವಿಲ್ಸ್ ನಡುವಣ ಮೊದಲ ಪಂದ್ಯ ಮುಂಬೈನಲ್ಲಿ ನಡೆಯಲಿದೆ.

Stay up to date on all the latest ಕ್ರಿಕೆಟ್ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp