ಐಪಿಎಲ್ 2021: ಶಿಖರ್ ಧವನ್ ಸ್ಫೋಟಕ ಬ್ಯಾಟಿಂಗ್: ಪಂಜಾಬ್ ವಿರುದ್ಧ ದೆಹಲಿಗೆ 7 ವಿಕೆಟ್ ಗಳ ಭರ್ಜರಿ ಜಯ

ಶಿಖರ್ ಧವನ್ ರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ದೆಹಲಿ ಕ್ಯಾಪಿಟಲ್ಸ್ ತಂಡ ಪಂಜಾಬ್ ಕಿಂಗ್ಸ್ ತಂಡದ ವಿರುದ್ದ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಶಿಖರ್ ಧವನ್ ಬ್ಯಾಟಿಂಗ್
ಶಿಖರ್ ಧವನ್ ಬ್ಯಾಟಿಂಗ್

ಅಹ್ಮದಾಬಾದ್: ಶಿಖರ್ ಧವನ್ ರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ದೆಹಲಿ ಕ್ಯಾಪಿಟಲ್ಸ್ ತಂಡ ಪಂಜಾಬ್ ಕಿಂಗ್ಸ್ ತಂಡದ ವಿರುದ್ದ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿ ಪಂಜಾಬ್ ನೀಡಿದ್ದ 167 ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೇವಲ 17.4 ಓವರ್ ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 167 ರನ್ ಪೇರಿಸಿ ಗುರಿ ಮುಟ್ಟಿತು. ದೆಹಲಿಯ ಈ ಗೆಲುವಿನ ಇನ್ನಿಂಗ್ಸ್ ನಲ್ಲಿ ಶಿಖರ್ ಧವನ್ ಪ್ರಮುಖ ಪಾತ್ರ ವಹಿಸಿದರು.  ಧವನ್ 47 ಎಸೆತಗಳಲ್ಲಿ 69 ರನ್ ಗಳಿಸಿ ತಂಡದ ಸುಲಭ ಗೆಲುವಿಗೆ ಕಾರಣರಾದರು. ಆರಂಭಿಕ ಆಟಗಾರ ಪೃಥ್ವಿ ಶಾ 39 ರನ್ ಪೇರಿಸಿ ಉತ್ತಮ ಆರಂಭ ಒದಗಿಸಿಕೊಟ್ಟರು. ಹೆಟ್ಮಿಯರ್ ಕೊನೆಯಲ್ಲಿ ಅಬ್ಬರಿಸಿ 4 ಎಸೆತಗಳಲ್ಲಿ 16 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇನ್ನಿಂಗ್ಸ್ ಆರಂಭದಿಂದಲೂ ಪಂಜಾಬ್ ಬೌಲರ್​ಗಳು ದುಬಾರಿಯಾಗಿದ್ದರು. ಅಲ್ಲದೆ ನಿರ್ಣಾಯಕ ಕ್ಷಣಗಳಲ್ಲಿ ವಿಕೆಟ್ ಉರುಳಿಸುವಲ್ಲಿ ವಿಫಲರಾದರು. ಹರ್​ಪ್ರೀತ್ ಬ್ರರ್ ಮತ್ತು ಮೆರೆಡಿತ್ ಹೊರತುಪಡಿಸಿ ಉಳಿದ ಬೌಲರ್​ಗಳು ದುಬಾರಿ ಎನಿಸಿಕೊಂಡರು. 

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್​ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 166 ರನ್ ದಾಖಲಿಸಿತ್ತು. ಪಂಜಾಬ್ ಪರ ಮಯಾಂಕ್ ಅಗರ್​ವಾಲ್ ಏಕಾಂಗಿ ಹೋರಾಟ ನಡೆಸಿ ತಂಡದ ಮೊತ್ತ ಹೆಚ್ಚಿಸಿದರು. ಮಯಾಂಕ್ ಅಗರ್ವಾಲ್ 58  ಎಸೆತಗಳಲ್ಲಿ 99 ರನ್ ಗಳಿಸಿ ಕೇವಲ 1 ರನ್​ನಿಂದ ಶತಕ ವಂಚಿತರಾದರು. ಡೇವಿಡ್ ಮಲನ್ 26 ರನ್ ದಾಖಲಿಸಿ ತಂಡದ ಮೊತ್ತ 150ರ ಗಡಿ ದಾಟುವಂತೆ ನೋಡಿಕೊಂಡರು.  

ಪಂಜಾಬ್ ಪರ ಉತ್ತಮ ಇನ್ನಿಂಗ್ಸ್ ಆಡಿದ ಮಯಾಂಕ್ ಅಗರ್ವಾಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com