ಕೊರೋನಾ: ಚೆನ್ನೈ ಸೂಪರ್ ಕಿಂಗ್ಸ್ ಪಾಳಯದಲ್ಲಿ ಭೀತಿ ಮೂಡಿಸಿದ್ದ ಪಾಸಿಟಿವ್ ವರದಿ!

ಚೆನ್ನೈ ಸೂಪರ್ ಕಿಂಗ್ಸ್ ಪಾಳಯದಲ್ಲಿ ಕೊರೋನಾ ಪಾಸಿಟಿವ್ ವರದಿ ಭೀತಿ ಮೂಡಿಸಿತ್ತು. ಆದರೆ ಎರಡನೇ ಟೆಸ್ಟ್ ನಲ್ಲಿ ನೆಗೆಟಿವ್ ವರದಿ ಬಂದಿದ್ದು ತಂಡದಲ್ಲಿ ಸಮಾಧಾನದ ಸಂಗತಿಯಾಗಿದೆ. 
ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು
ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ಪಾಳಯದಲ್ಲಿ ಕೊರೋನಾ ಪಾಸಿಟಿವ್ ವರದಿ ಭೀತಿ ಮೂಡಿಸಿತ್ತು. ಆದರೆ ಎರಡನೇ ಟೆಸ್ಟ್ ನಲ್ಲಿ ನೆಗೆಟಿವ್ ವರದಿ ಬಂದಿದ್ದು ತಂಡದಲ್ಲಿ ಸಮಾಧಾನದ ಸಂಗತಿಯಾಗಿದೆ. 

ಬಿಸಿಸಿಐ ಈ ಬಗ್ಗೆ ಸ್ಪಷ್ಟನೆ ನೀಡಿದ್ದು,  "ಚೆನ್ನೈ ಸೂಪರ್ ಕಿಂಗ್ಸ್ ನಲ್ಲಿ ಮೂವರು ಮಂದಿಗೆ ಕೊರೋನಾ ಪಾಸಿಟಿವ್ ವರದಿ ಬಂದಿತ್ತು. ಆದರೆ ಮೇ.03 ರಂದು ಬಂದ ಎರಡನೇ ವರದಿಯಲ್ಲಿ ನೆಗೆಟಿವ್ ಬಂದಿದೆ" ಎಂದು ಹೇಳಿದೆ.

ಮೇ.02 ರಂದು ನಡೆಸಿದ ಮೊದಲ ಪರೀಕ್ಷೆ ವರದಿಯಲ್ಲಿ ಸಿಎಸ್ ಕೆ ಯ ಸಿಇಒ ಕಾಶಿ ವಿಶ್ವನಾಥನ್, ಬೌಲಿಂಗ್ ಕೋಚ್ ಲಕ್ಷ್ಮಿಪತಿ ಬಾಲಾಜಿ ಹಾಗೂ ಬಸ್ ಕ್ಲೀನರ್ ಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಒಂದು ದಿನದ ಬಳಿಕ ಮಾಡಿದ 2 ನೇ ಪರೀಕ್ಷೆಯ ವರದಿಯಲ್ಲಿ ನೆಗೆಟಿವ್ ಬಂದಿದೆ. 

ಇನ್ನು ದೆಹಲಿಯ ಫಿರೋಜ್ ಶಾ ಕೋಟ್ಲ ಮೈದಾನದ ಕೆಲವು ಗ್ರೌಂಡ್ಸ್ ಮನ್ ಗಳಿಗೆ ಕೊರೋನಾ ದೃಢಪಟ್ಟಿದೆ. ಮೇ.04 ರಂದು ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡದ ನಡುವೆ ಐಪಿಎಲ್ ಪಂದ್ಯ ಇದೇ ಕ್ರೀಡಾಂಗಣದಲ್ಲಿ ನಡೆಯುವುದಕ್ಕೂ ಮುನ್ನ ಗ್ರೌಂಡ್ ಮನ್ ಗಳಿಗೆ ಕೊರೋನಾ ದೃಢಪಾಟ್ಟಿದೆ. ಆದರೆ ಡಿಡಿಸಿಎ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಕರ್ತವ್ಯದಲ್ಲಿ ಇರುವ ಗ್ರೌಂಡ್ ಮನ್ ಗಳಿಗೆ ಕೊರೋನಾ ದೃಢಪಟ್ಟಿಲ್ಲ ಎಂದು ಹೇಳಿದೆ. ಲೀಗ್ ಪಂದ್ಯಗಳು ಮುಂದುವರೆಯಲಿವೆ ಎಂದೂ ಬಿಸಿಸಿಐ ಸ್ಪಷ್ಟನೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com