ಶ್ರೀಲಂಕಾ ಆಲ್‌ರೌಂಡರ್ ತಿಸಾರ ಪೆರೆರಾ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ

ಶ್ರೀಲಂಕಾ ಆಲ್‌ರೌಂಡರ್ ತಿಸಾರ ಪೆರೆರಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. 32 ರ ಹರೆಯದ ಕ್ರಿಕೆಟಿಗ ತಮ್ಮ ನಿರ್ಧಾರವನ್ನು ತಿಳಿಸಿ ಸೋಮವಾರ ಶ್ರೀಲಂಕಾ ಕ್ರಿಕೆಟ್‌ಗೆ ಪತ್ರ ಬರೆದಿದ್ದಾರೆ.
ತಿಸಾರ ಪೆರೆರಾ
ತಿಸಾರ ಪೆರೆರಾ

ಕೊಲಂಬೋ: ಶ್ರೀಲಂಕಾ ಆಲ್‌ರೌಂಡರ್ ತಿಸಾರ ಪೆರೆರಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. 32 ರ ಹರೆಯದ ಕ್ರಿಕೆಟಿಗ ತಮ್ಮ ನಿರ್ಧಾರವನ್ನು ತಿಳಿಸಿ ಸೋಮವಾರ ಶ್ರೀಲಂಕಾ ಕ್ರಿಕೆಟ್‌ಗೆ ಪತ್ರ ಬರೆದಿದ್ದಾರೆ.

ಪೆರೆರಾ ಬಾಂಗ್ಲಾದೇಶ ವಿರುದ್ಧದ ಏಕದಿನ ಕ್ರಿಕೆಟ್ ಟೀಂ ಆಯ್ಕೆ ಪಟ್ಟಿಯಲ್ಲಿರಲಿಲ್ಲ. ಅಲ್ಲದೆ 2023 ರಲ್ಲಿ ವಿಶ್ವಕಪ್‌ಗಾಗಿ ಒಂದು ಟೀಂ ರಚಿಸಲು ಕಿರಿಯ ಆಟಗಾರರನ್ನು ಮುಂದೆ ತರುವ ತಂತ್ರದ ಬಗ್ಗೆ ಆಯ್ಕೆದಾರರು ಧ್ವನಿ ಎತ್ತಿದ್ದಾರೆ. ಪೆರೇರಾ ಫ್ರ್ಯಾಂಚೈಸ್ ಕ್ರಿಕೆಟ್ ಆಡುವುದನ್ನು ಮುಂದುವರಿಸುತ್ತಾರೆ.

ಒಟ್ಟಾರೆ 166 ಪಂದ್ಯಗಳಲ್ಲಿ 175 ಏಕದಿನ ವಿಕೆಟ್‌ಗಳನ್ನು ಗಳಿಸಿದ ಮಧ್ಯಮ ವೇಗದ ಬೌಲರ್ ಪೆರೆರಾ ಅವರ ಅವರ ಸ್ಫೋಟಕ ಬ್ಯಾಟಿಂಗ್ ಅನ್ನು ನೆನಪಿಸಿಕೊಳ್ಳಬೇಕು, ಶ್ರೀಲಂಕಾ ತಂಡದ ಮಾಜಿ ನಾಯಕನೂ ಆಗಿದ್ದ ಪೆರೆರಾ 10 ಅರ್ಧಶತಕ ಮತ್ತು ಒಂದು ಶತಕದೊಂದಿಗೆ ಸಿ 2,338 ಏಕದಿನ ರನ್ ಗಳಿಸಿದ್ದಾರೆ.

ಪೆರೆರಾ 2012 ರ ನಂತರ ಟೆಸ್ಟ್ ಕ್ರಿಕೆಟ್ ಆಡಲಿಲ್ಲ ಆದರೆ ವೈಟ್-ಬಾಲ್ ಸೆಟಪ್‌ನಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. ಅವರು 2011 ರಲ್ಲಿ ರನ್ನರ್ ಅಪ್ ಆಗಿದ್ದ ತಂಡದ ಭಾಗವಾಗಿದ್ದರು, ಅವರು ಆ ಪಂದ್ಯದಲ್ಲಿ ಒಂಬತ್ತು ಎಸೆತಗಳಲ್ಲಿ ಅಜೇಯ 22 ರನ್ ಗಳಿಸಿದ್ದರು. ಗೌತಮ್ ಗಂಭೀರ್ ಅವರನ್ನು ಔಟ್ ಮಾಡಿದ್ದರು. 2014 ರಲ್ಲಿ ಶ್ರೀಲಂಕಾ ಭಾರತವನ್ನು ಸೋಲಿಸಿ ಟಿ 20 ವಿಶ್ವಕಪ್ ಗೆದ್ದಿದ್ದ ಪಂದ್ಯದಲ್ಲಿ ಪೆರೆರಾ 14 ಎಸೆತಕ್ಕೆ  23 ರನ್ ಗಳಿಸಿ ಆಟ ಮುಗಿಸಿದರು. ಒಟ್ಟಾರೆಯಾಗಿ, ಅವರು 84 ಟಿ 20 ಐಗಳಲ್ಲಿ, 51 ವಿಕೆಟ್ ಮತ್ತು 1,204 ರನ್ ಗಳನ್ನು ಕಲೆ ಹಾಕಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com