ಐಪಿಎಲ್ ರದ್ದು: ನವೆಂಬರ್‌ನಲ್ಲಿ 3ನೇ ಅಲೆ ಸಾಧ್ಯತೆ ಹಿನ್ನೆಲೆ ಯುಎಇಗೆ ಟಿ20 ವಿಶ್ವಕಪ್ ಶಿಫ್ಟ್‌ಗೆ ಸಿದ್ಧತೆ!

ಬಯೋ ಬಬಲ್ ನಲ್ಲಿದ್ದರೂ ಆಟಗಾರರಿಗೆ ಕೊರೋನಾ ವಕ್ಕರಿಸಿದ್ದರಿಂದ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಿದ ಬೆನ್ನಲ್ಲೇ ಭಾರತದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಅನ್ನು ಯುಎಇಗೆ ಸ್ಥಳಾಂತರಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.
ಕ್ರೀಡಾಂಗಣ
ಕ್ರೀಡಾಂಗಣ

ನವದೆಹಲಿ: ಬಯೋ ಬಬಲ್ ನಲ್ಲಿದ್ದರೂ ಆಟಗಾರರಿಗೆ ಕೊರೋನಾ ವಕ್ಕರಿಸಿದ್ದರಿಂದ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಿದ ಬೆನ್ನಲ್ಲೇ ಭಾರತದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಅನ್ನು ಯುಎಇಗೆ ಸ್ಥಳಾಂತರಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.

ಈ ವರ್ಷದ ಟಿ20 ವಿಶ್ವಕಪ್ ಅನ್ನು ಭಾರತದಿಂದ ಯುಎಇಗೆ ಸ್ಥಳಾಂತರಿಸಲು ಸಜ್ಜಾಗಿದ್ದು, ಭಾಗವಹಿಸುವ ಯಾವುದೇ ತಂಡಗಳಿಗೂ ಇಲ್ಲಿ 'ಆರಾಮದಾಯಕ' ಆಗುವುದಿಲ್ಲ ಎಂದು ಬಿಸಿಸಿಐ ಒಪ್ಪಿಕೊಂಡಂತೆ ಕಾಣುತ್ತಿದೆ. 

ಇದಕ್ಕೆ ಕಾರಣ ಅಕ್ಟೋಬರ್-ನವೆಂಬರ್ ನಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಯಬೇಕಿದೆ. ಆದರೆ ನವೆಂಬರ್ ನಲ್ಲಿ ಕೊರೋನಾ ಮೂರನೇ ಅಲೆ ಸಂಭವ ಸಾಧ್ಯತೆ ಇರುವುದರಿಂದ ಭಾರತೀಯ ಕ್ರಿಕೆಟ್ ಮಂಡಳಿಯು ತಲ್ಲಣಗೊಂಡಿದ್ದು ಯುಎಇಗೆ ಸ್ಥಳಾಂತರಗೊಳ್ಳಲು ಹೆಚ್ಚು-ಕಡಿಮೆ ಒಪ್ಪಿಗೆ ನೀಡಲಾಗಿದೆ.

ಭಾರತದಲ್ಲಿ ನವೆಂಬರ್ನಲ್ಲಿ ಮೂರನೇ ಅಲೆ ಎದುರಾಗುವ ಸಾಧ್ಯತೆಗಳು ಹೆಚ್ಚಿರುವುದರಿಂದ ಪಂದ್ಯಾವಳಿ ಬಹುಶಃ ಯುಎಇಗೆ ಬದಲಾಗಲಿದ್ದು ಭಾರತವೇ ಟೂರ್ನಿಗೆ ಆತಿಥ್ಯ ವಹಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಕಳೆದ ಹಲವು ದಿನಗಳಿಂದ ದಿನಕ್ಕೆ 3 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗುತ್ತಿದ್ದು ಭಾರತದಲ್ಲಿನ ಭೀಕರ ಪರಿಸ್ಥಿತಿ ಹೆಚ್ಚಿನ ಕ್ರಿಕೆಟ್ ಸದಸ್ಯ ಮಂಡಳಿಗಳನ್ನು ಬೆಚ್ಚಿಬೀಳಿಸಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಸಹ ಆಟಗಾರರನ್ನು ಅಪಾಯಕ್ಕೆ ದೂಡಲು ಇಷ್ಟಪಡುವುದಿಲ್ಲ. 

"ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬರದ ಹೊರತು ಹೆಚ್ಚಿನ ಉನ್ನತ ರಾಷ್ಟ್ರಗಳು ಮುಂದಿನ ಆರು ತಿಂಗಳಲ್ಲಿ ಭಾರತ ಪ್ರವಾಸ ಮಾಡಲು ಇಷ್ಟಪಡುವುದಿಲ್ಲ ಎಂದು ಖಚಿತವಾಗಿ ಹೇಳಬಹುದು. ಆದ್ದರಿಂದ ಟೂರ್ನಮೆಂಟ್ ಅನ್ನು ಯುಎಇಗೆ ಸ್ಥಳಾಂತರಿಸಲು ಬಿಸಿಸಿಐ ಒಪ್ಪುತ್ತದೆ ಎಂದು ನಿರೀಕ್ಷಿಸಿದೆ ಎಂದು ಮತ್ತೊಂದು ಮೂಲವು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com