ಸಂಕಷ್ಟದ ಸಮಯದಲ್ಲಿ ನನ್ನ ನೆರವಿಗೆ ಬಂದಿದ್ದು ಐಪಿಎಲ್ ಹಣ: ಕ್ರಿಕೆಟ್ ಆಟಗಾರ ಚೇತನ್ ಸಕಾರಿಯಾ

ತನ್ನ ತಂದೆ ಕೊರೋನಾಗೆ ತುತ್ತಾಗಿದ್ದು ಅವರ ಚಿಕಿತ್ಸೆಗಾಗಿ ಐಪಿಎಲ್ ನಿಂದ ಬಂದ ಹಣವನ್ನು ವ್ಯಯಿಸುತ್ತಿರುವುದಾಗಿ ರಾಜಸ್ಥಾನ ರಾಯಲ್ಸ್ ತಂಡದ ಯುವ ವೇಗಿ ಚೇತನ್ ಸಕಾರಿಯಾ ಹೇಳಿದ್ದಾರೆ. 
ಚೇತನ್ ಸಕಾರಿಯಾ
ಚೇತನ್ ಸಕಾರಿಯಾ

ಗಾಂಧಿನಗರ: ತನ್ನ ತಂದೆ ಕೊರೋನಾಗೆ ತುತ್ತಾಗಿದ್ದು ಅವರ ಚಿಕಿತ್ಸೆಗಾಗಿ ಐಪಿಎಲ್ ನಿಂದ ಬಂದ ಹಣವನ್ನು ವ್ಯಯಿಸುತ್ತಿರುವುದಾಗಿ ರಾಜಸ್ಥಾನ ರಾಯಲ್ಸ್ ತಂಡದ ಯುವ ವೇಗಿ ಚೇತನ್ ಸಕಾರಿಯಾ ಹೇಳಿದ್ದಾರೆ. 

ರಾಜಸ್ತಾನ ರಾಯಲ್ಸ್ ತಂಡದ 23 ವರ್ಷದ ಎಡಗೈ ವೇಗಿ ಚೇತನ್ ಸಕಾರಿಯಾರನ್ನು 1.2 ಕೋಟಿ ಬಿಡ್ ಮಾಡಿ ಖರೀದಿ ಮಾಡಿತ್ತು. ಇನ್ನು ಕೊರೋನಾ ಹೆಚ್ಚಳದಿಂದಾಗಿ ಅರ್ಧಕ್ಕೆ ಮೊಟಕುಗೊಂಡಿರುವ 14ನೇ ಆವೃತ್ತಿಯ ಐಪಿಎಲ್ ನಲ್ಲಿ ಕೆಲ ಪಂದ್ಯಗಳಲ್ಲೂ ಸಕಾರಿಯಾ ಆಡಿದ್ದರು.

ಟೂರ್ನಿಯಿಂದ ಮನೆಗೆ ಸಕಾರಿಯಾ ಹಿಂದಿರುಗುತ್ತಿದ್ದಂತೆ ತಂದೆಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇನ್ನು ಸಂಕಷ್ಟದ ಸಮಯದಲ್ಲಿ ಐಪಿಎಲ್ ನಿಂದ ಬಂದಿರುವ ಹಣದಿಂದ ತಂದೆಯನ್ನು ಗುಜರಾತ್ ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೇನೆ ಎಂದು ಸಕಾರಿಯಾ ಹೇಳಿದ್ದಾರೆ. 

ನಾನು ತುಂಬಾ ಅದೃಷ್ಟಶಾಲಿ ಕಾರಣ ನನ್ನ ತಂದೆಗೆ ಕೊರೋನಾ ಪಾಸಿಟಿವ್ ಬಂದಿದ್ದು ಇಂತಹ ಸಂಕಷ್ಟದ ಸಮಯದಲ್ಲಿ ರಾಜಸ್ತಾನ ಫ್ರಾಂಚೈಸಿ ನೀಡಿದ ಹಣದಿಂದ ಕುಟುಂಬದ ಕಷ್ಟಕಾಲದಲ್ಲಿ ನೆರವಾಗುತ್ತಿದ್ದೇನೆ. ನಮ್ಮದು ಬಡ ಕುಟುಂಬ. ನಮ್ಮ ಅಮ್ಮನಿಗೆ ಕೋಟಿಗೆ ಎಷ್ಟು ಸೊನ್ನೆ ಅಂತ ಗೊತ್ತಿಲ್ಲ. ಅಂತಹದರಲ್ಲಿ ನಾನು ಕೋಟಿ ರುಪಾಯಿ ಸಂಪಾದನೆ ಮಾಡಿದ್ದೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com