ಇನ್ನುಳಿದ 2021ರ ಐಪಿಎಲ್ ಪಂದ್ಯಗಳು ಭಾರತದಲ್ಲಿ ನಡೆಯಲ್ಲ: ಗಂಗೂಲಿ

ಬಯೋ-ಬಬಲ್ ನಲ್ಲಿದ್ದ ಆಟಗಾರರಿಗೂ ಕೊರೋನಾ ವಕ್ಕರಿಸಿದ್ದರಿಂದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಅನಿರ್ಧಿಷ್ಠಾವಧಿಗೆ ಮುಂದೂಡಲಾಗಿದ್ದು ಇದೀಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಇನ್ನುಳಿದ ಪಂದ್ಯಗಳು ಭಾರತದಲ್ಲಿ ನಡೆಯುವುದಿಲ್ಲ ಎಂದು ಖಚಿತಪಡಿಸಿದ್ದಾರೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ(ಬಲಕ್ಕೆ) ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (ಎಡಕ್ಕೆ)
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ(ಬಲಕ್ಕೆ) ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (ಎಡಕ್ಕೆ)

ನವದೆಹಲಿ: ಬಯೋ-ಬಬಲ್ ನಲ್ಲಿದ್ದ ಆಟಗಾರರಿಗೂ ಕೊರೋನಾ ವಕ್ಕರಿಸಿದ್ದರಿಂದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಅನಿರ್ಧಿಷ್ಠಾವಧಿಗೆ ಮುಂದೂಡಲಾಗಿದ್ದು ಇದೀಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಇನ್ನುಳಿದ ಪಂದ್ಯಗಳು ಭಾರತದಲ್ಲಿ ನಡೆಯುವುದಿಲ್ಲ ಎಂದು ಖಚಿತಪಡಿಸಿದ್ದಾರೆ. 

60 ಪಂದ್ಯಗಳ ಪೈಕಿ ಭಾರತದಲ್ಲಿ ಅದಾಗಲೇ 29 ಪಂದ್ಯಗಳು ಪೂರ್ಣವಾಗಿದ್ದು ಇನ್ನು 31 ಪಂದ್ಯಗಳು ನಡೆಯಬೇಕಿದೆ. ಆದರೆ ಭಾರತದಲ್ಲಿ ಕೊರೋನಾ ಎರಡನೇ ಅಲೆ ರೌದ್ರನರ್ತನ ತೋರಿಸುತ್ತಿರುವುದರಿಂದ ಇಲ್ಲಿ ಐಪಿಎಲ್ ನಡೆಸುವುದು ಅಸಾಧ್ಯವಾಗಿದ್ದು ಈ ಹಿನ್ನೆಲೆಯಲ್ಲಿ ಸೌರವ್ ಗಂಗೂಲಿ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. 

ಸದ್ಯ ಭಾರತದಲ್ಲಿ ಟೂರ್ನಿ ಆಯೋಜನೆ ಮಾಡುವುದಿಲ್ಲ ಎಂದು ಹೇಳಿರುವ ಅವರು ಮತ್ತೆ ಎಲ್ಲಿ ಮಾಡಲಾಗುತ್ತದೆ ಎಂಬ ಬಗ್ಗೆಯೂ ಅಂತಿಮ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ ಎಂದರು. 

ಇಂಗ್ಲೆಂಡ್, ಯುಎಇ ಮತ್ತು ಆಸ್ಟ್ರೇಲಿಯಾ ಈ ಮೂರು ರಾಷ್ಟ್ರಗಳಲ್ಲಿ ಐಪಿಎಲ್ ಆಯೋಜಿಸುವ ಬಗ್ಗೆ ಬಿಸಿಸಿಐ ಚಿಂತಿಸುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com