ಟೀಂ ಇಂಡಿಯಾ ಕ್ರಿಕೆಟಿಗ ಪಿಯೂಷ್ ಚಾವ್ಲಾ ತಂದೆ ಕೊರೋನಾಗೆ ಬಲಿ

ಟೀಂ ಇಂಡಿಯಾ ಆಟಗಾರ ಪಿಯೂಷ್ ಚಾವ್ಲಾ ತಂದೆ ಪ್ರಮೋದ್ ಕುಮಾರ್ ಚಾವ್ಲಾ ಕೊರೋನಾಗೆ ಬಲಿಯಾಗಿದ್ದಾರೆ.
ಪ್ರಮೋದ್ ಕುಮಾರ್-ಪಿಯೂಷ್ ಚಾವ್ಲಾ
ಪ್ರಮೋದ್ ಕುಮಾರ್-ಪಿಯೂಷ್ ಚಾವ್ಲಾ

ಟೀಂ ಇಂಡಿಯಾ ಆಟಗಾರ ಪಿಯೂಷ್ ಚಾವ್ಲಾ ತಂದೆ ಪ್ರಮೋದ್ ಕುಮಾರ್ ಚಾವ್ಲಾ ಕೊರೋನಾಗೆ ಬಲಿಯಾಗಿದ್ದಾರೆ. 

ಪ್ರಮೀದ್ ಕುಮಾರ್ ಅವರಿಗೆ ಕೊರೋನಾ ಪಾಸಿಟಿವ್ ಬಂದಿದ್ದರಿಂದ ಅವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 

ತಮ್ಮ ತಂದೆಯ ಸಾವಿನ ಸುದ್ದಿಯನ್ನು ಪಿಯೂಷ್ ಚಾವ್ಲಾ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ನನ್ನ ತಂದೆಯನ್ನು ಕಳೆದುಕೊಂಡಿದ್ದೇನೆ. ಕೊರೋನಾ ವೈರಸ್ ನಿಂದ ನನ್ನ ತಂದೆ ಬಳಲುತ್ತಿದ್ದು ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಎಂದು ಬರೆದುಕೊಂಡಿದ್ದಾರೆ. 

ನನ್ನ ತಂದೆ ಇಲ್ಲದ ಮುಂದಿನ ಬದುಕು ಈ ಹಿಂದೆ ಇದ್ದಂತೆ ಇರುವುದಿಲ್ಲ. ನನ್ನ ಸಾಮರ್ಥ್ಯದ ಆಧಾರ ಸ್ಥಂಭವನ್ನು ಇಂದು ಕಳೆದುಕೊಂಡಿದ್ದೇನೆ ಎಂದು ಪಿಯೂಷ್ ಚಾವ್ಲಾ ಬರೆದುಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com