ಪಾಸಿಟಿವ್ ಬಂದರೆ ಸರಣಿಯಿಂದಲೇ ಔಟ್; ಟೀಂ ಇಂಡಿಯಾ ಆಟಗಾರರಿಗೆ ಬಿಸಿಸಿಐ ಎಚ್ಚರಿಕೆ

ಇಂಗ್ಲೆಂಡ್ ಪ್ರವಾಸ ಸಂಬಂಧ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಆಟಗಾರರು ಕೊರೋನಾ ನಿರ್ಲಕ್ಷಿಸದಂತೆ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದೆ.
ಸೌರವ್ ಗಂಗೂಲಿ
ಸೌರವ್ ಗಂಗೂಲಿ

ಮುಂಬೈ: ಇಂಗ್ಲೆಂಡ್ ಪ್ರವಾಸ ಸಂಬಂಧ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಆಟಗಾರರು ಕೊರೋನಾ ನಿರ್ಲಕ್ಷಿಸದಂತೆ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದೆ. 

ಬ್ರಿಟನ್ ವಿಮಾನ ಏರುವ ಮೊದಲು ಯಾರಿಗಾದರೂ ಪಾಸಿಟಿವ್ ದೃಢಪಟ್ಟರೆ, ಅವರನ್ನು ಇಡೀ ಸರಣಿಯಿಂದ ದೂರ ಇರಿಸಲಾಗುವುದು ಎಂದು ಎಚ್ಚರಿಸಿದೆ. ಕುಟುಂಬ ಸದಸ್ಯರನ್ನು ಕೂಡ ಜಾಗೃತೆಯಿಂದ ನೋಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ.  

ಐಪಿಎಲ್ ಅನ್ನು ಅನಿರ್ದಿಷ್ಟಾವಧಿಗೆ ಮುಂದೂಡಿರುವುದರಿಂದ ಬಿಸಿಸಿಐ ಹೆಚ್ಚು ಜಾಗೃತೆ ವಹಿಸಲಿದೆ ಎಂದು ಸಂಬಂಧಿತ ಅಧಿಕಾರಿಗಳು ತಿಳಿಸಿವೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಇಂಗ್ಲೆಂಡ್ ವಿರುದ್ಧದ ಸುದೀರ್ಘ ಫಾರ್ಮಾಟ್ ಗಾಗಿ ಜಂಬೊ ತಂಡವನ್ನು ಬಿಸಿಸಿಐ ಆಯ್ಕೆ ಮಾಡಿದೆ.    

ಪ್ರಸ್ತುತ ಎಲ್ಲಾ ಆಟಗಾರರು ತಮ್ಮ ಮನೆಗಳಲ್ಲಿದ್ದಾರೆ. ಸರಣಿ ದೀರ್ಘ ಅವಧಿಯಾಗಿರುವ ಕಾರಣ ಐಸೋಲೇಷನ್ ನಂತಹ ನಿರ್ಬಂಧಗಳೊಂದಿಗೆ ಕುಟುಂಬ ಸದಸ್ಯರಿಗೂ ಅನುಮತಿಸಲಾಗಿದೆ. ಕೆಲವೇ ದಿನಗಳಲ್ಲಿ ತಂಡ ವಿಶೇಷ ವಿಮಾನದಲ್ಲಿ ಬ್ರಿಟನ್ಗೆ ಹಾರಲಿದೆ. ಮುಂಬೈಗೆ ಆಗಮಿಸಿದ ನಂತರ 14 ದಿನಗಳ ಕ್ವಾರಂಟೈನ್ಗೆ ಒಳಗಾಗಿ ನಂತರ ಆಟಗಾರರು ವಿಮಾನ ಏರಲಿದ್ದಾರೆ.  

ಮುಂಬೈ ಆಗಮಿಸಿದ  ಆಟಗಾರರಿಗೆ ಎರಡು ಬಾರಿ ಆರ್ಟಿಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಯಾರಿಗಾದರೂ ಪಾಸಿಟಿವ್ ಬಂದರೆ ಅವರು ಭಾರತದಲ್ಲಿಯೇ ಉಳಿಯಬೇಕಾಗುತ್ತದೆ. ಚೇತರಿಕೆಯ ಬ್ರಿಟನ್ಗ ತೆರಳಲು ಚಾರ್ಟರ್ ವಿಮಾನಗಳ ವ್ಯವಸ್ಥೆ ಮಾಡುವುದಿಲ್ಲ ಎಂದು ಬಿಸಿಸಿಐ ಕಡ್ಡಿಮುರಿದಂತೆ ಹೇಳಿದೆ. ಹಾಗಾಗಿ ಆಟಗಾರರು ಮುಂಬೈ ತಲುಪುವವರೆಗೂ ಎಲ್ಲಿಗೂ ತೆರಳದೆ, ಮನೆಯಲ್ಲಿಯೇ ಇರಬೇಕೆಂದು ಟೀಮ್ ಇಂಡಿಯಾ ಫಿಸಿಯೋ ಯೋಗೇಶ್ ಪಾಮರ್ ಸೂಚಿಸಿದ್ದಾರೆ. ಟೀಮ್ ಇಂಡಿಯಾ ತಂಡ ಬ್ರಿಟನ್ ಗೆ ತೆರಳಿದ ನಂತರ ಅಲ್ಲಿ ಇನ್ನೂ 10 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇರಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com