ಮತ್ತೆ ಐಪಿಎಲ್ ನಡೆದರೂ ಇಂಗ್ಲೆಂಡ್ ಆಟಗಾರರು ಭಾಗವಹಿಸುವುದಿಲ್ಲ: ಇಸಿಬಿ

ಮುಂದಿನ ಜೂನ್‌ನಿಂದ ಇಂಗ್ಲೆಂಡ್ ಬಿಡುವಿಲ್ಲದ ಅಂತರರಾಷ್ಟ್ರೀಯ ವೇಳಾಪಟ್ಟಿಯನ್ನು ಹೊಂದಿದೆ ಮತ್ತು ಈ ವರ್ಷ ಐಪಿಎಲ್ ಟಿ 20 ಪಂದ್ಯಾವಳಿಯನ್ನು ಮತ್ತೆ ನಿಗದಿಪಡಿಸಿದರೆ ಅದರಲ್ಲಿ ಇಂಗ್ಲೆಂಡ್ ಆಟಗಾರರು ಆಡಲಾರರು ಎಂದು ಇಸಿಬಿ ಕ್ರಿಕೆಟ್ ನಿರ್ದೇಶಕ ಆಶ್ಲೇ ಗೈಲ್ಸ್ ಹೇಳುತ್ತಾರೆ.
ಇಂಗ್ಲೆಂಡ್ ಆಟಗಾರರು
ಇಂಗ್ಲೆಂಡ್ ಆಟಗಾರರು

ಲಂಡನ್: ಮುಂದಿನ ಜೂನ್‌ನಿಂದ ಇಂಗ್ಲೆಂಡ್ ಬಿಡುವಿಲ್ಲದ ಅಂತರರಾಷ್ಟ್ರೀಯ ವೇಳಾಪಟ್ಟಿಯನ್ನು ಹೊಂದಿದೆ ಮತ್ತು ಈ ವರ್ಷ ಐಪಿಎಲ್ ಟಿ 20 ಪಂದ್ಯಾವಳಿಯನ್ನು ಮತ್ತೆ ನಿಗದಿಪಡಿಸಿದರೆ ಅದರಲ್ಲಿ ಇಂಗ್ಲೆಂಡ್ ಆಟಗಾರರು ಆಡಲಾರರು ಎಂದು ಇಸಿಬಿ ಕ್ರಿಕೆಟ್ ನಿರ್ದೇಶಕ ಆಶ್ಲೇ ಗೈಲ್ಸ್ ಹೇಳುತ್ತಾರೆ.

ಬಯೋ ಬಬಲ್ಸ್ ಆವರಣದಲ್ಲೇ ಅನೇಕ ಕೋವಿಡ್ -19 ಪ್ರಕರಣ ಕಂಡು ಬಂದ ನಂತರ ಐಪಿಎಲ್ ಅನ್ನು ಬಿಸಿಸಿಐ ರದ್ದು ಮಾಡಿತ್ತು. ಈ ವರ್ಷ ಟಿ 20 ಸರಣಿಯನ್ನು  ಪುನರಾರಂಭಿಸಲು ಎರಡು ಅವಕಾಶಗಳಿದೆ. ಒಂದು ಸೆಪ್ಟೆಂಬರ್ ದ್ವಿತೀಯಾರ್ಧದಲ್ಲಿ ಎಂದರೆ ಟಿ 20 ವಿಶ್ವಕಪ್ (ಅಕ್ಟೋಬರ್-ನವೆಂಬರ್) ಮೊದಲು ಅಥವಾ ಇನ್ನೊಂದು  ನವೆಂಬರ್ ಮಧ್ಯಭಾಗದ ನಂತರದಲ್ಲಿ. ಆದರೆ ಇಂಗ್ಲೆಂಡ್‌ನ ಅಗ್ರ ಆಟಗಾರರು ಎರಡೂ ಸಮಯದಲ್ಲಿ ಲಭ್ಯವಿರುವುದಿಲ್ಲ. ಅವರು ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಲ್ಲಿ  ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಪ್ರವಾಸ ಹೊಂದಿದ್ದರೆ, ಟಿ 20 ವಿಶ್ವಕಪ್ ನಂತರ ಆಸ್ಟ್ರೇಲಿಯಾ ವಿರುದ್ಧ ಆಶಸ್ ಸರಣಿಯಲ್ಲಿ ಭಾಗವಹಿಸಲಿದ್ದಾರೆ.

"ನಾವು ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಇಂಗ್ಲೆಂಡ್ ಆಟಗಾರರನ್ನು ಒಳಗೊಳ್ಳುವ ಬಗ್ಗೆ ಯೋಜಿಸುತ್ತಿದ್ದೇವೆ. ನಮಗೆ ಸಂಪೂರ್ಣ ಎಫ್‌ಟಿಪಿ ವೇಳಾಪಟ್ಟಿ ಸಿಕ್ಕಿದೆ. ಆದ್ದರಿಂದ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಪ್ರವಾಸಗಳು ಮುಂದೂಡಿಕೆಯಾದರೆ ಮಾತ್ರ ಆಟಗಾರರು ಲಭ್ಯವಾಗುತ್ತಾರೆ." ಗೈಲ್ಸ್ ಹೇಳಿದ್ದಾರೆ ಅಮಾನತುಗೊಂಡ ಐಪಿಎಲ್‌ನಲ್ಲಿ ವಿವಿಧ ಫ್ರಾಂಚೈಸಿಗಳಲ್ಲಿ 11 ಇಂಗ್ಲಿಷ್‌ ಆಟಗಾರರಿದ್ದರು.

"ಮರುಹೊಂದಿಸಲಾದ ಐಪಿಎಲ್ ಈ ಸಮಯದಲ್ಲಿ ಹೇಗೆ ನಡೆಯಲಿದೆ, ಎಲ್ಲಿ ಅಥವಾ ಯಾವಾಗ ನಡೆಯಲಿದೆಎಂಬುದು ನಮ್ಮಲ್ಲಿ ಯಾರಿಗೂ ತಿಳಿದಿಲ್ಲ. ಆದರೆ ನಾವು ಈ ಬೇಸಿಗೆಯನ್ನು ನ್ಯೂಜಿಲೆಂಡ್ ವಿರುದ್ಧ ಪ್ರಾರಂಭಿಸಲಿದ್ದೇವೆ, ಅಲ್ಲಿಂದಾಚೆ ನಾವು ವಿಳಂಬವಿಲ್ಲದ ವೇಳಾಪಟ್ಟಿಯನ್ನು ಹೊಂದಿದ್ದೇವೆ. ನಾವು ಟಿ 20 ವಿಶ್ವಕಪ್ ಮತ್ತು ಆಶಸ್ ಸೇರಿದಂತೆ ಹಲವಾರು ಪ್ರಮುಖ, ಉನ್ನತ ಮಟ್ಟದ ಕ್ರಿಕೆಟ್ ಸರಣಿಯನ್ನು ಹೊಂದಿದ್ದೇವೆ. ಅದಕ್ಕಾಗಿ ನಾವು ನಮ್ಮ ಆಟಗಾರರನ್ನು ಗಮನಿಸಿಕೊಳ್ಲಬೇಕಿದೆ.

ಐಪಿಎಲ್‌ನಲ್ಲಿ ಪಾಲ್ಗೊಳ್ಳುವಿಕೆಯಿಂದಾಗಿ ಜೂನ್ ಆರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ತಪ್ಪಿಸಿಕೊಳ್ಳಲು ಮ್ಯಾನೇಜ್‌ಮೆಂಟ್ ಈ ಹಿಂದೆ ಒಂದು ಡಜನ್ ಆಟಗಾರರಿಗೆ ಅವಕಾಶ ನೀಡಿದ್ದರಿಂದ ಇಸಿಬಿಯ ವಿಧಾನದಲ್ಲಿನ ಬದಲಾವಣೆಗೆ ಇದು ಸೂಚನೆ ಎನ್ನುವುದನ್ನು ಗೈಲ್ಸ್ ತಳ್ಳಿಹಾಕಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com