ಟೀಂ ಇಂಡಿಯಾದ ಮಾಜಿ ಬೌಲರ್ ಆರ್.ಪಿ.ಸಿಂಗ್ ತಂದೆ ಕೊರೋನಾದಿಂದ ನಿಧನ!

ಭಾರತದ ಮಾಜಿ ವೇಗದ ಬೌಲರ್ ಆರ್.ಪಿ. ಸಿಂಗ್ ಅವರ ತಂದೆ ಶಿವ ಪ್ರಸಾದ್ ಸಿಂಗ್ ಅವರು ಕೊರೋನಾ ವೈರಸ್ ಕಾರಣ ಬುಧವಾರ ನಿಧನರಾದರು. 
ಆರ್.ಪಿ. ಸಿಂಗ್ ಹಾಗೂ ಅವರ ತಂದೆ  ಶಿವ ಪ್ರಸಾದ್ ಸಿಂಗ್
ಆರ್.ಪಿ. ಸಿಂಗ್ ಹಾಗೂ ಅವರ ತಂದೆ ಶಿವ ಪ್ರಸಾದ್ ಸಿಂಗ್

ನವದೆಹಲಿ: ಕೋವಿಡ್-19 ಎರಡನೇ ಅಲೆ ದೇಶಾದ್ಯಂತ ಅಪಾರ ಜೀವಹಾನಿಯನ್ನು ಮಾಡಿದೆ. ಇಲ್ಲಿಯವರೆಗೆ, ಅನೇಕ ಕ್ರಿಕೆಟಿಗರು ಮತ್ತು ಇತರ ಕ್ರೀಡಾಪಟುಗಳು ಸಾಂಕ್ರಾಮಿಕ ರೋಗದಿಂದಾಗಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ಅಂತಹ ಇನ್ನೊಂದು ಹೃದಯವಿದ್ರಾವಕ ಸುದ್ದಿ ಎಂದರೆ ಭಾರತದ ಮಾಜಿ ವೇಗದ ಬೌಲರ್ ಆರ್.ಪಿ.ಸಿಂಗ್ ಅವರ ತಂದೆ ಶಿವ ಪ್ರಸಾದ್ ಸಿಂಗ್ ಅವರು ಕೊರೋನಾ ವೈರಸ್ ಕಾರಣ ಬುಧವಾರ ನಿಧನರಾದರು. 

ಆರ್.ಪಿ.ಸಿಂಗ್ ಅವರ ತಂದೆ ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಕೆಲವು ವಾರಗಳ ಹಿಂದೆ ಕೊರೊನಾವೈರಸ್ ಗೆ ಪಾಸಿಟಿವ್ ವರದಿ ಪಡೆದಿದ್ದರು, ಅವರು ಲಖನೌನ ಮೆದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

"ಇದು ನನ್ನ ತಂದೆ ಶಿವ ಪ್ರಸಾದ್ ಸಿಂಗ್ ಅವರ ನಿಧನವಾದರೆಂದು ಅತ್ಯಂತ ದುಃಖದಿಂದ ತಿಳಿಸುತ್ತೇವೆ. ಕೋವಿಡ್‌ನಿಂದ ಬಳಲುತ್ತಿದ್ದ ಅವರು ಮೇ 12 ರಂದು ಸ್ವರ್ಗಸ್ಥರಾದರು" ಎಂದು ಆರ್.ಪಿ.ಸಿಂಗ್ ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ.

ಇದಕ್ಕೆ ದಿನಗಳ ಹಿಂದೆ ಪಿಯೂಷ್ ಚಾವ್ಲಾ ಅವರ ತಂದೆ ಸಹ ಕೊರೋನಾದಿಂದ ನಿಧನವಾಗಿದ್ದರು, ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಪಿಯೂಷ್ ಚಾವ್ಲಾ ಅವರ ತಂದೆ ಪ್ರಮೋದ್ ಕುಮಾರ್ ಅವರು ಸೋಮವಾರ ಕೊರೊಣಾದಿಂದ ನಿಧನರಾಗಿದ್ದರು. ಅವರು ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಆರ್.ಪಿ. ಸಿಂಗ್ 2018 ರಲ್ಲಿ ಕ್ರಿಕೆಟ್‌ನಿಂದ ನಿವೃತ್ತರಾದರು. ಇದರ ನಂತರ ಅವರು ಈ ವರ್ಷದ ಐಪಿಎಲ್‌ಗಾಗಿ ಸ್ಟಾರ್ ಸ್ಪೋರ್ಟ್ಸ್‌ನ ಹಿಂದಿ ಕಮೆಂಟರಿ ಬೋರ್ಡ್ ಗೆ ಸೇರಿದರು. ಆರ್.ಪಿ.ಸಿಂಗ್ ಅವರಲ್ಲದೆ, ಆಕಾಶ್ ಚೋಪ್ರಾ, ಪಾರ್ಥಿವ್ ಪಟೇಲ್, ಇರ್ಫಾನ್ ಪಠಾಣ್, ಅಜಿತ್ ಅಗರ್ಕರ್, ಡೀಪ್ ದಾಸ್‌ಗುಪ್ತಾ ಐಪಿಎಲ್ 14 ಗಾಗಿ ಸ್ಟಾರ್ ಸ್ಪೋರ್ಟ್ಸ್‌ನ ಹಿಂದಿ ಕಾಮೆಂಟರಿ ತಂಡದ ಭಾಗವಾಗಿದ್ದರು. ಆದಾಗ್ಯೂ, ಐಪಿಎಲ್ ಬಯೋ-ಬಬಲ್ ಒಳಗೆ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳು, ಟಿ 20 ಲೀಗ್ ಅನ್ನು ಮಧ್ಯದಲ್ಲಿ ಅಮಾನತುಗೊಳಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com