'ನಾಯಕನಾಗಿ ತಾಂತ್ರಿಕವಾಗಿ ಅತ್ಯುತ್ತಮ': 'ಕ್ಯಾಪ್ಟನ್' ಸ್ಮಿತ್ ಗೆ ಟಿಮ್ ಪೈನ್ ಬೆಂಬಲ!

ಇಂಗ್ಲೆಂಡ್ ವಿರುದ್ಧದ ಆ್ಯಷಸ್ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಗೆದ್ದರೆ ನಾಯಕತ್ವದಿಂದ ಕೆಳಗಿಳಿಯುವ ಕುರಿತು ಆಸಿಸ್ ನಾಯಕ ಟಿಮ್ ಪೈನ್ ಸುಳಿವು ನೀಡಿದ್ದಾರೆ.
ಟಿಮ್ ಪೈನ್ ಮತ್ತು ಸ್ಚೀವ್ ಸ್ಮಿತ್
ಟಿಮ್ ಪೈನ್ ಮತ್ತು ಸ್ಚೀವ್ ಸ್ಮಿತ್

ಸಿಡ್ನಿ: ಇಂಗ್ಲೆಂಡ್ ವಿರುದ್ಧದ ಆ್ಯಷಸ್ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಗೆದ್ದರೆ ನಾಯಕತ್ವದಿಂದ ಕೆಳಗಿಳಿಯುವ ಕುರಿತು ಆಸಿಸ್ ನಾಯಕ ಟಿಮ್ ಪೈನ್ ಸುಳಿವು ನೀಡಿದ್ದಾರೆ.

ಹೌದು...ಈ ಹಿಂದೆ ನಡೆದ ಟೆಸ್ಟ್ ಸರಣಿಯಲ್ಲಿ ಭಾರತದ ವಿರುದ್ಧ ಹೀನಾಯವಾಗಿ ಸೋಲು ಕಂಡ ನಂತರ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕತ್ವ ಬದಲಾವಣೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದೆ. ಹಾಲಿ ನಾಯಕ ಟಿಮ್ ಪೈನ್ ನಾಯಕತ್ವದ ಕುರಿತು ವ್ಯಾಪಕ ಪರ-ವಿರೋಧ ಚರ್ಚೆಗಳು ನಡೆತ್ತಿರುವಂತೆಯೇ ಇತ್ತ ಸ್ವತಃ ನಾಯಕ ಟಿಮ್ ಪೈನ್ ನಾಯಕತ್ವದಿಂದ ಕೆಳಗಿಳಿಯುವ ಸುಳಿವು ನೀಡಿದ್ದಾರೆ.

ಸ್ಟೀವ್ ಸ್ಮಿತ್ ನಾಯಕತ್ವಕ್ಕೆ ಅತ್ಯಂತ ಅರ್ಹ ಎಂದು ಹೇಳುವ ಮೂಲಕ ಟಿಮ್ ಪೈನ್ ತಾವು ನಾಯಕತ್ವದಿಂದ ಕೆಳಗಿಳಿಯುವ ಕುರಿತು ಸುಳಿವು ನೀಡಿದ್ದಾರೆ. 'ಅವಕಾಶ ಬಂದರೆ ನಾನು ಸಂತೋಷವಾಗಿ ಸ್ಟೀವ್ ಸ್ಮಿತ್‌ಗೆ ನಾಯಕತ್ವ ಹಿಂದಿರುಗಿಸುತ್ತೇನೆ. ನಿಸ್ಸಂಶಯವಾಗಿ ನಾನು ಆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಸ್ಟೀವ್ ಸ್ಮಿತ್ ಅವರ ನಾಯಕತ್ವದಲ್ಲಿ ಆಡಿದ್ದೇನೆ. ನಾಯಕನಾಗಿ ಆತನೋರ್ವ ಅದ್ಭುತ. ನಾಯಕನಾಗಿ ತಾಂತ್ರಿಕವಾಗಿಯೂ ಆತ ಸಾಕಷ್ಟು ಅತ್ಯುತ್ತಮವಾಗಿದ್ದಾರೆ ಎಂದು ಪೈನ್ ಹೇಳಿದ್ದಾರೆ.

ಅಂತೆಯೇ "ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಟ್ಟ ಘಟನೆಯ ನಂತರ ಸ್ಮಿತ್ ನಾಯಕತ್ವದ ಜವಾಬ್ಧಾರಿಯನ್ನು ಮತ್ತೆ ವಹಿಸಿಕೊಳ್ಳಲಿಲ್ಲ. ಆದರೆ ಅವರು ಮತ್ತೆ ಆ ಜವಾಬ್ಧಾರಿಯನ್ನು ವಹಿಸಿಕೊಳ್ಳುವುದಕ್ಕೆ ನಾನು ಬೆಂಬಲ ನೀಡುತ್ತೇನೆ ಎಂದು ಪೈನ್ ಹೇಳಿದ್ದಾರೆ.

ಇನ್ನು ಟಿಮ್ ಪೈನ್ 2018ರಲ್ಲಿ ಆಸ್ಟ್ರೇಲಿಯಾ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬಾಲ್ ಟ್ಯಾಂಪರಿಂಗ್ ಪ್ರಕರಣ ಬಹಿರಂಗವಾದ ಹಿನ್ನೆಲೆಯಲ್ಲಿ ಸ್ಟೀವ್ ಸ್ಮಿತ್ ಅವರನ್ನು ಒಂದು ವರ್ಷ ನಿಷೇಧ ಮಾಡಲಾಗಿತ್ತು. ಅಲ್ಲದೇ ಎರಡು ವರ್ಷ ನಾಯಕತ್ವದಿಂದಲೂ ನಿರ್ಬಂಧ ವಿಧಿಸಲಾಗಿತ್ತು. ಈ ನಿರ್ಬಂಧದ ಅವಧಿ ಮುಕ್ತಾಯದ ಬಳಿಕವೂ ಸ್ಟೀವ್ ಸ್ಮಿತ್‌ಗೆ ನಾಯಕತ್ವ ಜವಾಬ್ಧಾರಿ ನೀಡುವ ಮನಸ್ಸು ಆಸಿಸ್ ಮಂಡಳಿ ಮಾಡಿರಲಿಲ್ಲ.

ಈ ನಡುವೆ ಭಾರತದ ವಿರುದ್ಧದ ಸೋಲು ಟಿಮ್ ಪೈನ್ ನಾಯಕತ್ವಕ್ಕೆ ಕುತ್ತು ತಂದಿದೆ. ಸ್ಟೀವ್ ವಾ ಸೇರಿದಂತೆ ಹಲವು ಮಾಜಿ ಆಟಗಾರರು ಪೈನ್ ನಾಯಕತ್ವವನ್ನು ಟೀಕಿಸಿದ್ದರು. ಆದರೆ ಆಸಿಸ್ ತಂಡದ ಕೋಚ್ ಹಾಗೂ ಮ್ಯಾನೇಜ್‌ಮೆಂಟ್ ಪೈನ್ ಬೆಂಬಲಕ್ಕೆ ನಿಂತಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com