ಟೆಸ್ಟ್ ಚಾಂಪಿಯನ್ ಷಿಪ್ ಅಂಕ ನೀಡಿಕೆ ವ್ಯವಸ್ಥೆ ಕುರಿತು ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅಸಮಾಧಾನ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅಂಕಗಳ ಹಂಚಿಕೆ ವ್ಯವಸ್ಥೆಯನ್ನು ಇಂಗ್ಲೆಂಡ್‌ ತಂಡದ ವೇಗಿ ಸ್ಟುವರ್ಟ್ ಬ್ರಾಡ್ ಪ್ರಶ್ನಿಸಿದ್ದು, ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಎರಡು ಪಂದ್ಯಗಳ ಸರಣಿಗೆ ಐದು ಪಂದ್ಯಗಳ ಆ್ಯಶಸ್ ಸರಣಿ ಹೇಗೆ ಸಮವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಸ್ಟುವರ್ಟ್ ಬ್ರಾಡ್
ಸ್ಟುವರ್ಟ್ ಬ್ರಾಡ್

ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅಂಕಗಳ ಹಂಚಿಕೆ ವ್ಯವಸ್ಥೆಯನ್ನು ಇಂಗ್ಲೆಂಡ್‌ ತಂಡದ ವೇಗಿ ಸ್ಟುವರ್ಟ್ ಬ್ರಾಡ್ ಪ್ರಶ್ನಿಸಿದ್ದು, ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಎರಡು ಪಂದ್ಯಗಳ ಸರಣಿಗೆ ಐದು ಪಂದ್ಯಗಳ ಆ್ಯಶಸ್ ಸರಣಿ ಹೇಗೆ ಸಮವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.

'ಪ್ರೆಸ್ ಅಸೋಸಿಯೇಷನ್' ಜೊತೆ ಸಂದರ್ಶನದಲ್ಲಿ ಮಾತನಾಡಿದ ಸ್ಟುವರ್ಟ್ ಬ್ರಾಡ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಿಜವಾಗಿಯೂ ಒಳ್ಳೆಯ ಪರಿಕಲ್ಪನೆಯಾಗಿದೆ. ಆದರೆ ಈ ಸರಣಿಯ ಅಂಕ ನೀಡಿಕೆ ವ್ಯವಸ್ಥೆಯ ಕುರಿತು ನನಗೆ ಸಾಕಷ್ಟು ಗೊಂದಲವಿದೆ. ಐಸಿಸಿ ಪ್ರತಿ ಸರಣಿಗೆ ಅಂಕಗಳ ನೀಡಿಕೆ ಮಾಡುತ್ತಿದೆ.  ಆದರೆ ಸರಣಿಯಲ್ಲಿನ ಪಂದ್ಯಗಳನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಇದರಿಂದ ಕಡಿಮೆ ಟೆಸ್ಟ್ ಪಂದ್ಯಗಳನ್ನಾಡುವ ತಂಡಗಳಿಗೆ ಅನುಕೂಲವಾದಂತಾಗುತ್ತದೆ ಎಂದು ಹೇಳಿದ್ದಾರೆ.

ಅಂತೆಯೇ ಡಬ್ಲ್ಯೂಟಿಸಿ (ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್) ಪಾಯಿಂಟ್ ಸಿಸ್ಟಮ್ ಅಡಿಯಲ್ಲಿ, ಹೊಂದಾಣಿಕೆಯ ಫಲಿತಾಂಶಗಳು ಮತ್ತು ಸರಣಿಯ ಫಲಿತಾಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಐದು ಪಂದ್ಯಗಳ ಸರಣಿಯಲ್ಲಿ, ಪ್ರತಿ ಪಂದ್ಯದಲ್ಲೂ ಶೇಕಡಾ 20 ರಷ್ಟು ಅಂಕಗಳು ಲಭ್ಯವಿದ್ದರೆ, ಎರಡು  ಪಂದ್ಯಗಳ ಸರಣಿಯಲ್ಲಿ, ಪ್ರತಿ ಪಂದ್ಯದಲ್ಲೂ ಶೇ.50 ಪ್ರತಿಶತದಷ್ಟು ಅಂಕಗಳು ಲಭ್ಯವಿದೆ. ಇದು ಎರಡೂ ಹೇಗೆ ಸಮವಾಗುತ್ತದೆ ಎಂದು ಬ್ರಾಡ್ ಪ್ರಶ್ನಿಸಿದ್ದಾರೆ.

ಇದು ಐಸಿಸಿಯ ಮೊದಲ ಪ್ರಯತ್ನವಾಗಿದ್ದು, ಈ ಕಲ್ಪನೆ ಉತ್ತಮವಾದದ್ದು. ಇದು ಆಟಕ್ಕೆ ಉತ್ತಮ ಸಂದರ್ಭ ಮತ್ತು ಅವಕಾಶವನ್ನು ನೀಡಿದೆ. ಆದರೆ ಹಾಲಿ ಅಂಕ ವ್ಯವಸ್ಥೆಯಲ್ಲಿ 5 ಪಂದ್ಯಗಳ ಸರಣಿಯನ್ನಾಡುವ ತಂಡಗಳು ಫೈನಲ್ ಗೇರುವುದು ತುಂಬಾ ಕಷ್ಟಕರ ಎಂದು ಬ್ರಾಡ್ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಇಂಗ್ಲೆಂಡ್ ಅತಿ ಹೆಚ್ಚು ಟೆಸ್ಟ್ (21) ಆಡಿದೆ. ಭಾರತ 17 ಪಂದ್ಯಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶ ಕೇವಲ ಏಳು ಪಂದ್ಯಗಳನ್ನು ಆಡಿದೆ. ಪ್ರಸ್ತುತ ಇಂಗ್ಲೆಂಡ್ ತಂಡ ಡಬ್ಲ್ಯುಟಿಸಿ ಅಂಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಭಾರತದ ವಿರುದ್ಧದ ನಿರ್ಣಾಯಕ  ಸರಣಿಗಳಲ್ಲಿ ಸೋಲುವ ಮೂಲಕ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಫೈನಲ್ ಆಡುವ ಅವಕಾಶದಿಂದ ವಂಚಿತವಾಗಿವೆ.

ಇದೇ ಜೂನ್ 18 ರಿಂದ 22 ರವರೆಗೆ ಸೌಥ್ಯಾಂಪ್ಟನ್‌ನ ಏಗಾಸ್ ಬೌಲ್‌ನಲ್ಲಿ ನಡೆದ ಉದ್ಘಾಟನಾ ಆವೃತ್ತಿಯ ಚಾಂಪಿಯನ್ ಷಿಪ್ ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಪರಸ್ಪರ ಪ್ರಶಸ್ತಿಗಾಗಿ ಸೆಣಸಲಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com