ಕೊರೋನಾದಿಂದ ತಾಯಿ, ಸೋದರಿ ಕಳೆದುಕೊಂಡಿದ್ದ ವೇದಾಗೆ ಮತ್ತೊಂದು ಶಾಕ್: ಇಂಗ್ಲೆಂಡ್ ಪ್ರವಾಸದಿಂದ ಔಟ್

ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಿಸಿದೆ. 
ಟೀಂ ಇಂಡಿಯಾ
ಟೀಂ ಇಂಡಿಯಾ

ನವದೆಹಲಿ: ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಿಸಿದೆ. 

ಇಂಗ್ಲೆಂಡ್ ವಿರುದ್ಧ ಭಾರತ ಒಂದು ಟೆಸ್ಟ್, ಏಕದಿನ ಹಾಗೂ ಟಿ20 ಸರಣಿಯನ್ನು ಆಡಲಿದೆ. ಇನ್ನು ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಟೆಸ್ಟ್ ಹಾಗೂ ಏಕದಿನ ತಂಡವನ್ನು ಮುನ್ನಡೆಸಲಿದ್ದು ಹರ್ಮನ್ ಪ್ರೀತ್ ಕೌರ್ ಉಪ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. 

ಜೂನ್ 16ರಿಂದ ಬ್ರಿಸ್ಟೋಲ್ ನಲ್ಲಿ ಏಕೈಕ ಟೆಸ್ಟ್ ಪಂದ್ಯ ನಡೆಯಲಿದೆ. ನಂತರ ಜೂನ್ 27ರಿಂದ ಇದೇ ಅಂಗಳದಲ್ಲಿ ಮೂರು ಪಂದ್ಯಗ ಏಕದಿನ ಸರಣಿ ಆರಂಭವಾಗಿದೆ. ಜುಲೈ 11ರಿಂದ ಮೂರು ಪಂದ್ಯಗಳ ಟಿ20 ಸರಣಿ ಪ್ರಾರಂಭವಾಗಲಿದೆ. 

ಟೀಂ ಇಂಡಿಯಾ ಮಹಿಳೆಯರ ಟೆಸ್ಟ್ ಹಾಗೂ ಏಕದಿನ ತಂಡ: 
ಮಿಥಾಲಿ ರಾಜ್‌(ನಾಯಕಿ), ಹರ್ಮನ್‌ಪ್ರೀತ್ ಕೌರ್(ಉಪ ನಾಯಕಿ), ಸ್ಮೃತಿ ಮಂಧಾನ, ಪೂನಮ್‌ ರಾವತ್‌, ಪ್ರಿಯಾ ಪುನಿಯಾ, ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗಸ್‌, ಶೆಫಾಲಿ ವರ್ಮಾ, ಸ್ನೇಹಾ ರಾಣಾ, ತನಿಯಾ ಭಾಟಿಯಾ(ವಿಕೆಟ್ ಕೀಪರ್), ಇಂದ್ರಾಣಿ ರಾಯ್‌(ವಿಕೆಟ್ ಕೀಪರ್), ಜೂಲನ್‌ ಗೋಸ್ವಾಮಿ, ಶಿಖಾ ಪಾಂಡೆ, ಪೂಜಾ ವಸ್ತ್ರಾಕರ್‌, ಅರುಂಧತಿ ರೆಡ್ಡಿ, ಪೂನಮ್‌ ಯಾದವ್‌, ಏಕ್ತಾ ಬಿಷ್ಟ್‌, ರಾಧಾ ಯಾದವ್‌.

ಟೀಂ ಇಂಡಿಯಾ ಮಹಿಳಾ ಟಿ20 ತಂಡ: 
ಹರ್ಮನ್‌ಪ್ರೀತ್‌ ಕೌರ್‌(ನಾಯಕಿ), ಸ್ಮೃತಿ ಮಂಧಾನ, ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗಸ್‌, ಶೆಫಾಲಿ ವರ್ಮಾ, ರಿಚಾ ಘೋಷ್‌, ಹರ್ಲೀನ್‌ ಡಿಯೋಲ್‌, ಶ್ನೇಹ ರಾಣಾ, ತನಿಯಾ ಭಾಟಿಯಾ (ವಿಕೆಟ್ ಕೀಪರ್), ಇಂದ್ರಾಣಿ ರಾಯ್(ವಿಕೆಟ್ ಕೀಪರ್), ಶಿಖಾ ಪಾಂಡೆ, ಪೂಜಾ ವಸ್ತ್ರಾಕರ್‌, ಅರುಂಧತಿ ರೆಡ್ಡಿ, ಪೂನಂ ಯಾಧವ್‌, ಏಕ್ತಾ ಬಿಷ್ಟ್‌, ರಾಧ ಯಾದವ್, ಸಿಮ್ರಾನ್‌ ಡಿಲಿ ಬಹದ್ದೂರ್‌.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com