ಚೆಂಡು ವಿರೂಪ ಪ್ರಕರಣ
ಚೆಂಡು ವಿರೂಪ ಪ್ರಕರಣ

ಚೆಂಡು ವಿರೂಪ ಪ್ರಕರಣ: ಆರೋಪಗಳಿಗೆ ಬೆನ್‌ಕ್ರಾಫ್ಟ್ ಪ್ರತಿಕ್ರಿಯೆ, ಬೌಲರ್ ಸಂಪರ್ಕಿಸಿದ ಕ್ರಿಕೆಟ್ ಆಸ್ಟ್ರೇಲಿಯಾ

ವರ್ಷಗಳ ಹಿಂದೆ ಇಡೀ ಕ್ರಿಕೆಟ್ ಜಗತ್ತೇ ತಲೆತಗ್ಗಿಸುವಂತೆ ಮಾಡಿದ್ದ 'ಚೆಂಡು ವಿರೂಪ ಪ್ರಕರಣ' ಮತ್ತೆ ಸುದ್ದಿಗೆ ಗ್ರಾಸವಾಗುತ್ತಿದ್ದು, ತಮ್ಮ ವಿರುದ್ಧದ ಆರೋಪಗಳಿಗೆ ಆಸಿಸ್ ವೇಗಿ ಕ್ಯಾಮರೂನ್ ಬೆನ್‌ಕ್ರಾಫ್ಟ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬೆನ್ನಲ್ಲೇ ಕ್ರಿಕೆಟ್ ಆಸ್ಟ್ರೇಲಿಯಾ ವೇಗಿಯನ್ನು ಸಂಪರ್ಕಿಸಿ ಮಾಹಿತಿ ಪಡೆದಿದೆ ಎನ್ನಲಾಗಿದೆ.

ಸಿಡ್ನಿ: ವರ್ಷಗಳ ಹಿಂದೆ ಇಡೀ ಕ್ರಿಕೆಟ್ ಜಗತ್ತೇ ತಲೆತಗ್ಗಿಸುವಂತೆ ಮಾಡಿದ್ದ 'ಚೆಂಡು ವಿರೂಪ ಪ್ರಕರಣ' ಮತ್ತೆ ಸುದ್ದಿಗೆ ಗ್ರಾಸವಾಗುತ್ತಿದ್ದು, ತಮ್ಮ ವಿರುದ್ಧದ ಆರೋಪಗಳಿಗೆ ಆಸಿಸ್ ವೇಗಿ ಕ್ಯಾಮರೂನ್ ಬೆನ್‌ಕ್ರಾಫ್ಟ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬೆನ್ನಲ್ಲೇ ಕ್ರಿಕೆಟ್ ಆಸ್ಟ್ರೇಲಿಯಾ ವೇಗಿಯನ್ನು ಸಂಪರ್ಕಿಸಿ ಮಾಹಿತಿ ಪಡೆದಿದೆ ಎನ್ನಲಾಗಿದೆ.

ಹೌದು.. ದಕ್ಷಿಣ ಆಫ್ರಿಕಾ ವಿರುದ್ಧ 2018 ರಲ್ಲಿ ವೇಳೆ ಆಸ್ಟ್ರೇಲಿಯಾದ ಆಟಗಾರರು (ಬಾಲ್ ಟ್ಯಾಂಪರಿಂಗ್) ಚೆಂಡು ವಿರೂಪಗೊಳಿಸಿದ ಪ್ರಕರಣ ಮತ್ತೆ ವಿವಾದದಲ್ಲಿದೆ. ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ಯಾಮರೂನ್ ಬೆನ್‌ಕ್ರಾಫ್ಟ್ ಅವರನ್ನು ಸಂಪರ್ಕಿಸಿ ಈ ವಿಷಯದ ಬಗ್ಗೆ  ಹೆಚ್ಚಿನ ವಿವರಗಳನ್ನು ಕೇಳಿದೆ.

ಈ ಘಟನೆಯ ಬಗ್ಗೆ ಹೆಚ್ಚಿನ ವಿಷಯ ಬೌಲರ್‌ಗಳಿಗೆ ತಿಳಿದಿದೆ ಎಂಬ ಬೆನ್‌ಕ್ರಾಫ್ಟ್ ಹೇಳಿಕೆಯ ನಂತರ ಈ ವಿಷಯವು ಗಮನ ಸೆಳೆದಿದೆ. ಪ್ರಸ್ತುತ ಕೌಂಟಿ ಕ್ರಿಕೆಟ್‌ನಲ್ಲಿ ಡರ್ಹ್ಯಾಮ್‌ ಪರ ಆಡುತ್ತಿರುವ ಕ್ಯಾಮರಾನ್ ಬ್ಯಾನ್‌ಕ್ರಾಫ್ಟ್ ಅವರು, ಗಾರ್ಡಿಯನ್ ಸಂದರ್ಶಕ ಡೊನಾಲ್ಡ್ ಮೆಕ್ರೇ ಅವರಿಗೆ ನೀಡಿದ್ದ ಸಂದರ್ಶನದಲ್ಲಿ  ಹಲವು ಸ್ಫೋಟಕ ಹೇಳಿಕೆ ನೀಡಿದ್ದರು. ಚೆಂಡು ವಿರೂಪ ಪ್ರಕರಣದ ಬಗ್ಗೆ ಬಹುಶಃ ಆಸ್ಟ್ರೇಲಿಯಾದ ಬಹಳಷ್ಟು ಬೌಲರ್‌ಗಳಿಗೆ ಗೊತ್ತಿರಬಹುದು ಎಂದು ಹೇಳಿದ್ದಾರೆ.

'ನೋಡಿ, ನಾನೇನು ಮಾಡಲು ಬಯಸಿದ್ದೆನೋ ಅದು ನನ್ನ ಜವಾಬ್ದಾರಿ. ನನ್ನ ನಡೆಗೆ ನಾನೇ ಹೊಣೆ. ಆದರೆ ನಾನೇನು ಮಾಡಿದ್ದೆನೋ ಅದು ಎಲ್ಲಾ ಬೌಲರ್‌ಗಳಿಗೂ ಲಾಭ ತರುತ್ತಿತ್ತು. ಹೀಗಾಗಿ ನಾವು ಚೆಂಡು ವಿರೂಪಗೊಳಿಸಿದ್ದರ ಬಗ್ಗೆ ಬಹುಶಃ ಇನ್ನೂ ಕೆಲ ಬೌಲರ್‌ಗಳಿಗೆ ಮಾಹಿತಿ ಇರಬಹುದು. ಹೀಗಾಗಿ ಅವರು  ತಾವೇ ಮುಂದೆ ಬಂದು ವಿವರಿಸಬಹುದು ಎಂದು ಸಂದರ್ಶನದಲ್ಲಿ ಹೇಳಿಕೆ ನೀಡಿದ್ದರು. ಆ ಮೂಲಕ ಚೆಂಡು ವಿರೂಪದ ಕುರಿತು ಆಸಿಸ್ ತಂಡದ ಇತರೆ ಆಟಗಾರರಿಗೂ ಮಾಹಿತಿ ಇತ್ತು ಎಂಬುದನ್ನು ಬೆನ್‌ಕ್ರಾಫ್ಟ್ ಹೇಳಿದ್ದಾರೆ.

ತನಿಖೆಗೆ ಮುಂದಾದ ಕ್ರಿಕೆಟ್ ಆಸ್ಟ್ರೇಲಿಯಾ
ಇನ್ನು ಬೆನ್‌ಕ್ರಾಫ್ಟ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಬೆನ್‌ಕ್ರಾಫ್ಟ್ ಅವರ ಹೇಳಿಕೆ ಸಂಬಂಧ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದಿದೆ ಎನ್ನಲಾಗಿದೆ. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೆಲ್ಲಾ ಕ್ರಿಕೆಟಿಗರಿಗೆ ಚೆಂಡೂ ವಿರೂಪ ಮಾಹಿತಿ ಇತ್ತು ಎಂಬ ವಿಚಾರವಾಗಿ ಮತ್ತೆ  ತನಿಖೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕ್ರಿಕೆಟ್ ಆಸ್ಟ್ರೇಲಿಯಾ ನ್ಯಾಷನಲ್ ಟೀಮ್ ನಿರ್ದೇಶಕ ಬೆನ್ ಒಲಿವರ್ ಅವರು, 'ರೆಬೆಕ್ಕಾ ಮುರ್ರೆ ನೇತೃತ್ವದ ಕ್ರಿಕೆಟ್ ಆಸ್ಟ್ರೇಲಿಯಾದ ಇಂಟೆಗ್ರಿಟಿ ಘಟಕವು ಕ್ಯಾಮರಾನ್ ಬ್ಯಾಂಕ್ರಾಫ್ಟ್ ಅವರನ್ನು ಸಂಪರ್ಕಿಸಿದೆ. ಆ ಘಟನೆ ಬಗ್ಗೆ ಸಮಗ್ರ ತನಿಖೆ ನಡೆದಿದ್ದು, ಕ್ರಮ ಕೈಗೊಳ್ಳಲಾಗಿದೆ.  ಹಾಗಿದ್ದರೂ ವಿವಾದಕ್ಕೆ ಸಂಬಂಧಿಸಿದಂತೆ ಯಾರಾದರೂ ಹೊಸ ಮಾಹಿತಿಯನ್ನು ಹೊಂದಿದ್ದರೆ ನಮ್ಮ ಇಂಟೆಗ್ರಿಟಿ ಘಟಕದ ಮುಂದೆ ಬಂದು ತಿಳಿಸಬಹುದಾಗಿದೆ ಎಂದು ಹೇಳಿದ್ದಾರೆ. 

ಏನಿದು ಚೆಂಡು ವಿರೂಪ ಅಥವಾ ಸ್ಯಾಂಡ್ ಪೇಪರ್ ಪ್ರಕರಣ?
ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ನಡೆದಿದ್ದ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ತೃತೀಯ ಟೆಸ್ಟ್‌ ವೇಳೆ ಪಂದ್ಯ ಗೆಲ್ಲುವ ಒತ್ತಡದಲ್ಲಿ ಆಸ್ಟ್ರೇಲಿಯಾವಿತ್ತು. ಹೀಗಾಗಿ ಬ್ಯಾನ್‌ಕ್ರಾಫ್ಟ್‌ ಅವರು ಚೆಂಡಿನ ಹೊರ ಪದರವನ್ನು ಸ್ಯಾಂಡ್ ಪೇಪರ್‌ನಿಂದ ತಿಕ್ಕಿ ಹಾಳುಗೆಡವಿದ್ದರು. ಇದು ವಿಡಿಯೋದಲ್ಲಿ ಸೆರೆಯಾಗಿತ್ತು. ತನಿಖೆ ನಡೆದಾಗ  ಈ ಘಟನೆಯ ರುವಾರಿಗಳಾಗಿ ನಾಯಕ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಸಿಕ್ಕಿಬಿದ್ದಿದ್ದರು. ಹೀಗಾಗಿ ಸ್ಟೀವ್ ಮತ್ತು ಡೇವಿಡ್‌ಗೆ 12 ತಿಂಗಳು, ಬ್ಯಾನ್‌ಕ್ರಾಫ್ಟ್‌ಗೆ 9 ತಿಂಗಳು ನಿಷೇಧ ಶಿಕ್ಷೆಯಾಗಿತ್ತು. ಅಂದಹಾಗೆ 4 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 3-1ರಿಂದ ದಕ್ಷಿಣ ಆಫ್ರಿಕಾ ಗೆದ್ದಿತ್ತು. ಅಂದಿನ ವಿವಾದಾತ್ಮಕ  ಪಂದ್ಯದಲ್ಲಿ ಬೆನ್ ಕ್ರಾಫ್ಟ್ ಜೊತೆಗೆ ಆಸೀಸ್ ತಂಡದಲ್ಲಿ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ಜೋಶ್ ಹೇಜಲ್‌ವುಡ್, ಮಿಚೆಲ್ ಮಾರ್ಶ್ ಮತ್ತು ನಥನ್ ಲಯನ್ ಕೂಡ ಬೌಲರ್‌ಗಳಾಗಿ ತಂಡದಲ್ಲಿದ್ದರು.

ಹೀಗಾಗಿ ಇದೀಗ ಈ ಐದು ವೇಗಿಗಳ ವಿಚಾರಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com