ಭಾರತ-ನ್ಯೂಜಿಲ್ಯಾಂಡ್ ಡಬ್ಲ್ಯುಟಿಸಿ ಫೈನಲ್ ಗೆ 4000 ಅಭಿಮಾನಿಗಳು ಭಾಗವಹಿಸಲು ಅನುಮತಿ

ಭಾರತ- ನ್ಯೂಜಿಲ್ಯಾಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯ 4000 ಅಭಿಮಾನಿಗಳ ಸಮ್ಮುಖದಲ್ಲಿ ನಡೆಯಲಿದೆ ಎಂದು ಹೆಮ್ಸ್ಪಿಯರ್ ಕಂಟ್ರಿ ಕ್ಲಬ್ ನ ಮುಖ್ಯಸ್ಥರಾದ ರಾಡ್ ಬ್ರಾನ್ಸ್‌ಗ್ರೋವ್ ಹೇಳಿದ್ದಾರೆ. 
ಭಾರತದ ಟೆಸ್ಟ್ ಕ್ರಿಕೆಟ್ ತಂಡ (ಸಂಗ್ರಹ ಚಿತ್ರ)
ಭಾರತದ ಟೆಸ್ಟ್ ಕ್ರಿಕೆಟ್ ತಂಡ (ಸಂಗ್ರಹ ಚಿತ್ರ)

ಸೌತಾಂಪ್ಟನ್: ಭಾರತ- ನ್ಯೂಜಿಲ್ಯಾಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯ 4000 ಅಭಿಮಾನಿಗಳ ಸಮ್ಮುಖದಲ್ಲಿ ನಡೆಯಲಿದೆ ಎಂದು ಹೆಮ್ಸ್ಪಿಯರ್ ಕಂಟ್ರಿ ಕ್ಲಬ್ ನ ಮುಖ್ಯಸ್ಥರಾದ ರಾಡ್ ಬ್ರಾನ್ಸ್‌ಗ್ರೋವ್ ಹೇಳಿದ್ದಾರೆ. 

ಬ್ರಿಟನ್ ನಲ್ಲಿ ಕೋವಿಡ್-19 ಪರಿಸ್ಥಿತಿ ಸುಧಾರಿಸಿದೆ,  ಇತ್ತೀಚೆಗಷ್ಟೇ ಲೀಸೆಸ್ಟರ್ಶೈರ್-ಹ್ಯಾಂಪ್ಶೈರ್ ನಡುವೆ ನಡೆದ ಕೌಂಟಿ ಗೇಮ್ ಪಂದ್ಯದಲ್ಲಿ 1,500 ಮಂದಿ ಪ್ರೇಕ್ಷಕರಿಗೆ ಪಂದ್ಯ ವೀಕ್ಷಿಸಲು ಅನುಮತಿ ನೀಡಲಾಗಿತ್ತು. ಜೂ.18 ರಂದು ನಡೆಯಲಿರುವ ಡಬ್ಲ್ಯುಟಿಸಿ ಫೈನಲ್ ಪಂದ್ಯ ಏಗಾಸ್ ಬೌಲ್ ನಲ್ಲಿ ನಡೆಯಲಿದೆ. 

"2019 ರ ಸೆಪ್ಟೆಂಬರ್ ನಿಂದ ಇದೇ ಮೊದಲ ಬಾರಿಗೆ ಇಂದಿನಿಂದ ನಾವು ನಾಲ್ಕು ದಿನಗಳ ಕೌಂಟಿ ಗೇಮ್ ನ್ನು ಪ್ರಾರಂಭಿಸುತ್ತಿದ್ದೇವೆ, ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ಇಂಗ್ಲೆಂಡ್ ನಲ್ಲಿ ಅಭಿಮಾನಿಗಳಿಗೆ ಅವಕಾಶ ನೀಡಲಾಗುತ್ತಿದೆ ಎಂದು ಹ್ಯಾಂಪ್‌ಶೈರ್ ಕೌಂಟಿ ಕ್ಲಬ್ ನ ಮುಖ್ಯಸ್ಥರಾದ ರಾಡ್ ಬ್ರಾನ್ಸ್‌ಗ್ರೋವ್ ಹೇಳಿದ್ದಾರೆ.

ಇಂಗ್ಲೆಂಡ್ ಹಾಗೂ ವ್ಹೇಲ್ಸ್ ಕ್ರಿಕೆಟ್ ಮಂಡಳಿ ಹಾಗೂ ಐಸಿಸಿ ಎಲ್ಲರೂ ಎದುರು ನೋಡುತ್ತಿರುವ ಪಂದ್ಯ ವೀಕ್ಷಣೆಗೆ 4000 ಮಂದಿಗೆ ಅವಕಾಶ ನೀಡಲಾಗುತ್ತಿದೆ ಎಂದು ಬ್ರಾನ್ಸ್ ಗ್ರೋವ್ ಮಾಹಿತಿ ನೀಡಿದೆ.

ಶೇ.50 ರಷ್ಟನ್ನು ಐಸಿಸಿ ತನ್ನ ಸ್ಪಾನ್ಸರ್ ಹಾಗೂ ಇತರ ಪಾಲುದಾರರಿಗೆ ನೀಡುತ್ತದೆ. ಉಳಿದ 2000 ಟಿಕೆಟ್ ಗಳನ್ನು ಮಾರಾಟ ಮಾಡಲಿವೆ" ಎಂದು ಬ್ರಾನ್ಸ್ ಗ್ರೋವ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com