ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಕಾಂಟ್ರ್ಯಾಕ್ಟ್ ಪಟ್ಟಿ ಪ್ರಕಟ: 'ಎ' ಗ್ರೇಡ್ ನಲ್ಲಿ ಹರ್ಮನ್ ಪ್ರೀತ್, ಪೂನಂ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಪರಿಷ್ಕೃತ ಪಟ್ಟಿ ಪ್ರಕಟಿಸಿದ್ದು 19 ಆಟಗಾರ್ತಿಯರು ಕೇಂದ್ರೀಯ ಗುತ್ತಿಗೆಯಲ್ಲಿ ಸ್ಥಾನ ಪಡೆದಿದ್ದಾರೆ. 
ಭಾರತ ಮಹಿಳಾ ತಂಡ
ಭಾರತ ಮಹಿಳಾ ತಂಡ

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಪರಿಷ್ಕೃತ ಪಟ್ಟಿ ಪ್ರಕಟಿಸಿದ್ದು 19 ಆಟಗಾರ್ತಿಯರು ಕೇಂದ್ರೀಯ ಗುತ್ತಿಗೆಯಲ್ಲಿ ಸ್ಥಾನ ಪಡೆದಿದ್ದಾರೆ. 

2020ರ ಅಕ್ಟೋಬರ್ ನಿಂದ 21ರ ಸೆಪ್ಟೆಂಬರ್ ವರೆಗಿನ ಕೇಂದ್ರೀಯ ಗುತ್ತಿಗೆಯನ್ನು ಬಿಸಿಸಿಐ ಪ್ರಕಟಿಸಿದ್ದು ಗ್ರೇಡ್ 'ಎ'ನಲ್ಲಿ ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂದಾನ, ಪೂನಂ ಯಾದವ್ ಸ್ಥಾನಪಡೆದಿದ್ದಾರೆ. ಈ ಆಟಗಾರ್ತಿಯರು ವಾರ್ಷಿಕ 50 ಲಕ್ಷ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ. 

ಶಫಾಲಿ ವರ್ಮಾ, ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ, ದೀಪ್ತಿ ಶರ್ಮಾ, ಪೂನಂ ರಾವತ್, ರಾಜೇಶ್ವರಿ ಗಾಯಕ್ವಾಡ್, ರಾಧಾ ಯಾದವ್, ಶಿಖಾ ಪಾಂಡೆ, ತಾನಿಯಾ ಭಾಟಿಯಾ, ಜೆಮಿಯಾ ರೋಡ್ರಿಗಸ್ ಗ್ರೇಡ್ 'ಬಿ'ನಲ್ಲಿ ಸ್ಥಾನ ಪಡೆದಿದ್ದು ಈ ಆಟಗಾರ್ತಿಯರು ವಾರ್ಷಿಕ 30 ಲಕ್ಷ ರುಪಾಯಿ ಸಂಭಾವನೆ ಪಡೆಯಲಿದ್ದಾರೆ. 

ಗ್ರೇಡ್ 'ಸಿನಲ್ಲಿ ಪ್ರಿಯಾ ಪೂನಿಯಾ, ರಿಚಾ ಘೋಷ್, ಮಾನಸಿ ಜೋಶಿ, ಅರುಂದತಿ ರೆಡ್ಡಿ, ಪೂಜಾ ವಸ್ತ್ರಾಕರ್, ಹರ್ಲಿನ್ ಡಿಯೋಲ್ ಸ್ಥಾನಪಡೆದಿದ್ದರು ಇವರು ವಾರ್ಷಿಕ 10 ಲಕ್ಷ ರೂ. ಸಂಭಾವನೆ ಪಡೆಯಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com