2022 ಏಷ್ಯಾ ಕಪ್‌ಗೆ ಪಾಕಿಸ್ತಾನ ಆತಿಥ್ಯ ಸಾಧ್ಯತೆ: ವರದಿ

2021ರ ಏಷ್ಯಾ ಕಪ್ ಅಧಿಕೃತವಾಗಿ ಮುಂದೂಡಲಾಗುವುದರಿಂದ, ಪಂದ್ಯಾವಳಿ 2022 ಮತ್ತು 23ರಲ್ಲಿ ಸತತ ಎರಡು ಬಾರಿ ಟೂರ್ನಿಗಳು ನಡೆಯಲಿದೆ.
ಏಷ್ಯಾ ಕಪ್
ಏಷ್ಯಾ ಕಪ್

ನವದೆಹಲಿ: 2021ರ ಏಷ್ಯಾ ಕಪ್ ಅಧಿಕೃತವಾಗಿ ಮುಂದೂಡಲಾಗುವುದರಿಂದ, ಪಂದ್ಯಾವಳಿ 2022 ಮತ್ತು 23ರಲ್ಲಿ ಸತತ ಎರಡು ಬಾರಿ ಟೂರ್ನಿಗಳು ನಡೆಯಲಿದೆ. 

ಪಾಕಿಸ್ತಾನವು 2022ರ ಪಂದ್ಯಾವಳಿಯ ಆತಿಥ್ಯ ವಹಿಸುವ ಸಾಧ್ಯತೆಯಿದ್ದರೆ 2023ರಲ್ಲಿ ನಡೆಯಲಿರುವ ಟೂರ್ನಿಗೆ ಶ್ರೀಲಂಕಾ ಆತಿಥ್ಯ ವಹಿಸುತ್ತದೆ ಎಂದು ಇಎಸ್ಪಿಎನ್ಕ್ರಿಕ್ಇನ್ಫೊ ವರದಿ ಮಾಡಿದೆ.

ಈ ವರ್ಷದ ಏಷ್ಯಾ ಕಪ್ ನಡೆದಿದ್ದರೆ. ವರ್ಷದ ಕೊನೆಯಲ್ಲಿ ಭಾರತ ಆತಿಥ್ಯ ವಹಿಸಲಿರುವ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ಭಾಗವಹಿಸುವ ಎಲ್ಲಾ ತಂಡಗಳಿಗೆ ಅಭ್ಯಾಸ ನಡೆಸಲು ಅವಕಾಶ ಸಿಗುತ್ತಿತ್ತು. 

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಟೀಂ ಇಂಡಿಯಾ ಯಶಸ್ವಿಯಾದರೆ ಈ ವರ್ಷದ ಜೂನ್‌ನಲ್ಲಿ ನಡೆಯಬೇಕಿದ್ದ ಏಷ್ಯಾಕಪ್ ಅನ್ನು ಮುಂದೂಡುವ ಸಾಧ್ಯತೆ ಇರುತ್ತದೆ ಎಂದು ಈ ಹಿಂದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಅಧ್ಯಕ್ಷ ಎಹ್ಸಾನ್ ಮಣಿ ಹೇಳಿದ್ದರು. 

ಏಷ್ಯಾ ಕಪ್ ಕಳೆದ ವರ್ಷವೇ ಆಯೋಜನೆಗೆ ಸಜ್ಜಾಗಿತ್ತು ಆದರೆ ಕೊರೋನಾ ಹಿನ್ನೆಲೆಯಲ್ಲಿ ಈ ವರ್ಷಕ್ಕೆ ಮುಂದೂಡಲ್ಪಟ್ಟಿತ್ತು. ಡಬ್ಲ್ಯುಟಿಸಿ ಫೈನಲ್ಸ್ ಜೂನ್‌ನಲ್ಲಿ ನಡೆಯದೆ ಹೋಗಿದ್ದರೆ ಏಷ್ಯಾ ಕಪ್ ಅನ್ನು ಈ ವರ್ಷದ ಜೂನ್ ನಲ್ಲಿ ಆಯೋಜಿಸಲು ಶ್ರೀಲಂಕಾ ಪ್ರಯತ್ನಿಸುತ್ತಿತ್ತು ಎಂದು ಮಣಿ ತಿಳಿಸಿದ್ದರು.

2018 ರ ನಂತರ ಏಷ್ಯಾಕಪ್ ನಡೆದಿಲ್ಲ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ 2020ಕ್ಕೆ ಯೋಜಿಸಲಾದ ಪಂದ್ಯಾವಳಿಯನ್ನು ಮುಂದೂಡಬೇಕಾಯಿತು. ಪಂದ್ಯಾವಳಿಯ ಕೊನೆಯ ಎರಡು ಆವೃತ್ತಿಗಳನ್ನು ಗೆಲ್ಲುವಲ್ಲಿ ಭಾರತ ಯಶಸ್ವಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com