ವೇಳಾಪಟ್ಟಿ 'ಸಂಪೂರ್ಣ ಭರ್ತಿ'ಯಿಂದಾಗಿ 2021ರ ಏಷ್ಯಾ ಕಪ್ ಟೂರ್ನಿ 2023ಕ್ಕೆ ಮುಂದೂಡಿಕೆ

ಕೊರೋನಾ ಮಹಾಮಾರಿಯಿಂದ ಕ್ರಿಕೆಟ್ ಟೂರ್ನಿಗಳ ವೇಳಾಪಟ್ಟಿಯಲ್ಲಿ ನಿರಂತರ ಬದಲಾವಣೆ ಆಗುತ್ತಿರುವ ಹಿನ್ನೆಲೆಯಲ್ಲಿ 2021ರ ಏಷ್ಯಾಕಪ್ ಟೂರ್ನಿಯನ್ನು 2023ಕ್ಕೆ ಮುಂದೂಡಲಾಗಿದೆ.
ಏಷ್ಯಾ ಕಪ್
ಏಷ್ಯಾ ಕಪ್

ದುಬೈ: ಕೊರೋನಾ ಮಹಾಮಾರಿಯಿಂದ ಕ್ರಿಕೆಟ್ ಟೂರ್ನಿಗಳ ವೇಳಾಪಟ್ಟಿಯಲ್ಲಿ ನಿರಂತರ ಬದಲಾವಣೆ ಆಗುತ್ತಿರುವ ಹಿನ್ನೆಲೆಯಲ್ಲಿ 2021ರ ಏಷ್ಯಾಕಪ್ ಟೂರ್ನಿಯನ್ನು 2023ಕ್ಕೆ ಮುಂದೂಡಲಾಗಿದೆ. 

ಈ ವರ್ಷದ ಕಾಂಟಿನೆಂಟಲ್ ಪಂದ್ಯಾವಳಿಯನ್ನು ಪಾಕಿಸ್ತಾನದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸಲಾಯಿತು. ಆದರೆ ದ್ವೀಪ ರಾಷ್ಟ್ರ ಲಂಕಾದಲ್ಲೂ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟೂರ್ನಿ ರದ್ದತಿಗೆ ಕಾರಣವಾಗಿವೆ. ಏಷ್ಯಾಕಪ್ ಆಡಲಿರುವ ಎಲ್ಲಾ ನಾಲ್ಕು ತಂಡಗಳ ವೇಳಾಪಟ್ಟಿ ವರ್ಷದ ಅಂತ್ಯದವರೆಗೆ ನಿಗದಿಯಾಗಿರುವುದರಿಂದ ಈ ವರ್ಷ ಪಂದ್ಯಾವಳಿಗಾಗಿ ವೇಳಾಪಟ್ಟಿ ಹೊಂದಿಸುವುದು ತುಂಬಾ ಕಷ್ಟಕರವಾಗಿದೆ  ಏಷ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ) ಈ ನಿಟ್ಟಿನಲ್ಲಿ ಹೇಳಿಕೆ ನೀಡಿತ್ತು

"ಮಂಡಳಿಯು ಈ ವಿಷಯವನ್ನು ಬಹಳ ಎಚ್ಚರಿಕೆಯಿಂದ ಪರಿಗಣಿಸಿದ್ದು ಟೂರ್ನಿಯನ್ನು ಮುಂದೂಡುವುದು ಮುಂದಿನ ಮಾರ್ಗವಾಗಿದೆ ಎಂದು ನಿರ್ಧರಿಸಿದೆ. ಆದ್ದರಿಂದ ಪಂದ್ಯಾವಳಿಯ ಈ ಆವೃತ್ತಿಯು 2023ರಲ್ಲಿ ನಡೆಯುವ ಸಾಧ್ಯತೆಯಿದೆ. ಏಕೆಂದರೆ ಈಗಾಗಲೇ 2022ರಲ್ಲಿ ಏಷ್ಯಾಕಪ್ ಫಿಕ್ಸ್ ಆಗಿದೆ. ಅದರ ದಿನಾಂಕಗಳನ್ನು ಸರಿಯಾದ ಸಮಯದಲ್ಲಿ ದೃಢೀಕರಿಸಲಾಗುವುದು ಎಂದು ಎಸಿಸಿ ಹೇಳಿಕೆಯಲ್ಲಿ ತಿಳಿಸಿದೆ.

ಈ ವರ್ಷದ ಏಷ್ಯಾಕಪ್ ಟೂರ್ನಿ ಅಕ್ಟೋಬರ್-ನವೆಂಬರ್ನಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗೂ ಮೊದಲು ನಡೆಯಬೇಕಿತ್ತು. 2018ರಿಂದ ಏಷ್ಯಾ ಕಪ್ ನಡೆದಿಲ್ಲ. 2020ಕ್ಕೆ ಯೋಜಿಸಲಾಗಿದ್ದ ಪಂದ್ಯಾವಳಿಯು ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲ್ಪಟ್ಟಿತ್ತು. ಪಂದ್ಯಾವಳಿಯ ಕೊನೆಯ ಎರಡು ಆವೃತ್ತಿಗಳನ್ನು ಭಾರತ ಗೆದ್ದಿತ್ತು.

ಎಸಿಸಿ ಕಾರ್ಯನಿರ್ವಾಹಕ ಮಂಡಳಿ, ಕೋವಿಡ್-19 ಮಹಾಮಾರಿಯಿಂದಾಗುವ ಅಪಾಯಗಳು ಮತ್ತು ನಿರ್ಬಂಧಗಳ ಹಿನ್ನೆಲೆಯಲ್ಲಿ, 2020ರ ಏಷ್ಯಾ ಕಪ್ ಅನ್ನು 2021ಕ್ಕೆ ಮುಂದೂಡುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com