ಟೀಂ ಇಂಡಿಯಾಗೆ ಶುಭ ಸುದ್ದಿ… ಇಂಗ್ಲೆಂಡ್‌ ವಿಮಾನ ಹತ್ತಲಿದ್ದಾರೆ ಕೆ.ಎಲ್.‌ ರಾಹುಲ್‌

ನ್ಯೂಜಿಲೆಂಡ್‌ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್​ ಹಾಗೂ ಇಂಗ್ಲೆಂಡ್ ವಿರುದ್ದದ ಟೆಸ್ಟ್​ ಸರಣಿಯಲ್ಲಿ ಆಡಲು ಇಂಗ್ಲೆಂಡ್‌ ವಿಮಾನ ಹತ್ತಲಿರುವ ಭಾರತ ತಂಡದೊಂದಿಗೆ ಸ್ಟಾರ್ ಆಟಗಾರ ಕೆ.ಎಲ್‌. ರಾಹುಲ್‌ ಕೂಡ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

Published: 24th May 2021 07:46 PM  |   Last Updated: 24th May 2021 07:51 PM   |  A+A-


KL Rahul

ಕೆ.ಎಲ್.ರಾಹುಲ್

Posted By : Lingaraj Badiger
Source : UNI

ಮುಂಬೈ: ನ್ಯೂಜಿಲೆಂಡ್‌ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್​ ಹಾಗೂ ಇಂಗ್ಲೆಂಡ್ ವಿರುದ್ದದ ಟೆಸ್ಟ್​ ಸರಣಿಯಲ್ಲಿ ಆಡಲು ಇಂಗ್ಲೆಂಡ್‌ ವಿಮಾನ ಹತ್ತಲಿರುವ ಭಾರತ ತಂಡದೊಂದಿಗೆ ಸ್ಟಾರ್ ಆಟಗಾರ ಕೆ.ಎಲ್‌. ರಾಹುಲ್‌ ಕೂಡ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

ಇಂಗ್ಲೆಂಡ್‌  ಪ್ರವಾಸಕ್ಕಾಗಿ ಆಯ್ಕೆಗೊಂಡ ಭಾರತ ತಂಡದಲ್ಲಿ ರಾಹುಲ್‌ ಸದಸ್ಯರಾಗಿದ್ದರೂ ಅಪೆಂಡಿಸೈಟಿಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕಾರಣ ಕೆ.ಎಲ್. ರಾಹುಲ್ ಫಿಟ್​ನೆಸ್ ಸಾಬೀತುಪಡಿಸಬೇಕಾಗಿತ್ತು. ಈ ಕ್ರಮದಲ್ಲಿ ಅವರು ಸಂಪೂರ್ಣ ಚೇತರಿಸಿಕೊಂಡಿರುವುದರಿಂದ ತಂಡದ ಜತೆಗೆ ಇಂಗ್ಲೆಂಡ್‌ ಗೆ ತೆರಳಲು ಬಿಸಿಸಿಐ ಹಸಿರು ನಿಶಾನಿ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪೂರ್ಣ ಫಿಟ್‌ನೆಸ್ ಸಾಧಿಸಿದರೆ ರಾಹುಲ್ ತಂಡಕ್ಕೆ ಮರಳಬಹುದು ಎಂದು ತಂಡದ ಆಯ್ಕೆ ಸಮಯದಲ್ಲಿ ಆಯ್ಕೆದಾರರು ಮೊದಲೇ ಹೇಳಿದ್ದರು. ಈ ವರ್ಷ ಐಪಿಎಲ್ ಮಧ್ಯದಲ್ಲಿಯೇ ರಾಹುಲ್ ಅಪೆಂಡಿಸೈಟಿಸ್ ನಿಂದ ಬಳಲುತ್ತಿದ್ದರು. ರಾಹುಲ್ ಕೊನೆಯ ಬಾರಿ 2019ರ ಸೆಪ್ಟೆಂಬರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಡಿದ್ದರು. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯ ತಂಡದಲ್ಲಿದ್ದರೂ, ಫೈನಲ್‌ನಲ್ಲಿ ಆಡಲು ಅವರಿಗೆ ಅವಕಾಶ ಸಿಗಲಿಲ್ಲ. 29 ರ ಹರೆಯದ ರಾಹುಲ್ ಇದುವರೆಗೆ 36 ಟೆಸ್ಟ್ ಪಂದ್ಯಗಳಲ್ಲಿ 2006 ರನ್ ಗಳಿಸಿದ್ದಾರೆ. ಇದರಲ್ಲಿ 5 ಶತಕಗಳು ಹಾಗೂ 11 ಅರ್ಧಶತಕಗಳು ಒಳಗೊಂಡಿದೆ. 

ಭಾರತ ತಂಡ ಜೂನ್ 2ಕ್ಕೆ ಇಂಗ್ಲೆಂಡ್‌ಗೆ ಹೋಲಿದ್ದು, ಅಲ್ಲಿ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್ ಮತ್ತು 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಳ್ಳಲಿದೆ. 


Stay up to date on all the latest ಕ್ರಿಕೆಟ್ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp