ಇಂಗ್ಲೆಂಡ್ ಪ್ರವಾಸ: ಭಾರತ ಪುರುಷ, ಮಹಿಳಾ ಕ್ರಿಕೆಟ್ ತಂಡಕ್ಕೆ ಕಠಿಣ ಕ್ವಾರಂಟೈನ್ ಆರಂಭ

ಮುಂಬರುವ ಇಂಗ್ಲೆಂಡ್ ಪ್ರವಾಸದ ನಿಮಿತ್ತ ಭಾರತ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡ ಕಠಿಣ ಕಠಿಣ ಕ್ವಾರಂಟೈನ್ ಆರಂಭಿಸಿದೆ.
ಟೀಂ ಇಂಡಿಯಾ
ಟೀಂ ಇಂಡಿಯಾ

ನವದೆಹಲಿ: ಮುಂಬರುವ ಇಂಗ್ಲೆಂಡ್ ಪ್ರವಾಸದ ನಿಮಿತ್ತ ಭಾರತ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡ ಕಠಿಣ ಕಠಿಣ ಕ್ವಾರಂಟೈನ್ ಆರಂಭಿಸಿದೆ.

ಭಾರತದ ನಾಯಕ ವಿರಾಟ್ ಕೊಹ್ಲಿ, ಉಪ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರವಿಶಾಸ್ತ್ರಿ ಅವರು ಮಂಗಳವಾರ ಇಂಗ್ಲೆಂಡ್ ತಂಡಕ್ಕೆ ಸೇರಿದ ತಂಡದ ಬಯೋ ಬಬಲ್ ಸೇರಿಕೊಂಡರು. ಅಂತೆಯೇ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸದಸ್ಯರು ಕೂಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಮುಂಬೈನ ಗ್ರ್ಯಾಂಡ್ ಹ್ಯಾಟ್‌ ಹೊಟೆಲ್ ನಲ್ಲಿ ತಮ್ಮ ಎಂಟು ದಿನಗಳ ಕಠಿಣ ಸಂಪರ್ಕತಡೆಯನ್ನು ಆರಂಭಿಸಿದ್ದಾರೆ. ಎಲ್ಲಾ ಆಡುವ ಮತ್ತು ಆಡದ ಸದಸ್ಯರು ಮೂರು ಕೋವಿಡ್ ನೆಗೆಟಿವ್ ಆರ್‌ಟಿ-ಪಿಸಿಆರ್ ಫಲಿತಾಂಶಗಳನ್ನು ಪಡೆದ ಬಳಿಕ ಜೂನ್ 2 ರಂದು ಇಂಗ್ಲೆಂಡ್ ವಿಮಾನ ಹತ್ತುವ  ಸಾಧ್ಯತೆ ಇದೆ.

ಅಂತೆಯೇ ಭಾರತ ಪುರುಷರ ತಂಡವು ಜೂನ್ 18 ರಿಂದ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡಲಿದ್ದು, ಅಂತೆಯೇ ಇಂಗ್ಲೆಂಡ್ ವಿರುದ್ಧ ಪೂರ್ಣ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಜೂನ್ 16 ರಿಂದ ಪ್ರಾರಂಭವಾಗುವ ಮಹಿಳೆಯರ ಒಂದು ಟೆಸ್ಟ್, ಮೂರು ಏಕದಿನ ಮತ್ತು ಟಿ 20  ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಇಂಗ್ಲೆಂಡ್ ಆಟಗಾರ್ತಿಯನ್ನು ಮಹಿಳಾ ವನಿತೆಯರು ಎದುರಿಸಲಿದ್ದಾರೆ.

ಇನ್ನು ಕೋವಿಡ್ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡಿರುವ ವೃದ್ಧಿಮಾನ್ ಸಾಹಾ ಮತ್ತು ಪ್ರಸಾದ್ ಕೃಷ್ಣ ಅವರು ಬಯೋಬಬಲ್ ಸೇರಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೋಚ್ ರವಿ ಶಾಸ್ತ್ರಿ ಕೂಡ ಇದೇ ಬಯೋಬಬಲ್ ನಲ್ಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಪ್ರವಾಸಕ್ಕೆ  ಆಟಗಾರರ ಕುಟುಂಬಗಳಿಗೆ ಅವಕಾಶ ನೀಡುವ ಕುರಿತು ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಈ ಕುರಿತ ಅರ್ಜಿಯೊಂದು ಬಿಸಿಸಿಐ ಮುಂದಿದ್ದು, ಶೀಘ್ರದಲ್ಲೇ ಈ ಕುರಿತು ನಿರ್ಧರಿಸುವ ಸಾಧ್ಯತೆ ಇದೆ ಎಂದು ಬಿಸಿಸಿಐ ಭರವಸೆ ವ್ಯಕ್ತಪಡಿಸಿದೆ. 

ಅಂತೆಯೇ ಭಾರತ ತಂಡ ಇಂಗ್ಲೆಂಡ್‌ಗೆ ತಲುಪಿದ ನಂತರ ಸಂಪರ್ಕ ತಡೆಯ ಅವಧಿಯ ಕುರಿತು ನಿರ್ಧರಿಸಲಾಗುತ್ತದೆ. ಈ ಕುರಿತ ಮಾತುಕತೆ ಇನ್ನೂ ಮುಂದುವರೆದಿದೆ. ಕಠಿಣ ಸಂಪರ್ಕತಡೆಯನ್ನು (ಹೋಟೆಲ್ ಕೋಣೆಗಳಿಗೆ ಸೀಮಿತಗೊಳಿಸಲಾಗಿದೆ) ಸಡಿಲಿಸುವ ಕುರಿತು ಚರ್ಚಿಸಲಾಗುತ್ತಿದೆ. ಕುರಿತು ಮಾಹಿತಿ  ನೀಡಿರುವ ಬಿಸಿಸಿಐ ಅಧಿಕಾರಿಗಳು, 'ನಮ್ಮ ಆಟಗಾರರು ತಮ್ಮ ಕುಟುಂಬಗಳಿಂದ ಮೂರು ತಿಂಗಳು ದೂರವಿರುವುದನ್ನು ನಾವು ಬಯಸುವುದಿಲ್ಲ. ಅವರ ಕುಟುಂಬಸ್ಥರೂ (ಪತ್ನಿ ಮತ್ತು ಮಕ್ಕಳು) ಕೂಡ ಬಯೋಬಬಲ್ ನಲ್ಲಿದ್ದಾರೆ. ಕುಟುಂಬಸ್ಥರಿಂದ ದೂರ ಇರುವುದು ಮಾನಸಿಕ ಆರೋಗ್ಯಕ್ಕೆ ಎಂದಿಗೂ ಉತ್ತಮವಲ್ಲ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com