ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ನ್ಯೂಜಿಲೆಂಡ್-ಭಾರತ ಪಂದ್ಯ ಟೈ ಅಥವಾ ಡ್ರಾ ಆದರೆ ಜಂಟಿ ವಿಜೇತರೆಂದು ಘೋಷಣೆ- ಐಸಿಸಿ

ಬಹು ನಿರೀಕ್ಷಿತ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಡ್ರಾ ಅಥವಾ ಟೈ ಆದರೆ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಣೆ ಮಾಡಲಾಗುತ್ತದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಬಹು ನಿರೀಕ್ಷಿತ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಡ್ರಾ ಅಥವಾ ಟೈ ಆದರೆ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಣೆ ಮಾಡಲಾಗುತ್ತದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಹೇಳಿದೆ.

ಮುಂದಿನ ತಿಂಗಳು ಸೌತಾಂಪ್ಟನ್‌ನ ಹ್ಯಾಂಪ್‌ಶೈರ್ ಬೌಲ್‌ನಲ್ಲಿ ನಡೆಯಲಿರುವ ಫೈನಲ್ ಪಂದ್ಯವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಶುಕ್ರವಾರ ಪ್ರಕಟಿಸಿದ್ದು, ಜೂನ್ 2018 ರಲ್ಲಿ ನಿರ್ಧರಿಸಿದಂತೆ, ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಡ್ರಾ  ಅಥವಾ ಟೈನಲ್ಲಿ ಕೊನೆಗೊಂಡರೆ, ಎರಡೂ ತಂಡಗಳನ್ನು ಜಂಟಿ ವಿಜೇತರಾಗಿ ಘೋಷಣೆ ಮಾಡಿ ಪ್ರಶಸ್ತಿಯನ್ನು ಹಂಚಲಾಗುತ್ತದೆ. 

ಐಸಿಸಿ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಫೈನಲ್ ಪಂದ್ಯ ಡ್ರಾ ಅಥವಾ ಟೈ ಎರಡೂ ತಂಡಗಳನ್ನು ಜಂಟಿ ವಿಜೇತರಾಗಿ ಘೋಷಣೆ ಮಾಡಲಾಗುತ್ತದೆ. ಆ ಮೂಲಕ ಪಂದ್ಯ ಡ್ರಾ ಆದರೆ ಮತ್ತೊಂದು ಪಂದ್ಯ ನಡೆಸುವ ಯಾವುದೇ ಉದ್ದೇಶವಿಲ್ಲ ಎಂದೂ ಐಸಿಸಿ ಸ್ಪಷ್ಟಪಡಿಸಿದೆ. ಜೂನ್ 18 ರಿಂದ 22 ರವರೆಗೆ  ಆಡಲಾಗುವುದು, ಜೂನ್ 23 ಅನ್ನು ಮೀಸಲು ದಿನವೆಂದು ನಿಗದಿಪಡಿಸಲಾಗಿದೆ. ಆದರೆ ಆರನೇ ದಿನ ಅಥವಾ ಮೀಸಲು ದಿನದ ಬಳಕೆ ಮ್ಯಾಚ್ ರೆಫರಿ ವಿವೇಚನೆಗೆ ಬಿಡಲಾಗಿದ್ದು, ಮೀಸಲು ದಿನವನ್ನು ಬಳಸಬೇಕೇ ಎಂಬ ಬಗ್ಗೆ ಅಂತಿಮ ನಿರ್ಧಾರವನ್ನು ಐದನೇ ದಿನದ ಆಟದ ಕೊನೆಯ ಗಂಟೆಯ ಅವಧಿಯಲ್ಲಿ  ಪ್ರಕಟಿಸಲಾಗುವುದು.

ಐಸಿಸಿ ಸೂಚಿಸಿರುವಂತೆ ಐದು ಪೂರ್ಣ ದಿನಗಳ ಆಟದ ನಂತರ ಸಕಾರಾತ್ಮಕ ಫಲಿತಾಂಶವನ್ನು ಸಾಧಿಸದಿದ್ದರೆ ಹೆಚ್ಚುವರಿ ದಿನದ ಆಟ ಇರುವುದಿಲ್ಲ ಮತ್ತು ಅಂತಹ ಸನ್ನಿವೇಶದಲ್ಲಿ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಗುತ್ತದೆ. ಫೈನಲ್‌ ಪಂದ್ಯದ ನಿಯಮಿತ ದಿನಗಳ ಅವಧಿಯಲ್ಲಿ ಕಳೆದು ಹೋದ ಸಮಯವನ್ನು  ಸರಿದೂಗಿಸಲು ಮೀಸಲು ದಿನವನ್ನು ಇರಿಸಲಾಗಿದೆ. ಅಂದರೆ ಜೂನ್ 23 ದಿನಾಂಕವನ್ನು ರಿಸರ್ವ್ ಡೇ ಆಗಿ ಪರಿಗಣಿಸಲಾಗಿದೆ. ಐದು ದಿನಗಳ ಸಂಪೂರ್ಣ ಆಟವನ್ನು ಖಚಿತಪಡಿಸಿಕೊಳ್ಳಲು ಮೀಸಲು ದಿನವನ್ನು ಇರಿಸಲಾಗಿದೆ. ಈ ಕುರಿತು ಮ್ಯಾಚ್ ರೆಫರಿ ನಿರ್ಧರಿಸಲಿದ್ದಾರೆ. ಈ ರಿಸರ್ವ್ ದಿನದ ನಿಬಂಧನೆಗಳನ್ನು  ಮ್ಯಾಚ್ ರೆಫರಿ ತಂಡಗಳಿಗೆ ಮಾಹಿತಿ ನೀಡುತ್ತಾರೆ.

ಐದು ದಿನಗಳ ಆಟಗಳ ಬಳಿಕ ಫಲಿತಾಂಶ ದಾಖಲಿಸಲು ಸಾಧ್ಯವಾಗದಿದ್ದರೆ ಅಂತಹ ಸನ್ನಿವೇಶದಲ್ಲಿ ಡ್ರಾ ಎಂದು ಘೋಷಿಸಲಾಗುವುದು ಎಂದು ಹೇಳಲಾಗಿದೆ. 

ಇನ್ನು ಫೈನಲ್ ಪಂದ್ಯದಲ್ಲಿ ಗ್ರೇಡ್ 1 ಡ್ಯೂಕ್ಸ್ ಕ್ರಿಕೆಟ್ ಚೆಂಡುಗಳನ್ನು ಬಳಸಲಾಗುತ್ತದೆ.  

ಫೈನಲ್ ಪಂದ್ಯಕ್ಕೆ ನೂತನ ನಿಯಮಗಳು ಅನ್ವಯ
ಇನ್ನು ಈ ಫೈನಲ್ ಪಂದ್ಯಕ್ಕೆ ನೂತನ ನಿಯಮಗಳು ಅನ್ವಯವಾಗಲಿದ್ದು, ಈಗಾಗಲೇ ಈ ನಿಯಮಗಳು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ ಸರಣಿನ ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವಿನ ಪಂದ್ಯದೊಂದಿಗೆ ಜಾರಿಗೆ ಬಂದಿದೆ. ಶಾರ್ಟ್ ರನ್-ಮೂರನೇ ಅಂಪೈರ್ ಸ್ವಯಂಪ್ರೇರಿತರಾಗಿ ಆನ್  ಫೀಲ್ಡ್ ಅಂಪೈರ್ ಗಳಿಂದ ಬಂದ ಯಾವುದೇ ಕರೆಯನ್ನು ಪರಿಶೀಲಿಸುತ್ತಾರೆ. ಮುಂದಿನ ಎಸೆತವನ್ನು ಹಾಕುವುದರೊಳಗೆ ಥರ್ಡ್ ಅಂಪೈರ್ ತಮ್ಮ ನಿರ್ಧಾರವನ್ನು ಆನ್-ಫೀಲ್ಡ್ ಅಂಪೈರ್ ಗೆ  ತಿಳಿಸುತ್ತಾರೆ.  

ಪ್ಲೇಯರ್ ರೀವ್ಯೂ: ಎಲ್‌ಬಿಡಬ್ಲ್ಯುಗಾಗಿ ಆಟಗಾರರ ರೀವ್ಯೂ ಪಡೆಯುವ ಮೊದಲು ಫೀಲ್ಡಿಂಗ್ ಕ್ಯಾಪ್ಟನ್ ಅಥವಾ ಔಟ್ ಆದ ಬ್ಯಾಟ್ಸ್‌ಮನ್ ಆನ್ ಫೀಲ್ಡ್ ಅಂಪೈರ್‌ ಜೊತೆ ಚರ್ಚೆ ನಡೆಸಬಹುದು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com