ನಾವು ಆಸ್ಟ್ರೇಲಿಯಾದಲ್ಲಿ ನೀಡಿದಂತಹಾ ಪ್ರದರ್ಶನವನ್ನೇ ನೀಡಲಿದ್ದೇವೆ: ಡಬ್ಲ್ಯೂಟಿಸಿ ಫೈನಲ್ಸ್ ಕುರಿತು ಆರ್.ಅಶ್ವಿನ್
ಮುಂದಿನ ತಿಂಗಳು ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ನಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡಲಿದೆ ಎಂಬ ವಿಶ್ವಾಸ ಟೀಂ ಇಂಡಿಯಾದ ಸ್ಪಿನ್ನರ್ ಆರ್ ಅಶ್ಚಿನ್ ಅವರಿಗಿದೆ.
Published: 29th May 2021 04:10 PM | Last Updated: 29th May 2021 04:42 PM | A+A A-

ಆರ್. ಅಶ್ವಿನ್
ಚೆನ್ನೈ: ಮುಂದಿನ ತಿಂಗಳು ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ನಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡಲಿದೆ ಎಂಬ ವಿಶ್ವಾಸ ಟೀಂ ಇಂಡಿಯಾದ ಸ್ಪಿನ್ನರ್ ಆರ್ ಅಶ್ಚಿನ್ ಅವರಿಗಿದೆ.
ಅಶ್ವಿನ್ ಅವರು ಪ್ರಸ್ತುತ 409 ಟೆಸ್ಟ್ ವಿಕೆಟ್ ಪಡೆದಿದ್ದು ಮುಂಬರುವ ಇಂಗ್ಲೆಂಡ್ ಪ್ರವಾಸದ ಅವಧಿಯಲ್ಲಿ ಹರ್ಭಜನ್ ಸಿಂಗ್ ಅವರ 417ರ ಗುರಿಯನ್ನು ಮೀರಿಸುವ ಅವಕಾಶವನ್ನು ಹೊಂದಿದ್ದಾರೆ, ಇದರಲ್ಲಿ ಡಬ್ಲ್ಯೂಟಿಸಿ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಗಳು ಸೇರಿದೆ.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ, ಮುಂಬೈನಲ್ಲಿಐಸೋಲೇಷನ್ ಬಲ್ಲಿರುವ ಅಶ್ವಿನ್ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾದ ಅವಕಾಶಗಳು, ಅವರ ಬೌಲಿಂಗ್ ಮತ್ತು ಇತರೆ ಮಹತ್ವದ ವಿಚಾರದ ಕುರಿತು ಮಾತನಾಡಿದರು.
ನಿಮ್ಮ ಕುಟುಂಬ ಸದಸ್ಯರು ಕೊರೋನಾದಿಂದ ಚೇತರಿಸಿಕೊಂಡ ಕಾರಣ ನಿಮಗೆ ಸಂತಸವಿದೆ?
ನಮ್ಮ ಸುತ್ತಲೂ ಏನು ನಡೆಯುತ್ತಿದೆ ಎನ್ನುವುದನ್ನು ಕಂಡೂ ಯಾರಾದರೂ ಸಂತೋಷದ ಸ್ಥಿತಿಯಲ್ಲಿರಬಹುದು ಎಂದು ನಾನು ಭಾವಿಸುವುದಿಲ್ಲ. ಇಡೀ ಪರಿಸ್ಥಿತಿಯಲ್ಲಿನನ್ನ ಕುಟುಂಬ ಸದಸ್ಯರು ಅದೃಷ್ಟವಂತರು ಎಂದು ಪರಿಗಣಿಸಬಹುದು ಏಕೆಂದರೆ ಅವರು ಸುಧಾರಿಸಿಕೊಂಡಿದ್ದಾರೆ.
ಆದರೆ ನಾನು ತುಂಬಾ ಹೆಮ್ಮೆಪಡುವ ಒಂದು ವಿಷಯವೆಂದರೆ ಜನರು ಅದನ್ನು ತಮ್ಮ ಸಮಸ್ಯೆ ಎಂದು ತಿಳಿದು ಒಬ್ಬರಿಗೊಬ್ಬರು ನೆರವಾಗುತ್ತಿದ್ದಾರೆ.ಬಹಳಷ್ಟು ಸ್ವಯಂಸೇವಕರು ಸಹಾಯ ಮಾಡುತ್ತಿದ್ದಾರೆ ಎಂದು ನನಗೆ ಖಾತ್ರಿಯಿದೆ. ಜನರು ನೆರವಿಗೆ ಬರುತ್ತಿರುವುದರಿಂದ ಒಬ್ಬರಿಗೊಬ್ಬರು ತಲುಪುತ್ತಿರುವುದರಿಂದ ನಾವು ಭಾರತೀಯರೆನ್ನಲು ನನಗೆ ಹೆಮ್ಮೆ ಇದೆ.
ಮುಂದಿನ ಎರಡು ವರ್ಷಗಳಲ್ಲಿ ಜನರು ಲಸಿಕೆಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಜವಾಬ್ದಾರಿಯುತವಾಗಿ ವರ್ತಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಏಕೆಂದರೆ ಕೋವಿಡ್ ಶೀಘ್ರದಲ್ಲೇ ಮರೆಯಾಗುತ್ತದೆ ಎಂದು ನಾನು ಭಾವಿಸುವುದಿಲ್ಲ.
ಸುತ್ತಲೂ ತುಂಬಾ ಕಠಿಣ ವಾತಾವರಣ ಇರುವಾಗ ಆಡುವುದು ಸಹ ಕಷ್ಟಕರ ಎನಿಸಿದೆಯೆ?
ಆಟಗಾರರಾಗಿ, ನಾವೆಲ್ಲರೂ ಅರಿತುಕೊಂಡ ಒಂದು ವಿಷಯವೆಂದರೆ, ಈ ಎಲ್ಲ ನಕಾರಾತ್ಮಕತೆಯ ನಡುವೆಯೂ, ನಾವು ಜನರ ಮುಖದಲ್ಲಿ ಮಂದಹಾಸ ಮೂಡಿಸಲು ಸಾಧ್ಯವಾಗುತ್ತಿದೆ. ಬಹಳಷ್ಟು ಜನರು ಸಾಮಾನ್ಯ ಜೀವನವನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ನಾವು ಖಂಡಿತವಾಗಿ ಅರ್ಥಮಾಡಿಕೊಳ್ಳುತ್ತೇವೆ. ಆದರೆ ನಾವು ಅವರ ಮುಖದಲ್ಲಿ ನಗುವನ್ನು ಕೂಡ ಹಾಕಬಹುದು ಎಂದು ನಾವು ಅರಿತುಕೊಂಡಿದ್ದೇವೆ, ಅದು ಎಲ್ಲ ಕ್ರಿಕೆಟಿಗರು ಹೆಮ್ಮೆ ಪಡುವಂತಹ ವಿಷಯ.
ತಂಡದೊಳಗಿನ ಪ್ರತಿಯೊಬ್ಬರೂ ಖಂಡಿತವಾಗಿಯೂ ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ ಹೊರಗೆ ಸಮಸ್ಯೆಯಲ್ಲಿ ಸಿಕ್ಕಿರುವ ಜನರಿಗೆ ನಮ್ಮೆಲ್ಲರ ಸಾಂತ್ವನವಿದೆ.
ಡಬ್ಲ್ಯೂಟಿಸಿ ಫೈನಲ್ಸ್ ನಲ್ಲಿ ಭಾರತಕ್ಕೆ ಯಾವ ಬಗೆಯ ಅವಕಾಶವಿದೆ ಎಂದು ನೀವು ಭಾವಿಸಿದ್ದೀರಿ?
ನಾವು ಮೊದಲ ಬಾರಿಗೆ ಅಭ್ಯಾಸ ಮಾಡುವುದಕ್ಕೆ ಮುನ್ನ ಕನಿಷ್ಠ ಇನ್ನೊಂದು ವಾರದಿಂದ 10 ದಿನಗಳವರೆಗೆ ದೂರವಿರುತ್ತೇವೆ. ಐಪಿಎಲ್ ರದ್ದುಗೊಂಡ ನಂತರ ಹೆಚ್ಚಿನ ಆಟಗಾರರು ಕ್ರಿಕೆಟ್ ಆಡಿಲ್ಲ. ಹಾಗಾಗಿ ಅದು ದೊಡ್ಡ ಸವಾಲುಗಳಲ್ಲಿ ಒಂದಾಗಿದೆ ಎಂದು ನಾನು ಭಾವಿಸುತ್ತೇನೆ, ಆದರೆ ಒಮ್ಮೆ ನಾವು ಅಲ್ಲಿಗೆ ಹೋದಾಗ ಟೀಂ ಇಂಡಿಯಾವು ತ್ವರಿತವಾಗಿ ಅಲ್ಲಿಗೆ ಹೊಂದಿಕೊಳ್ಳುತ್ತದೆ. ಅಲ್ಲದೆ ನಾವು ಆಸ್ಟ್ರೇಲಿಯಾದಲ್ಲಿ ನೀಡಿದಂತಹಾ ಪ್ರದರ್ಶನವನ್ನು ನೀಡಲಿದ್ದೇವೆ ಎಂದು ನಾನು ಭಾವಿಸುತ್ತೇನೆ.