ಡಬ್ಲ್ಯೂಟಿಸಿ ಫೈನಲ್: ಜೂನ್ 3ಕ್ಕೆ ಲಂಡನ್ ಗೆ ಭಾರತ, ಜೂನ್ 15ರಂದು ನ್ಯೂಜಿಲೆಂಡ್ ಬಬಲ್ ಪ್ರವೇಶ!

ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೂ ಮೊದಲು ಭಾರತೀಯ ತಂಡವು 'ಕಠಿಣ ಕ್ವಾರಂಟೈನ್'ಯಲ್ಲಿ ಉಳಿಯಲಿದೆ ಎಂದು ಹೇಳಿರುವ ಐಸಿಸಿ ಯಾವ ಸಮಯದಲ್ಲಿ ಎಂದು ನಿಖರವಾಗಿ ಹೇಳಿಲ್ಲ.
ಟೀಂ ಇಂಡಿಯಾ
ಟೀಂ ಇಂಡಿಯಾ

ದುಬೈ: ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೂ ಮೊದಲು ಭಾರತೀಯ ತಂಡವು 'ಕಠಿಣ ಕ್ವಾರಂಟೈನ್'ಯಲ್ಲಿ ಉಳಿಯಲಿದೆ ಎಂದು ಹೇಳಿರುವ ಐಸಿಸಿ ಯಾವ ಸಮಯದಲ್ಲಿ ಎಂದು ನಿಖರವಾಗಿ ಹೇಳಿಲ್ಲ.

ವಿಶ್ವದ ಅಗ್ರ ಎರಡು ಟೆಸ್ಟ್ ತಂಡಗಳು ಜೂನ್ 18-22 ರಿಂದ ಸೌತಾಂಪ್ಟನ್‌ನ ಹ್ಯಾಂಪ್‌ಶೈರ್ ಬೌಲ್‌ನಲ್ಲಿ ಸೆಣೆಸಾಡಲಿವೆ. ಆತಿಥೇಯರ ವಿರುದ್ಧ ದ್ವಿಪಕ್ಷೀಯ ಸರಣಿಗಾಗಿ ನ್ಯೂಜಿಲೆಂಡ್ ಈಗಾಗಲೇ ಇಂಗ್ಲೆಂಡ್‌ನಲ್ಲಿದ್ದರೆ, ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಭಾರತದಲ್ಲಿ 14 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ ನಂತರ ಜೂನ್ 3ರಂದು ಬ್ರಿಟನ್ ಗೆ ಆಗಮಿಸಲಿದೆ ಎಂದು ಪ್ರಕಟಣೆಯಲ್ಲಿ ಬ್ರಿಟನ್ ಸರ್ಕಾರ ತಿಳಿಸಿದೆ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಟೀಂ ಇಂಡಿಯಾ ಆಟಗಾರರು ನೇರವಾಗಿ ಹ್ಯಾಂಪ್‌ಶೈರ್ ಬೌಲ್‌ನಲ್ಲಿರುವ ಆನ್-ಸೈಟ್ ಹೋಟೆಲ್‌ಗೆ ಆಗಮಿಸುತ್ತಾರೆ. ಅಲ್ಲಿ ಕ್ವಾರಂಟೈನ್ ಪ್ರಾರಂಭಿಸುವ ಮೊದಲು ಅವರನ್ನು ಮತ್ತೆ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಐಸಿಸಿ ತಿಳಿಸಿದೆ.

ನ್ಯೂಜಿಲೆಂಡ್ ತಂಡದ ಆಟಗಾರರಿಗೆ ತರಬೇತಿ ನೀಡಲು ಅವಕಾಶ ನೀಡುವ ಮೊದಲು ಇಸಿಬಿ ಇದನ್ನು ಮೂರು ದಿನಗಳ ಕಡ್ಡಾಯ ಕ್ವಾರಂಟೈನ್ ಮಾಡಿತು. ಕ್ವಾರಂಟೈನ್ ಸಮಯದಲ್ಲಿ ನಿಯಮಿತ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಆರು ಆರ್‌ಟಿ-ಪಿಸಿಆರ್ ನೆಗೆಟಿವ್ ಪರೀಕ್ಷೆಗಳೊಂದಿಗೆ ಮುಂಬೈನ ಬಯೋ ಬಬಲ್‌ನಲ್ಲಿ 14 ದಿನಗಳನ್ನು ಪೂರೈಸಿದ ನಂತರ ಭಾರತೀಯ ತಂಡ ಯುಕೆಗೆ ಪ್ರವೇಶಿಸಲಿದೆ.

ಆರ್ ಅಶ್ವಿನ್, ಮಾಯಾಂಕ್ ಅಗರ್ವಾಲ್, ವಾಷಿಂಗ್ಟನ್ ಸುಂದರ್ ಅವರಂತಹ ಕೆಲವು ಆಟಗಾರರಿಗೆ ಒಂದು ವಾರದ ಹೋಂ ಕ್ವಾರಂಟೈನ್ ಮತ್ತು ಮೂರು ನೆಗೆಟಿವ್ ಪರೀಕ್ಷೆಗಳ ನಂತರ ಮೇ 25ರಿಂದ ಹೋಟೆಲ್ ನಲ್ಲಿ ಜಿಮ್ ಉಪಕರಣವನ್ನು ಬಳಸಲು ಅನುಮತಿ ಇದೆ. ಆದಾಗ್ಯೂ, ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಇವರೆಲ್ಲರೂ ತಡವಾಗಿ ಸೇರಿಕೊಂಡರು ಯುಕೆ ವಿಮಾನ ಹತ್ತಲು ಮೊದಲು ಸಂಪೂರ್ಣ ಹೋಂ ಕ್ವಾರಂಟೈನ್ ನಿರ್ಬಂಧವನ್ನು ವಿಧಿಸಲಾಗಿದೆ. ಅಲ್ಲದೆ ಅವರ ಕೋಣೆಗಳ ಒಳಗೆ ಜಿಮ್ ಉಪಕರಣಗಳನ್ನು ಒದಗಿಸಲಾಗಿದೆ.

ನ್ಯೂಜಿಲೆಂಡ್ ತಂಡವು ಜೂನ್ 15ರಂದು ಇಸಿಬಿ ಜೈವಿಕ ಸುರಕ್ಷಿತ ಪರಿಸರದಿಂದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಬಬಲ್‌ಗೆ ಬದಲಾಗಲಿದೆ. ಸೌತಾಂಪ್ಟನ್‌ಗೆ ಆಗಮಿಸುವ ಮೊದಲು ಮತ್ತು ನಂತರದ ನಿಯಮಿತ ಪರೀಕ್ಷೆಗೆ ಒಳಪಡಿಸಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com