T20 World Cup: ಕಳಪೆ ಪ್ರದರ್ಶನಕ್ಕೂ ಐಪಿಎಲ್ ಬ್ಯಾನ್ ಗೂ ಏನು ಸಂಬಂಧ? - ಗೌತಮ್ ಗಂಭೀರ್

ಕೊಹ್ಲಿ ಬ್ರಿಗೇಡ್ ವಿರುದ್ಧ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೋಪಗೊಂಡಿದ್ದಾರೆ. ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧ ಹೀನಾಯವಾಗಿ ಸೋತ ನಂತರ ಟೀಂ ಇಂಡಿಯಾದ ಮೇಲೆ ಟೀಕಾ ಪ್ರಹಾರ ಮಾಡುತ್ತಿದ್ದಾರೆ.
ಗೌತಮ್ ಗಂಭೀರ್
ಗೌತಮ್ ಗಂಭೀರ್

ನವದೆಹಲಿ: ಕೊಹ್ಲಿ ಬ್ರಿಗೇಡ್ ವಿರುದ್ಧ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೋಪಗೊಂಡಿದ್ದಾರೆ. ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧ ಹೀನಾಯವಾಗಿ ಸೋತ ನಂತರ ಟೀಂ ಇಂಡಿಯಾದ ಮೇಲೆ ಟೀಕಾ ಪ್ರಹಾರ ಮಾಡುತ್ತಿದ್ದಾರೆ.

ಅಲ್ಲದೆ ಕೆಲವರು ಇಂಡಿಯನ್ ಪ್ರಿಮಿಯರ್ ಲೀಗ್(IPL) ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಬ್ಯಾನ್ ಐಪಿಎಲ್ ಎಂಬ ಹ್ಯಾಶ್ ಟ್ಯಾಗ್(#BanIPL) ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿತ್ತು. ಇದೀಗ ಭಾರತದ ದಿಗ್ಗಜ ಕ್ರಿಕೆಟಿಗ ಗೌತಮ್ ಗಂಭೀರ್ ಐಪಿಎಲ್ ಬೆಂಬಲಕ್ಕೆ ನಿಂತಿದ್ದಾರೆ. ಐಪಿಎಲ್ ಟೂರ್ನಿಯಿಂದ ಆಟಗಾರರಿಗೆ ಅಭ್ಯಾಸ ದೊರೆಯುತ್ತದೆ ಅಂತಾ ಗಂಭೀರ್ ಹೇಳಿದ್ದಾರೆ. 

ಸ್ಟಾರ್ ಸ್ಪೋರ್ಟ್ಸ್ ಗೆ ನೀಡಿದ ಸಂದರ್ಶನದಲ್ಲಿ ಗೌತಮ್ ಗಂಭೀರ್, 'ನೀವು ಐಪಿಎಲ್ ಅನ್ನು ದೂಷಿಸಲು ಸಾಧ್ಯವಿಲ್ಲ. ಭಾರತೀಯ ಕ್ರಿಕೆಟ್ ನಲ್ಲಿ ಏನಾದ್ರೂ ತಪ್ಪಾದ್ರೆ, ಐಪಿಎಲ್ ನತ್ತ ಎಲ್ಲರೂ ಬೊಟ್ಟು ಮಾಡಲು ಪ್ರಾರಂಭಿಸುತ್ತಾರೆ. ಅದು ತಪ್ಪು. ಕೆಲವೊಮ್ಮೆ ಇತರ ತಂಡಗಳು ನಿಮಗಿಂತ ಉತ್ತಮ ಪ್ರದರ್ಶನ ನೀಡುತ್ತಿವೆ ಅನ್ನೋದನ್ನು ಒಪ್ಪಿಕೊಳ್ಳಬೇಕಾಗುತ್ತದೆ ಅಂತಾ ತಿಳಿಸಿದ್ದಾರೆ. 

ನ್ಯೂಜಿಲೆಂಡ್ ವಿರುದ್ಧ ಸೋಲಲು ಹಲವಾರು ಕಾರಣಗಳಿವೆ. ಅಲ್ಲದೆ ಟೀಮ್ ಇಂಡಿಯಾದ ಆಟಗಾರರು ಸಾಕಷ್ಟು ಆತಂಕಕ್ಕೆ ಒಳಗಾಗಿದ್ದರು. ಇದಕ್ಕೂ ಐಪಿಎಲ್ ಗೂ ಏನು ಸಂಬಂಧ? 2019ರ ವಿಶ್ವಕಪ್ ನ ಸೆಮಿಫೈನಲ್ ನಲ್ಲೂ ಇದೇ ರೀತಿಯಾಗಿತ್ತು. ಆಟಗಾರರಿಗೆ ಅಭ್ಯಾಸದ ಅಗತ್ಯ ಇರುವುದರಿಂದಾನೇ ಅದು ಐಪಿಎಲ್ ನಿಂದ ಈಡೇರುತ್ತಿದೆ ಅಂತಾ ಗೌತಮ್ ಗಂಭೀರ್ ತಿಳಿಸಿದ್ದಾರೆ.

ರನ್ಗಳು ಬರದಿದ್ದಾಗ, ಬ್ಯಾಟ್ಸ್‌ಮನ್‌ಗಳು ತಮ್ಮ ಸ್ಥಾನಕ್ಕಾಗಿ ಆಡುತ್ತಾರೆ. ಅದು ಸ್ಫೂರ್ತಿ ನೀಡುತ್ತದೆ. ಇದನ್ನು ಮಾಡಿ ಮತ್ತು ಬೋರ್ಡ್‌ನಲ್ಲಿ ರನ್ ಗಳಿಸಿ. ನೆಟ್ ರನ್ ರೇಟ್ ಬಗ್ಗೆ ಯೋಚಿಸುವ ಬದಲು, ಮೊದಲು ಗೆಲ್ಲಲು ಪ್ರಯತ್ನಿಸಿ. ಒಮ್ಮೆ ನೀವು ಆಟಕ್ಕೆ ಬಂದರೆ, ನೀವು ಪರಿಸ್ಥಿತಿಗೆ ಅನುಗುಣವಾಗಿ ಆಡುತ್ತೀರಿ.

ಭಾರತೀಯ ಕ್ರಿಕೆಟ್‌ನಲ್ಲಿ ಏನಾದರೂ ತಪ್ಪಾದರೆ, ಎಲ್ಲರೂ ಐಪಿಎಲ್ ಕಡೆಗೆ ಬೆರಳು ತೋರಿಸಲು ಪ್ರಾರಂಭಿಸುತ್ತಾರೆ. ಅದು ತಪ್ಪು. ನಿಮಗಿಂತ 2-3 ತಂಡಗಳು ಉತ್ತಮ ಕ್ರಿಕೆಟ್ ಆಡುತ್ತಿವೆ ಎಂದು ನೀವು ನಿರೀಕ್ಷಿಸಬೇಕು. ನೀವು ಅದನ್ನು ಎಷ್ಟು ಬೇಗನೆ ಸ್ವೀಕರಿಸುತ್ತೀರಿ, ಅದು ನಿಮಗೆ ಉತ್ತಮವಾಗಿರುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com