Online Desk
ನವದೆಹಲಿ: ಭಾರತ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುವುದು ಬಹುದೊಡ್ಡ ಗೌರವ. ಇದಕ್ಕೆ ಪ್ರತಿಯಾಗಿ ಉತ್ತಮ ಕೆಲಸ ಮಾಡುವತ್ತ ಚಿತ್ತ ನೆಟ್ಟಿದ್ದೇನೆ ಎಂದು ದಿ ವಾಲ್ ಖ್ಯಾತಿಯ ಭಾರತದ ಕ್ರಿಕೆಟ್ ದಂತಕಥೆ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಕೋಚ್ ಆಯ್ಕೆಯಾದ ಬೆನ್ನಲ್ಲೇ ಈ ಕುರಿತು ಹೇಳಿಕೆ ನೀಡಿರುವ ದ್ರಾವಿಡ್ ಅವರು, ಭಾರತ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುವುದು ಬಹುದೊಡ್ಡ ಗೌರವ. ಇದಕ್ಕೆ ಪ್ರತಿಯಾಗಿ ಉತ್ತಮ ಕೆಲಸ ಮಾಡುವತ್ತ ಚಿತ್ತ ನೆಟ್ಟಿದ್ದೇನೆ. ಹಾಲಿ ಕೋಚ್ ರವಿಶಾಸ್ತ್ರಿ ಮಾರ್ಗದರ್ಶನದಲ್ಲಿ ತಂಡವು ಹಲವು ಮಹತ್ವದ ಸಾಧನೆಗಳನ್ನು ಮಾಡಿದೆ. ಇದೇ ಉತ್ತಮ ಕಾರ್ಯವನ್ನು ಮುಂದುವರಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ 'ಕನ್ನಡಿಗ' ರಾಹುಲ್ ದ್ರಾವಿಡ್ ನೇಮಕ
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿರುವ ರಾಹುಲ್ ದ್ರಾವಿಡ್ ಅವರನ್ನು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಿ ಬಿಸಿಸಿಐ ಪ್ರಕಟಣೆ ಹೊರಡಿಸಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್: ಆಫ್ಘಾನಿಸ್ತಾನ ವಿರುದ್ಧ ಆರ್ಭಟ, ಹಾಲಿ ಟೂರ್ನಿಯಲ್ಲಿ ಗರಿಷ್ಛ ರನ್ ದಾಖಲೆ ಬರೆದ ಭಾರತ
ಮೂಲಗಳ ಪ್ರಕಾರ 'ಸುಲಕ್ಷಣಾ ನಾಯ್ಕ ಮತ್ತು ಆರ್.ಪಿ. ಸಿಂಗ್ ಅವರಿದ್ದ ಕ್ರಿಕೆಟ್ ಸಲಹಾ ಸಮಿತಿಯು ರಾಹುಲ್ ದ್ರಾವಿಡ್ ಅವರನ್ನು ಅವಿರೋಧವಾಗಿ ಮುಖ್ಯ ಕೋಚ್ ಆಗಿ ನೇಮಕ ಮಾಡಿದ್ದು, ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಸರಣಿಯ ಸಂದರ್ಭದಲ್ಲಿ ದ್ರಾವಿಡ್ ಕೋಚ್ ಆಗಿ ಕಾರ್ಯಾರಂಭ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್: ಆಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 66 ರನ್ ಗಳ ಭರ್ಜರಿ ಜಯ
ಸದ್ಯ ನಡೆಯುತ್ತಿರುವ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ನಂತರ ಮುಖ್ಯ ಕೋಚ್ ರವಿಶಾಸ್ತ್ರಿಯವರ ಕಾರ್ಯಾವಧಿಯು ಮುಕ್ತಾಯಗೊಳ್ಳಲಿದ್ದು, ಈ ಸ್ಥಾನಕ್ಕಾಗಿ ಅಭ್ಯರ್ಥಿಯ ಆಯ್ಕೆಗಾಗಿ ಅಕ್ಟೋಬರ್ 26ರಂದು ಬಿಸಿಸಿಐ ಅರ್ಜಿ ಆಹ್ವಾನಿಸಿತ್ತು. ಆರಂಭದಲ್ಲಿ ಕೋಚ್ ಸ್ಥಾನಕ್ಕೆ ರಾಹುಲ್ ದ್ರಾವಿಡ್ ಒಲ್ಲೆ ಎಂದಿದ್ದರು.
ಆದರೆ ದುಬೈನಲ್ಲಿ ಕಳೆದ ತಿಂಗಳು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ನಡೆಯುವ ಸಂದರ್ಭದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರು ದ್ರಾವಿಡ್ ಅವರೊಂದಿಗೆ ಸಮಾಲೋಚನೆ ನಡೆಸಿದ್ದರು. ಕೋಚ್ ಹುದ್ದೆ ಸ್ವೀಕರಿಸಲು ದ್ರಾವಿಡ್ ಅವರನ್ನು ಮನವೊಲಿಸಿದ್ದರು. ಅವರ ಮನವೊಲಿಕೆ ಫಲವಾಗಿ ಬಿಸಿಸಿಐ ಮಂಡಳಿಯ ನಿಯಮಾವಳಿಯಂತೆ ಆಯ್ಕೆಯನ್ನು ಸಂದರ್ಶನ ಮೂಲಕ ನಡೆಸಲು ರಾಹುಲ್ ದ್ರಾವಿಡ್ ಅವರು ಅರ್ಜಿ ಹಾಕಿದ್ದರು.
ಇದನ್ನೂ ಓದಿ: ಟಿ20 ವಿಶ್ವಕಪ್: ಭರ್ಜರಿ ಬ್ಯಾಟಿಂಗ್ ಮೂಲಕ ದಾಖಲೆ ಬರೆದ ರೋ'ಹಿಟ್'-ರಾಹುಲ್ ಜೋಡಿ
ರಾಹುಲ್ ದ್ರಾವಿಡ್ ಅವರು, ಭಾರತದ ಪರ 164 ಟೆಸ್ಟ್, 344 ಅಂತರರಾಷ್ಟ್ರೀಯ ಏಕದಿನ ಮತ್ತು 298 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಭಾರತ ಕ್ರಿಕೆ್ಟ್ ತಂಡದ ನಾಯಕರೂ ಆಗಿದ್ದ ದ್ರಾವಿಡ್ ನಿವೃತ್ತಿಯ ನಂತರ ಭಾರತ ಎ, 19 ವರ್ಷದೊಳಗಿನವರ ತಂಡಗಳಿಗೆ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.
ಇದನ್ನೂ ಓದಿ: ಟಿ20 ವಿಶ್ವಕಪ್: ಆಫ್ಘಾನಿಸ್ತಾನ ವಿರುದ್ಧ ಆರ್ಭಟ, ದಾಖಲೆ ಬರೆದ ಭಾರತ