ಟಿ-20 ವಿಶ್ವಕಪ್: ಸ್ಕಾಟ್ಲೆಂಡ್ ಕ್ರಿಕೆಟ್ ಬೋರ್ಡ್‌ನ ಅಚ್ಚರಿ ಪೋಸ್ಟ್!
ಸ್ಕಾಟ್ಲೆಂಡ್ ಕ್ರಿಕೆಟ್ ಬೋರ್ಡ್, ವಿರಾಟ್ ಕೊಹ್ಲಿ ಆ್ಯಂಡ್ ಕಂಪನಿಯನ್ನು ಹಾಡಿ ಹೊಗಳಿದೆ. ಹೌದು, ಶುಕ್ರವಾರ ಕೈಲ್ ಕೋಯಿಟ್ಝರ್ (Kyle Coetzer) ನಾಯಕತ್ವದ ಸ್ಕಾಟ್ಲೆಂಡ್ ತಂಡವನ್ನು ಕೊಹ್ಲಿ ಪಡೆ ಹೀನಾಯವಾಗಿ ಸೋಲಿಸಿತು.
Published: 06th November 2021 04:37 PM | Last Updated: 06th November 2021 04:54 PM | A+A A-

ಡ್ರೆಸ್ಸಿಂಗ್ ರೂಮ್
ಬೆಂಗಳೂರು: ಸ್ಕಾಟ್ಲೆಂಡ್ ಕ್ರಿಕೆಟ್ ಬೋರ್ಡ್, ವಿರಾಟ್ ಕೊಹ್ಲಿ ಆ್ಯಂಡ್ ಕಂಪನಿಯನ್ನು ಹಾಡಿ ಹೊಗಳಿದೆ. ಹೌದು, ಶುಕ್ರವಾರ ಕೈಲ್ ಕೋಯಿಟ್ಝರ್ (Kyle Coetzer) ನಾಯಕತ್ವದ ಸ್ಕಾಟ್ಲೆಂಡ್ ತಂಡವನ್ನು ಕೊಹ್ಲಿ ಪಡೆ ಹೀನಾಯವಾಗಿ ಸೋಲಿಸಿತು. ಅಲ್ಲದೆ, ಏಕಪಕ್ಷೀಯವಾಗಿ ದಾಳಿ ನಡೆಸಿ 8 ವಿಕೆಟ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತ್ತು.
ಆದರೆ ಗೆಲುವಿನ ನಂತರ ಟೀಮ್ ಇಂಡಿಯಾದ ಆಟಗಾರರು ಸ್ಕಾಟ್ಲೆಂಡ್ ಟೀಮ್ ನ ಡ್ರೆಸ್ಸಿಂಗ್ ರೂಮ್ ಗೆ ಆಗಮಿಸಿ ತಂಡದ ಆಟಗಾರರನ್ನು ಹುರಿದುಂಬಿಸಿದರು. ಸ್ಕಾಟ್ಲೆಂಡ್ ಕ್ರಿಕೆಟ್ ಮಂಡಳಿ ಕೂಡ ಕ್ಯಾಪ್ಟನ್ ಕೊಹ್ಲಿಯನ್ನು ಹೊಗಳಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದೆ.
"ಸಮಯ ತೆಗೆದುಕೊಂಡಿದ್ದಕ್ಕಾಗಿ ಕೊಹ್ಲಿ ಆ್ಯಂಡ್ ಕಂಪನಿಯನ್ನು ಗೌರವಿಸುತ್ತೇವೆ" ಅಂತಾ ಬರೆದುಕೊಂಡು ಟ್ವೀಟ್ ಮಾಡಿದೆ. ಈ ಭೇಟಿ ವೇಳೆ, ಭಾರತ ಕ್ರಿಕೆಟ್ ತಂಡದ ಆಟಗಾರರು, ಸ್ಕಾಟ್ಲೆಂಡ್ ತಂಡದ ಆಟಗಾರರಿಗೆ ಕ್ರಿಕೆಟ್ ನ ಹಲವು ಟಿಪ್ಸ್ ನೀಡಿದ್ದಾರೆ ಅನ್ನೋದು ತಿಳಿದುಬಂದಿದೆ.
Huge respect to @imVkohli and co. for taking the time pic.twitter.com/kdFygnQcqj
— Cricket Scotland (@CricketScotland) November 5, 2021