ಭಾರತ ವರ್ಸಸ್ ನ್ಯೂಜಿಲೆಂಡ್: ನಾಳೆಯಿಂದ ಸರಣಿ ಆರಂಭ; ದಿನಾಂಕ ಮತ್ತು ಟೈಮಿಂಗ್ ವಿವರ ಇಲ್ಲಿದೆ...

ರನ್ನರ್ ಅಪ್ ಆಗಿ ಅತ್ಯಂತ ಹುಮ್ಮಸ್ಸಿನಲ್ಲಿರುವ ನ್ಯೂಜಿಲೆಂಡ್ ಟೀಮ್ ಜೈಪುರಕ್ಕೆ ಬಂದಿಳಿದಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಸರಣಿ ನವೆಂಬರ್ 17 ಹಾಗೂ ನವೆಂಬರ್ 25 ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ.
ರೋಹಿತ್ ಶರ್ಮಾ
ರೋಹಿತ್ ಶರ್ಮಾ

ಬೆಂಗಳೂರು: ರನ್ನರ್ ಅಪ್ ಆಗಿ ಅತ್ಯಂತ ಹುಮ್ಮಸ್ಸಿನಲ್ಲಿರುವ ನ್ಯೂಜಿಲೆಂಡ್ ಟೀಮ್ ಜೈಪುರಕ್ಕೆ ಬಂದಿಳಿದಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಸರಣಿ ನವೆಂಬರ್ 17 ಹಾಗೂ ನವೆಂಬರ್ 25 ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ.

ರೋಹಿತ್ ಶರ್ಮಾ ಕ್ಯಾಪ್ಟನ್; ಕೋಚ್ ರಾಹುಲ್ ದ್ರಾವಿಡ್!
ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ರೋಹಿತ್ ಶರ್ಮಾ ಟೀಂ ಇಂಡಿಯಾ ನಾಯಕತ್ವ ವಹಿಸಲಿದ್ದಾರೆ. ವಿರಾಟ್ ಕೊಹ್ಲಿ ಟಿ-20 ನಾಯಕತ್ವ ತ್ಯಜಿಸಿದ ಬಳಿಕ ರೋಹಿತ್ ತಂಡದ ಜವಾಬ್ದಾರಿ ವಹಿಸಿಕೊಳ್ಳುತ್ತಿರುವುದು ಇದೇ ಮೊದಲು. ಇದೇ ಸಂದರ್ಭದಲ್ಲಿ ಕನ್ನಡಿಗ ಹಾಗೂ ಮಾಜಿ ಕ್ರಿಕೆಟ್ ಆಟಗಾರ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಸರಣಿಯಲ್ಲಿ ಕೆಎಲ್ ರಾಹುಲ್ ಉಪ ನಾಯಕನ ಜವಾಬ್ದಾರಿ ಹೊರಲಿದ್ದಾರೆ. ಹಿರಿಯ ಆಟಗಾರರಾಗಿರುವ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಜಡೇಜಾ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ಟಿ20 ಸರಣಿಯ ದಿನಾಂಕ ಹಾಗೂ ಸ್ಥಳ :
ಮೊದಲ ಟಿ-20 ಪಂದ್ಯ - ನವೆಂಬರ್ 17 - ಜೈಪುರ
ಎರಡನೇ ಟಿ-20 ಪಂದ್ಯ - ನವೆಂಬರ್ 19 - ರಾಂಚಿ
ಮೂರನೇ ಟಿ-20 ಪಂದ್ಯ - ನವೆಂಬರ್ 21 - ಕೊಲ್ಕತ್ತಾ

ಟಿ20 ಹಾಗೂ ಟೆಸ್ಟ್ ಪಂದ್ಯಗಳ ಟೈಮಿಂಗ್
ಮೂರು ಟಿ-20 ಪಂದ್ಯಗಳು ಸಂಜೆ 7 ಗಂಟೆಗೆ ಆರಂಭಗೊಳ್ಳಲಿವೆ ಹಾಗೂ ಟೆಸ್ಟ್ ಪಂದ್ಯಗಳು ಬೆಳಗ್ಗೆ 9.30ಕ್ಕೆ ಪ್ರಾರಂಭಗೊಳ್ಳಲಿವೆ. ನ್ಯೂಜಿಲೆಂಡ್ ಹಾಗೂ ಭಾರತದ ಮಧ್ಯದ ಸರಣಿ ಸ್ಟಾರ್ ಸ್ಪೋರ್ಟ್ ಚಾನೆಲ್ ಪ್ರಸಾರ ಮಾಡಲಿದೆ. ಅಲ್ಲದೆ, ಹಾಟ್ ಸ್ಟಾರ್ ನಲ್ಲಿ ನೇರ ಪ್ರಸಾರವಾಗಲಿದೆ.

ನ. 25 ರಿಂದ ಟೆಸ್ಟ್ ಸರಣಿ ಆರಂಭ
ಉಭಯ ತಂಡಗಳ ನಡುವಿನ ಟೆಸ್ಟ್ ಸರಣಿಯು ನವೆಂಬರ್ 25 ರಿಂದ ಆರಂಭವಾಗಲಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಮೊದಲ ಟೆಸ್ಟ್‌ನಲ್ಲಿ ಅಜಿಂಕ್ಯ ರಹಾನೆ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com