ಐಪಿಎಲ್ ಟಿವಿ ರೈಟ್ಸ್ ನಿಂದ ಬಿಸಿಸಿಐಗೆ 30 ಸಾವಿರ ಕೋಟಿ ರೂ.!? ಸೋನಿ-ಝೀ, ಸ್ಟಾರ್, ಜಿಯೋ ಮಧ್ಯೆ ಪೈಪೋಟಿ!

ಐಪಿಎಲ್ ಮಾಧ್ಯಮ ಹಕ್ಕುಗಳು ಸ್ಟಾರ್ ನಂತರ ಯಾರಿಗೆ ಸಿಗಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದ್ದು, ಸ್ಟಾರ್, ಸೋನಿ-ಝೀ ಹಾಗೂ ಜಿಯೋ ಸಂಸ್ಥೆಗಳು ಐಪಿಎಲ್ ನ ಟಿವಿ ರೈಟ್ಸ್ ಖರೀದಿ ಮಾಡಲು ತುದಿಗಾಲಲ್ಲಿ ನಿಂತಿವೆ. ಆದರೆ, ಬಿಸಿಸಿಐ ಮಾತ್ರ ಟಿವಿ ರೈಟ್ಸ್ ನ ಬಿಡ್ಡಿಂಗ್ ಕರೆಯಲು ಹಿಂದೆ ಮುಂದೆ ನೋಡುತ್ತಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಐಪಿಎಲ್ ಮಾಧ್ಯಮ ಹಕ್ಕುಗಳು ಸ್ಟಾರ್ ನಂತರ ಯಾರಿಗೆ ಸಿಗಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದ್ದು, ಸ್ಟಾರ್, ಸೋನಿ-ಝೀ ಹಾಗೂ ಜಿಯೋ ಸಂಸ್ಥೆಗಳು ಐಪಿಎಲ್ ನ ಟಿವಿ ರೈಟ್ಸ್ ಖರೀದಿ ಮಾಡಲು ತುದಿಗಾಲಲ್ಲಿ ನಿಂತಿವೆ. ಆದರೆ, ಬಿಸಿಸಿಐ ಮಾತ್ರ ಟಿವಿ ರೈಟ್ಸ್ ನ ಬಿಡ್ಡಿಂಗ್ ಕರೆಯಲು ಹಿಂದೆ ಮುಂದೆ ನೋಡುತ್ತಿದೆ. 

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮಾಧ್ಯಮ ಹಕ್ಕುಗಳ ಟೆಂಡರ್ ಈಗಾಗ್ಲೇ ವಿಳಂಬವಾಗಿದ್ದು, ಇನ್ನೂ ತಡವಾಗುವ ಸಾಧ್ಯತೆ ಇದೆ. ಅಕ್ಟೋಬರ್ ಅಂತ್ಯದಲ್ಲಿ 2 ಹೊಸ ಐಪಿಎಲ್ ತಂಡಗಳನ್ನು ಘೋಷಿಸಿದ ನಂತ್ರ ತ್ವರಿತವಾಗಿ ಐಪಿಎಲ್ ಟಿವಿ ರೈಟ್ಸ್ ಮಾರಾಟ ಮಾಡುವುದಾಗಿ ಬಿಸಿಸಿಐ ಹೇಳಿತ್ತು. ಈ ಮಾಧ್ಯಮ ಹಕ್ಕುಗಳ ಟೆಂಡರ್‌ನಿಂದ 30,000 ಕೋಟಿ ರೂ. (ಅಂದಾಜು 4 ಬಿಲಿಯನ್ ಡಾಲರ್) ಸಂಗ್ರಹಿಸುವ ಗುರಿಯನ್ನು ಬಿಸಿಸಿಐ ಇಟ್ಟುಕೊಂಡಿದೆ. ಆದ್ರೆ ಈ ಟೆಂಡರ್ ಪ್ರಕ್ರಿಯೆ ತಡವಾಗಿದೆ ಅನ್ನೋದಕ್ಕೆ 3 ಅಂಶಗಳು ಪ್ರಮುಖವಾಗಿ ಕಾರಣವಾಗಿದೆ ಅನ್ನೋದು ಕ್ರಿಕೆಟ್ ತಜ್ಞರ ಅಭಿಪ್ರಾಯ.

ಮೊದಲ ಕಾರಣವೆಂದರೆ 10ನೇ ಐಪಿಎಲ್ ಫ್ರಾಂಚೈಸಿಗೆ ಸಂಬಂಧಿಸಿದ ಅನಿಶ್ಚಿತತೆ. ಅಹಮದಾಬಾದ್ ಫ್ರಾಂಚೈಸಿಯನ್ನು ಸಿವಿಸಿ ಸ್ಪೋರ್ಟ್ಸ್ ಗೆದ್ದಿದೆ ಎಂದು ಬಿಸಿಸಿಐ ಘೋಷಿಸಿದ್ದರೂ, ಅವರ ಬಿಡ್ ಅನುಮಾನಕ್ಕೆ ಒಳಗಾಗಿದೆ, ಇದರಿಂದಾಗಿ ಬಿಸಿಸಿಐನಿಂದ ಒಪ್ಪಂದದ ಪತ್ರವನ್ನು ಇನ್ನೂ ನೀಡಲಾಗಿಲ್ಲ.

ಎರಡನೆಯದಾಗಿ, ಇ-ಹರಾಜಿಗೆ ಹೋಗಬೇಕೆ ಅಥವಾ ಕ್ಲೋಸ್ಡ್ ಬಿಡ್ಡಿಂಗ್ ಅನ್ನು ಆರಿಸಿಕೊಳ್ಳಬೇಕೆ ಅನ್ನೋ ಸಮಸ್ಯೆಗೆ ಬಿಸಿಸಿಐ ಗುರಿಯಾಗಿದೆ. ಮುಚ್ಚಿದ ಬಿಡ್ಡಿಂಗ್ ನಿಂದ ದೊಡ್ಡ ಮೊತ್ತದ ಹಣ ಕ್ರೋಢಿಕರಿಸಬಹುದು ಅನ್ನೋದು ಹಲವರ ವಾದ. ಆದ್ರೆ, ಇ-ಹರಾಜಿನಲ್ಲಿ ಅತ್ಯಧಿಕ ಬಿಡ್ ಹತ್ತಿರದ ಟಿವಿ ಸಂಸ್ಥೆಗಳಿಗಿಂತ ಸ್ವಲ್ಪವೇ ಹೆಚ್ಚಾಗಿರುತ್ತದೆ. ಆದ್ದರಿಂದ ಇ-ಬಿಡ್ಡಿಂಗ್ ಅಥವಾ ಕ್ಲೋಸ್ ಬಿಡ್ಡಿಂಗ್ ಆಯ್ದುಕೊಳ್ಳಬೇಕು ಅನ್ನೋ ಗೊಂದಲದಲ್ಲಿ ಬಿಸಿಸಿಐ ಸಿಲುಕಿದೆ. ಈ ಎಲ್ಲದ ಮಧ್ಯೆ ಐಪಿಎಲ್ ಟಿವಿ ರೈಟ್ಸ್ ಬಿಡ್ಡಿಂಗ್ ನಲ್ಲಿ ಸ್ಟಾರ್, ಸೋನಿ-ಜಿ ಮತ್ತು ಜಿಯೋ ಬಿಡ್ಡರ್ ಗಳು ಭಾರತದಲ್ಲಿ ತೀವ್ರವಾಗಿ ಸ್ಪರ್ಧಿಸುವ ನಿರೀಕ್ಷೆ ಇದೆ.

ಮೂರನೆಯದಾಗಿ, ಬಿಸಿಸಿಐನ ಮುಂಬರುವ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ಡಿಸೆಂಬರ್ 4ರಂದು ನಡೆಯಲಿದೆ. ಈ ಸಭೆಯಲ್ಲಿ ಮೂವರು ಹೊಸ ಸದಸ್ಯರನ್ನು ಸೇರಿಸಿ ಐಪಿಎಲ್‌ನ ಹೊಸ ಆಡಳಿತ ಮಂಡಳಿಯನ್ನು ರಚಿಸಲಾಗುತ್ತದೆ. ಈ ಎಲ್ಲ ಕಾರಣಗಳಿಂದ ಐಪಿಎಲ್ ಮಾಧ್ಯಮ ರೈಟ್ಸ್ ಅನ್ನು ಮಾರಾಟ ಮಾಡಲು ಬಿಸಿಸಿಐ ಇನ್ನು ಸಮಯ ತೆಗೆದುಕೊಳ್ಳಬಹುದು ಅನ್ನೋದು ಕ್ರಿಕೆಟ್ ಪಂಡಿತರ ಲೆಕ್ಕಾಚಾರವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com