ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್: ಭಾರತ ತಂಡದ ಮೊದಲ ವಿಕೆಟ್ ಪತನ, ಶುಭಮನ್ ಗಿಲ್ ಅರ್ಧಶತಕ

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ತನ್ನ 50 ರನ್ ಪೂರೈಸಿದೆ. ಎಜಾಜ್ ಪಟೇಲ್ ಎಸೆದ 17ನೇ ಓವರ್ ನ ಐದನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಶುಭಮನ್ ಗಿಲ್ ಭಾರತದ ಅರ್ಧಶತಕ ಪೂರೈಸಿದರು. ಈ ಓವರ್‌ನಲ್ಲಿ ಗಿಲ್ ಅದ್ಭುತ ಸಿಕ್ಸರ್ ಕೂಡ ಬಾರಿಸಿದರು.
ಅರ್ಧಶತಕ ಬಾರಿಸಿದ ಶುಭಮನ್ ಗಿಲ್
ಅರ್ಧಶತಕ ಬಾರಿಸಿದ ಶುಭಮನ್ ಗಿಲ್

ಕಾನ್ಪುರ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ತನ್ನ 50 ರನ್ ಪೂರೈಸಿದೆ. ಎಜಾಜ್ ಪಟೇಲ್ ಎಸೆದ 17ನೇ ಓವರ್ ನ ಐದನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಶುಭಮನ್ ಗಿಲ್ ಭಾರತದ ಅರ್ಧಶತಕ ಪೂರೈಸಿದರು. ಈ ಓವರ್‌ನಲ್ಲಿ ಗಿಲ್ ಅದ್ಭುತ ಸಿಕ್ಸರ್ ಕೂಡ ಬಾರಿಸಿದರು.

ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾಗಿರುವ ಟೆಸ್ಟ್‌ನಲ್ಲಿ ಅಜಿಂಕ್ಯ ರಹಾನೆ ನಾಯಕತ್ವದ ಭಾರತ ತಂಡವು ‘ವಿಶ್ವ ಟೆಸ್ಟ್ ಚಾಂಪಿಯನ್’ ನ್ಯೂಜಿಲೆಂಡ್‌ ಸವಾಲು ಎದುರಿಸುತ್ತಿದೆ.

ಈ ಪಂದ್ಯದಲ್ಲಿ ಭಾರತದ ಪರ ಶ್ರೇಯಸ್ ಅಯ್ಯರ್ ಹಾಗೂ ನ್ಯೂಜಿಲೆಂಡ್‌ ಪರ ರಚಿನ್ ರವೀಂದ್ರ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ.

ಸದ್ಯ ಬ್ಯಾಟಿಂಗ್ ಆರಂಭಿಸಿರುವ ಭಾರತ ಊಟದ ವಿರಾಮದ ವೇಳೆಗೆ 29 ಓವರ್‌ಗಳಲ್ಲಿ ಒಂದು ವಿಕೆಟ್‌ ನಷ್ಟಕ್ಕೆ 82 ರನ್ ಗಳಿಸಿದೆ. (ಶುಭಮನ್ ಗಿಲ್ 52*, ಚೇತೇಶ್ವರ್ ಪೂಜಾರ 15* ರನ್‌ ಗಳಸಿ ಕ್ರೀಸ್‌ನಲ್ಲಿದ್ದಾರೆ).

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com