ಹೈದರಾಬಾದ್ ವಿರುದ್ಧ ಸಿಎಸ್ ಕೆ ಗೆಲುವಿನ ಕೇಕೆ; ಪ್ಲೇ ಆಫ್ಸ್ ಗೆ ಪ್ರವೇಶ
ಶಾರ್ಜಾದಲ್ಲಿ ಸೆ.30 ರಂದು ನಡೆದ 44 ನೇ ಪಂದ್ಯದಲ್ಲಿ ಹೈದರಾಬಾದ್ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 6 ವಿಕೆಟ್ ಗಳ ಜಯದೊಂದಿಗೆ ಪ್ಲೇ ಆಪ್ಸ್ ಗೆ ಪ್ರವೇಶ ಪಡೆದಿದೆ.
Published: 01st October 2021 12:16 AM | Last Updated: 01st October 2021 12:16 AM | A+A A-

ಚೆನ್ನೈ ಸೂಪರ್ ಕಿಂಗ್ಸ್ ತಂಡ
ಶಾರ್ಜಾ: ಶಾರ್ಜಾದಲ್ಲಿ ಸೆ.30 ರಂದು ನಡೆದ 44 ನೇ ಪಂದ್ಯದಲ್ಲಿ ಹೈದರಾಬಾದ್ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 6 ವಿಕೆಟ್ ಗಳ ಜಯದೊಂದಿಗೆ ಪ್ಲೇ ಆಪ್ಸ್ ಗೆ ಪ್ರವೇಶ ಪಡೆದಿದೆ.
ಆರಂಭಿಕ ಆಟಗಾರರಾದ ರುತುರಾಜ್ ಗಾಯಕ್ವಾಡ್ (38 ಎಸೆತಗಳಲ್ಲಿ 45 ರನ್) ಫಾಫ್ ಡು ಪ್ಲೆಸಿಸ್ ( 36 ಎಸೆತಗಳಲ್ಲಿ 41 ರನ್) ಗಳ ಮೂಲಕ ಮಿಂಚಿದ್ದು, ತಂಡ ಗೆಲುವಿನ ದಡ ಸೇರಿಸಲು ನೆರವಾದರು.
ಟಾಸ್ ನಲ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೈದರಾಬಾದ್ ತಂಡವನ್ನು ನಿಗದಿತ 20 ಓವರ್ ಗಳಲ್ಲಿ 134 (7 ವಿಕೆಟ್ ನಷ್ಟ) ರನ್ ಗಳಿಗೆ ಕಟ್ಟಿ ಹಾಕಿತು.
ಆರಂಭದಲ್ಲೇ ಜೋಸನ್ ರಾಯ್ (7 ಎಸೆತಗಳಲ್ಲಿ 2 ರನ್) ವಿಕೆಟ್ ಒಪ್ಪಿಸಿದ ಪರಿಣಾಮ ತಂಡ ಆರಂಭಿಕ ಒತ್ತಡಕ್ಕೆ ಒಳಗಾಯಿತು. ನಂತರ ಕ್ರೀಸ್ ಗೆ ಬಂದ ವೃದ್ಧಿಮಾನ್ ಸಹಾ 46 ಎಸೆತಗಳಲ್ಲಿ 44 ರನ್ ಗಳನ್ನು ಗಳಿಸಿ ತಂಡಕ್ಕೆ ಚೇತರಿಕೆ ನೀಡಿದರು.
ಈ ಗೆಲುವಿನ ಮೂಲಕ ಸಿಎಸ್ ಕೆ 18 ಅಂಕಗಳೊಂದಿಗೆ ಪ್ಲೇ ಆಫ್ಸ್ ಗೆ ಪ್ರವೇಶಿಸಿದೆ. 16 ಅಂಕಗಳೊಂದಿಗೆ ಡೆಲ್ಲಿ ತಂಡ ಎರಡನೇ ಸ್ಥಾನದಲ್ಲಿದ್ದು 14 ಅಂಕಗಳೊಂದಿಗೆ ಆರ್ ಸಿಬಿ ಮೂರನೇ ಸ್ಥಾನದಲ್ಲಿದೆ. ಈ ಪಂದ್ಯದ ಸೋಲಿನೊಂದಿಗೆ 4 ಅಂಕಗಳೊಂದಿಗೆ ಎಸ್ ಆರ್ ಹೆಚ್ ಕೊನೆಯ ಸ್ಥಾನದಲ್ಲಿದೆ.