ಕೆಕೆಆರ್ ವಿರುದ್ಧ ಪಂಜಾಬ್ ಗೆ 5 ವಿಕೆಟ್ ಗಳ ಜಯ 

 ಶಾರ್ಜಾದಲ್ಲಿ ನಡೆದ 45 ನೇ ಪಂದ್ಯದಲ್ಲಿ ಪಂಜಾಬ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ನ್ನು 5 ವಿಕೆಟ್ ಗಳಿಂದ ಮಣಿಸಿದೆ.
ಪಂಜಾಬ್ ತಂಡ
ಪಂಜಾಬ್ ತಂಡ

ಶಾರ್ಜಾ: ಶಾರ್ಜಾದಲ್ಲಿ ನಡೆದ 45 ನೇ ಪಂದ್ಯದಲ್ಲಿ ಪಂಜಾಬ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ನ್ನು 5 ವಿಕೆಟ್ ಗಳಿಂದ ಮಣಿಸಿದೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ ತಂಡ 19.3 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಕೆಕೆಆರ್ ತಂಡಕ್ಕೆ 169 ರನ್ ಗಳ ಗುರಿ ನೀಡಿತ್ತು.

ಪಂಜಾಬ್ ತಂಡದ ಆರಂಭಿಕ ಆಟಗಾರರಾದ ಕೆಎಲ್ ರಾಹುಲ್ (55 ಎಸೆತಗಳಲ್ಲಿ 67 ರನ್) ಹಾಗೂ ಮಯಾಂಕ್ ಅಗರ್ವಾಲ್ (27 ಎಸೆತಗಳಲ್ಲಿ 40 ರನ್ ಗಳನ್ನು ) ತಂಡಕ್ಕೆ ಉತ್ತಮ ಆರಂಭ ನೀಡಿದರು.

ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ವೈಫಲ್ಯ ಪಂಜಾಬ್ ತಂಡದ ಓಟಕ್ಕೆ ಬ್ರೇಕ್ ಹಾಕಿತು. ಪರಿಣಾಮ ತಂಡ 5 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು.

ಪಂಜಾಬ್ ನೀಡಿದ್ದ ರನ್ ಗುರಿ ಬೆನ್ನಟ್ಟಿದ ಕೆಕೆಆರ್ ತಂಡದ ಆರಂಭ ಉತ್ತಮವಾಗಿತ್ತು. ವೆಂಕಟೇಶ್ ಅಯ್ಯರ್,  49 ಎಸೆತಗಳಲ್ಲಿ 67 ರನ್ ಗಳಿಸುವ ಮೂಲಕ ಅರ್ಧ ಶತಕ ದಾಖಲಿಸಿ ತಂಡಕ್ಕೆ ರನ್ ಚೇಸ್ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದರು.

ಆದರೆ ಶುಭ್ ಮನ್ ಗಿಲ್ ಅಯ್ಯರ್ ಗೆ ಉತ್ತಮ ಜೊತೆಯಾಟ ನೀಡಲು ಸಾಧ್ಯವಾಗದೇ 7 ರನ್ ಗಳಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ನತ್ತ ನಡೆದರು.

ನಂತರ ಕ್ರೀಸ್ ಗಿಳಿದ ರಾಹುಲ್ ತ್ರಿಪಾಠಿ (26 ಎಸೆತಗಳಲ್ಲಿ 34 ರನ್), ನಿತೀಶ್ ರಾಣ (18 ಎಸೆತಗಳಲ್ಲಿ 31 ರನ್) ಗಳ ಮೂಲಕ ತಂಡದ ಗೆಲುವಿನ ವಿಶ್ವಾಸವನ್ನು ಹೆಚ್ಚಿಸಿದರಾದರೂ ರವಿ ಬಿಷ್ಣೋಯ್ ಹಾಗೂ ಆರ್ಶ್ದೀಪ್ ಸಿಂಗ್ ಅವರ ಬೌಲಿಂಗ್ ನಲ್ಲಿ ಈ ಜೊತೆಯಾಟಕ್ಕೆ ಬ್ರೇಕ್ ಬಿದ್ದಿತು. ನಂತರ ಬಂದ ಬ್ಯಾಟ್ಸ್ ಮನ್ ಗಳು ಪಂಜಾಬ್ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗದ ಪರಿಣಾಮ ಗೆಲುವಿನ ಸನಿಹದಲ್ಲಿದ್ದ ಕೆಕೆಆರ್ ಕನಸು ಕಮರಿತು.

ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟ ಎದುರಿಸಿದ್ದ ಕೆಕೆಆರ್ ತಂಡ 165 ರನ್ ಗಳಿಗೆ ಪಂಜಾಬ್ ವಿರುದ್ಧ ಸೋಲೊಪ್ಪಿಕೊಂಡಿತು. ಪಂಜಾಬ್ ಬೌಲಿಂಗ್ ವಿಭಾಗದಲ್ಲಿ ಆರ್ಶ್ ದೀಪ್ ಸಿಂಗ್ 32 ರನ್ ನೀಡಿ 3 ವಿಕೆಟ್ ಪಡೆದು ಉತ್ತಮ ಬೌಲರ್ ಎನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com