ಐಪಿಎಲ್ 2021: ಸಿಎಸ್ ಕೆ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆ ಮೂರು ವಿಕೆಟ್ ಅಂತರದ ಜಯ
ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಮೂರು ವಿಕೆಟ್ ಅಂತರದಿಂದ ಗೆಲುವು ದಾಖಲಿಸಿದೆ. ಇದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ.
Published: 05th October 2021 12:03 AM | Last Updated: 05th October 2021 12:06 AM | A+A A-

ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ಶಿಖರ್ ಧವನ್
ದುಬೈ: ಇಲ್ಲಿ ನಡೆದ ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಮೂರು ವಿಕೆಟ್ ಅಂತರದಿಂದ ಗೆಲುವು ದಾಖಲಿಸಿದೆ. ಇದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ.
ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಪರ ಆರಂಭಿಕ ಆಟಗಾರರಾದ ರುತುರಾಜ್ ಗಾಯಕ್ ವಾಡ್ 13, ಫಾಪ್ ಡು ಪ್ಲೆಸಿಸ್ 10, ರಾಬಿನ್ ಉತ್ತಪ್ಪ 19, ಮೊಯಿನ್ ಆಲಿ 5, ಅಂಬಟಿ ರಾಯುಡು 55, ನಾಯಕ ಮಹೇಂದ್ರ ಸಿಂಗ್ ಧೋನಿ 18 ಹಾಗೂ ರವೀಂದ್ರ ಜಡೇಜಾ 1 ರನ್ ಕಲೆಹಾಕಿದರು. ಇದರೊಂದಿಗೆ ಸಿಎಸ್ ಕೆ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿತು.
ಈ ಗುರಿಯನ್ನು ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಟಗಾರ ಪೃಥ್ವಿ ಶಾ 18, ಶಿಖರ್ ಧವನ್ 39, ಶ್ರೇಯಸ್ ಅಯ್ಯರ್ 2, ರಿಷಭ್ ಪಂತ್ 15, ರಿಪಾಲ್ ಪಟೇಲ್ 18, ಆರ್ ಅಶ್ವಿನ್ 2, ಶಿಮ್ರೊನ್ ಹೆಟ್ಮೆಯರ್ ಅಜೇಯ 28, ಅಕ್ಷರ್ ಪಟೇಲ್ 5, ರಾಬಡ ಅಜೇಯ 4 ರನ್ ಕಲೆ ಹಾಕುವುದರೊಂದಿಗೆ 19-4 ಓವರ್ ಗಳಲ್ಲಿ ಏಳು ವಿಕೆಟ್ ಗೆ 139 ರನ್ ಗಳಿಸಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ನಗೆ ಬೀರಿತು. ಅಕ್ಷರ್ ಪಟೇಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
Nail-biting finish! @DelhiCapitals hold their nerve & beat #CSK by 3⃣ wickets in a last-over thriller. #VIVOIPL #DCvCSK
— IndianPremierLeague (@IPL) October 4, 2021
Scorecard https://t.co/zT4bLrDCcl pic.twitter.com/ZJ4mPDaIAh