ದುಬೈ: ಕ್ರೀಡಾಂಗಣದಲ್ಲಿಯೇ ಗರ್ಲ್ ಫ್ರೆಂಡ್ ಗೆ ಪ್ರಪೋಸ್ ಮಾಡಿದ ದೀಪಕ್ ಚಹಾರ್! ವಿಡಿಯೋ

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಣ ಐಪಿಎಲ್ ಪಂದ್ಯ ಮುಗಿದ ನಂತರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೆಡಿಯಂನಲ್ಲೇ ಭಾರತೀಯ ವೇಗಿ ದೀಪಕ್ ಚಹಾರ್ ತನ್ನ ಗರ್ಲ್ ಪ್ರೆಂಡ್ ಗೆ ಗುರುವಾರ ಪ್ರಪೋಸ್ ಮಾಡಿದ್ದಾರೆ.
ಗರ್ಲ್ ಫ್ರೆಂಡ್ ಜೊತೆಗೆ ದೀಪಕ್ ಚಹಾರ್
ಗರ್ಲ್ ಫ್ರೆಂಡ್ ಜೊತೆಗೆ ದೀಪಕ್ ಚಹಾರ್

ದುಬೈ: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಣ ಐಪಿಎಲ್ ಪಂದ್ಯ ಮುಗಿದ ನಂತರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೆಡಿಯಂನಲ್ಲೇ ಭಾರತೀಯ ವೇಗಿ ದೀಪಕ್ ಚಹಾರ್ ತನ್ನ ಗರ್ಲ್ ಪ್ರೆಂಡ್ ಗೆ ಗುರುವಾರ ಪ್ರಪೋಸ್ ಮಾಡಿದ್ದಾರೆ.

ಐಪಿಎಲ್ ಅಧಿಕೃತ ಟ್ವೀಟರ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಮಂಡಿಯೂರಿ ಪ್ರೇಮ ನಿವೇದನೆ ಮಾಡಿಕೊಳ್ಳುವ ದೀಪಕ್ ಚಹರ್ ತನ್ನ ಗರ್ಲ್ ಫ್ರೆಂಡ್  ಕೈಗೆ ರಿಂಗ್ ಹಾಕಿದ್ದಾರೆ. 

ಈ ವಿಡಿಯೋವನ್ನು ತನ್ನ ಇನ್ಸ್ಟಾಗ್ರಾಮ್ ನಲ್ಲಿ ಹಾಕಿಕೊಂಡಿರುವ ಚಹರ್, ಈ ದಂಪತಿನ್ನು ಆಶೀರ್ವದಿಸಬೇಕಾಗಿ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

 ಆಫ್ ಪೀಲ್ಡ್ ನಲ್ಲಿ ಅಂತಿಮವಾಗಿ ವಿಜಯಶಾಲಿಯಾದರೂ ಮೈದಾನದಲ್ಲಿ ಚಹರ್ ಗೆ ಇಂದು ಒಳ್ಳೆಯ ದಿನವಾಗಿರಲಿಲ್ಲ. ನಾಲ್ಕು ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 48 ರನ್ ಕೊಟ್ಟಿದ್ದರು. ಅಲ್ಲದೇ, ಪಂಜಾಬ್ ವಿರುದ್ಧ ಆರು ವಿಕೆಟ್ ಗಳಿಂದ ಸಿಎಸ್ ಕೆ ಸೋತಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com