ಫ್ರೆಂಚ್ ವಿಶ್ವವಿದ್ಯಾನಿಲಯದಿಂದ ಹರ್ಭಜನ್ ಸಿಂಗ್ ಗೆ ಕ್ರೀಡೆಯಲ್ಲಿ ಗೌರವ ಡಾಕ್ಟರೇಟ್ ಪ್ರದಾನ

ಭಾರತದ ಮಾಜಿ ಕ್ರಿಕೆಟ್ ಆಟಗಾರ ಹರ್ಭಜನ್ ಸಿಂಗ್ ಗೆ ಫ್ರೆಂಚ್ ವಿಶ್ವವಿದ್ಯಾನಿಲಯವೊಂದು ಗೌರವ ಡಾಕ್ಟರೇಟ್ ನೀಡಿದೆ. ಇಲ್ಲಿ ನಡೆದ ಫ್ರೆಂಚ್ ಯೂನಿವರ್ಸಿಟಿ ಎಕೋಲ್ ಸೂಪರ್‌ಯೂರ್ ರಾಬರ್ಟ್ ಡಿ ಸೊರ್ಬೊನ್ ದ ಘಟಿಕೋತ್ಸವ ಸಮಾರಂಭದಲ್ಲಿ ಹರ್ಭಜನ್ ಸಿಂಗ್‌ಗೆ ಕ್ರೀಡೆಯಲ್ಲಿ ಗೌರವ ಪಿಎಚ್‌ಡಿ ನೀಡಿ ಗೌರವಿಸಲಾಗಿದೆ. 
ಹರ್ಭಜನ್ ಸಿಂಗ್
ಹರ್ಭಜನ್ ಸಿಂಗ್

ದುಬೈ: ಭಾರತದ ಮಾಜಿ ಕ್ರಿಕೆಟ್ ಆಟಗಾರ ಹರ್ಭಜನ್ ಸಿಂಗ್ ಗೆ ಫ್ರೆಂಚ್ ವಿಶ್ವವಿದ್ಯಾನಿಲಯವೊಂದು ಗೌರವ ಡಾಕ್ಟರೇಟ್ ನೀಡಿದೆ. ಇಲ್ಲಿ ನಡೆದ ಫ್ರೆಂಚ್ ಯೂನಿವರ್ಸಿಟಿ ಎಕೋಲ್ ಸೂಪರ್‌ಯೂರ್ ರಾಬರ್ಟ್ ಡಿ ಸೊರ್ಬೊನ್ ದ ಘಟಿಕೋತ್ಸವ ಸಮಾರಂಭದಲ್ಲಿ ಹರ್ಭಜನ್ ಸಿಂಗ್‌ಗೆ ಕ್ರೀಡೆಯಲ್ಲಿ ಗೌರವ ಪಿಎಚ್‌ಡಿ ನೀಡಿ ಗೌರವಿಸಲಾಗಿದೆ. 

ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಭಾಗವಾಗಿರುವ ಹರ್ಭಜನ್ ಪ್ರಸ್ತುತ ಜೈವಿಕ ಸುರಕ್ಷಿತ ವಾತಾವರಣದಲ್ಲಿರುವುದರಿಂದ ಸಮಾರಂಭಕ್ಕೆ ವೈಯಕ್ತಿಕವಾಗಿ ಹಾಜರಾಗಲು ಸಾಧ್ಯವಾಗಲಿಲ್ಲ.

ಈ ವಿಶ್ವವಿದ್ಯಾನಿಲಯ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಸೇರಿದಂತೆ  ಜೀವನದ ವಿವಿಧ  ಕ್ಷೇತ್ರಗಳಲ್ಲಿನ ಗಣ್ಯ ವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡುತ್ತದೆ. ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಬಂದಿದ್ದರೆ ಅದಕ್ಕೆ ಕ್ರಿಕೆಟ್ ಹಾಗೂ ಜನರ ಪ್ರೀತಿ, ವಿಶ್ವಾಸ ಕಾರಣ, ಈ ಪದವಿ ಸಿಕ್ಕಿರುವುದಕ್ಕೆ ನನಗೆ ಗೌರವ ಇದೆ ಎಂದು 41 ವರ್ಷದ ಹರ್ಭಜನ್ ಸಿಂಗ್ ಹೇಳಿದ್ದಾರೆ.

 ವಿಶ್ವಸಂಸ್ಥೆಯ ಭಾರತೀಯ ಸಂಘಗಳ ಒಕ್ಕೂಟದ ಉಪಾಧ್ಯಕ್ಷ, ಖ್ಯಾತ ಉದ್ಯಮಿ ಡಾ ಹರಚರಣ್ ಸಿಂಗ್ ರಣೌತಾ ಹರ್ಭಜನ್ ಸಿಂಗ್ ಅವರ ಹೆಸರನ್ನು ಶಿಫಾರಸು ಮಾಡಿದ್ದರು. ತಮ್ಮ ಆಯ್ಕೆ ಮಾಡಿದ ತೀರ್ಪುಗಾರರಿಗೂ ಹರ್ಭಜನ್ ಸಿಂಗ್ ಧನ್ಯವಾದ ಸಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com