ಟಿ20 ವಿಶ್ವಕಪ್: ಭಾರತದ ವಿರುದ್ಧ ಗೆಲ್ಲುವ ವಿಶ್ವಾಸವಿದೆ ಎಂದ ಪಾಕ್ ತಂಡದ ನಾಯಕ ಬಾಬರ್ ಅಜಮ್
ಟಿ-20 ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಸಾಂಪ್ರಾದಾಯಿಕ ಎದುರಾಳಿ ಭಾರತವನ್ನು ಪಾಕಿಸ್ತಾನ ಸೋಲಿಸಿಲಿದೆ ಎಂದು ಪಾಕ್ ತಂಡದ ನಾಯಕ ಬಾಬಾರ್ ಅಜಮ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Published: 14th October 2021 04:22 PM | Last Updated: 15th October 2021 01:30 PM | A+A A-

ಬಾಬರ್ ಅಜಮ್
ದುಬೈ: ಟಿ-20 ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಸಾಂಪ್ರಾದಾಯಿಕ ಎದುರಾಳಿ ಭಾರತವನ್ನು ಪಾಕಿಸ್ತಾನ ಸೋಲಿಸಿಲಿದೆ ಎಂದು ಪಾಕ್ ತಂಡದ ನಾಯಕ ಬಾಬಾರ್ ಅಜಮ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು- ನಾಲ್ಕು ವರ್ಷಗಳಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿಯೇ ಪಾಕಿಸ್ತಾನ ಬಹುತೇಕ ಪಂದ್ಯಗಳನ್ನಾಡಿದ್ದು, ಈ ನಿರಂತರ ಅನುಭವ ಭಾರತ ವಿರುದ್ಧ ಗೆಲಲ್ಲು ವರದಾನವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಟಿ-20 ವಿಶ್ವಕಪ್: ಭಾರತ ತಂಡಕ್ಕೆ ಮಾರ್ಗದರ್ಶಕರಾಗಲು ಧೋನಿ ಗೌರವ ಧನ ಪಡೆಯುತ್ತಿಲ್ಲ- ಬಿಸಿಸಿಐ
ಅಕ್ಟೋಬರ್ 24 ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಎದುರಾಗಲಿವೆ. ಇಲ್ಲಿ ದಾಖಲೆಯ ಆರು ಟಿ-20 ಪಂದ್ಯಗಳನ್ನು ಪಾಕಿಸ್ತಾನ ಗೆದಿದ್ದೆ. ಕಳೆದ ಮೂರು ನಾಲ್ಕು ವರ್ಷಗಳಿಂದ ಯುಎಇನಲ್ಲಿಯೇ ಕ್ರಿಕೆಟ್ ಆಡಿದ್ದು, ಇಲ್ಲಿನ ನೈಜ ಪರಿಸ್ಥಿತಿ ಗೊತ್ತಿದೆ ಎಂದು ಅಜಮ್ ಹೇಳಿರುವುದಾಗಿ ಐಸಿಸಿ ತಿಳಿಸಿದೆ.
ವಿಕೆಟ್ ಗಳನ್ನು ಹೇಗೆ ಬೀಳಿಸಬೇಕು ಮತ್ತು ಬ್ಯಾಟ್ಸ್ ಮನ್ ಗಳಿಗೆ ಯಾವ ರೀತಿಯ ಹೊಂದಾಣಿಕೆ ಮಾಡಬೇಕು ಎಂಬುದು ಗೊತ್ತಿದೆ. ಪಂದ್ಯದ ದಿನ ಉತ್ತಮವಾಗಿ ಆಡಿದವರು ಗೆಲ್ಲುತ್ತಾರೆ. ಗೆಲುವು ಯಾರಿಗೆ ಎಂದು ಕೇಳಿದರೆ, ಮೊದಲ ಟಿ-20 ವಿಶ್ವಕಪ್ ಪಂದ್ಯ ಆಡಲು ಸಿದ್ಧರಾಗಿದ್ದೇವು. ತಮ್ಮ ನಾಯತ್ವದಲ್ಲಿ ಭಾರತ ವಿರುದ್ಧ ಚೊಚ್ಚಲ ಪಂದ್ಯ ಗೆಲ್ಲುವುದಾಗಿ ಅವರು ಹೇಳಿದರು.