T20 WC: ಕ್ರಿಕೆಟ್ ಅಭಿಮಾನಿಗಳ ಫೈಟ್! ಪಾಕ್-ಅಫ್ಘನ್ ಪಂದ್ಯದ ವೇಳೆ ಮಾರಾಮಾರಿ, ವಿಡಿಯೋ ವೈರಲ್!

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಿನ್ನೆ ಕ್ರಿಕೆಟ್ ಅಭಿಮಾನಿಗಳ ಮಧ್ಯೆ ಮಾರಾಮಾರಿ ನಡೆದಿದೆ. ಕ್ರಿಕೆಟ್ ಅಭಿಮಾನಿಗಳು ಒಬ್ಬರ ಮೇಲೆ ಒಬ್ಬರು ಮುಗಿಬಿದ್ದಿರುವು ಹಾಗೂ ಜಗಳದಲ್ಲಿ ಸಖತ್ ಪಂಚ್ ನೀಡ್ತಿರುವ ದೃಶ್ಯಗಳು ವೈರಲ್ ಆಗಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ದುಬೈ: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಿನ್ನೆ ಕ್ರಿಕೆಟ್ ಅಭಿಮಾನಿಗಳ ಮಧ್ಯೆ ಮಾರಾಮಾರಿ ನಡೆದಿದೆ. 

ಕ್ರಿಕೆಟ್ ಅಭಿಮಾನಿಗಳು ಒಬ್ಬರ ಮೇಲೆ ಒಬ್ಬರು ಮುಗಿಬಿದ್ದಿರುವು ಹಾಗೂ ಜಗಳದಲ್ಲಿ ಸಖತ್ ಪಂಚ್ ನೀಡ್ತಿರುವ ದೃಶ್ಯಗಳು ವೈರಲ್ ಆಗಿವೆ.

ಭಾರತೀಯರು ದ್ವೇಷಿಸುವಂತೆ ಪಾಕಿಸ್ತಾನವನ್ನು ಅಫ್ಘಾನಿಗಳು ದ್ವೇಷ ಮಾಡ್ತಾರೆ. ಈ ಹಿನ್ನೆಲೆಯಲ್ಲಿ ನಿನ್ನೆಯ ಅಫ್ಘನ್ ಹಾಗೂ ಪಾಕ್ ನಡುವಿನ ಪಂದ್ಯ ಹೆಚ್ಚು ಕುತೂಹಲ ಕೆರಳಿಸಿತ್ತು. 

ಅಫ್ಘಾನಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಟಿಕೆಟ್ ಖರೀದಿ ಮಾಡದೆ ದುಬೈ ಗ್ರೌಂಡ್ ಗೆ ಎಂಟ್ರಿ ಕೊಟ್ಟಿದ್ದರು. ಅಲ್ಲದೆ, ಪಂದ್ಯ ಆರಂಭಕ್ಕೂ ಮುನ್ನವೇ ಬೇಗ ಬಂದು ಗ್ರೌಂಡ್ ನಲ್ಲಿ ಆಸೀನರಾಗಿದ್ದರು. ಇದರಿಂದ ಪ್ರವೇಶ ದ್ವಾರದಲ್ಲಿ ಕ್ರೀಡಾಭಿಮಾನಿಗಳ ಸಂಖ್ಯೆ ಹೆಚ್ಚಾಗಿತ್ತು. 

ಗೇಟ್ ಗಳ ಗ್ರೌಂಡ್ ಒಳಗೆ ಪ್ರವೇಶ ಮಾಡಲು ಹೆಚ್ಚು ಕಸರತ್ತು ಪಡಬೇಕಾಗಿತ್ತು. ಈ ವೇಳೆ ನೂಕು ನುಗ್ಗಲು ಹಾಗೂ ಗದ್ದಲದಿಂದಾಗಿ ಅಫ್ಗನ್ ಹಾಗೂ ಪಾಕ್ ಕ್ರಿಕೆಟ್ ಅಭಿಮಾನಿಗಳ ಮಧ್ಯೆ ಜಟಾಪಟಿ ನಡೆದಿದೆ. ಗಲಾಟೆ ವೇಳೆ, ಮಾರಾಮಾರಿ ನಡೆದು ಪಂಚ್ ಹಾಗೂ ಕಿಕ್ ಗಳನ್ನು ಪರಸ್ಪರ ಕೊಟ್ಟುಕೊಂಡಿದ್ದಾರೆ.

ಈ ಸಮಯದಲ್ಲಿ ಹಲವರು ಟಿಕೆಟ್ ಇದ್ರೂ ಸಹ ಅಫ್ಘನ್-ಪಾಕ್ ಪಂದ್ಯ ನೋಡಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಐಸಿಸಿ, ಟಿಕೆಟ್ ಇದ್ರೂ ಸಹ ಪಂದ್ಯ ನೋಡಲಾಗದ ವೀಕ್ಷಕರಲ್ಲಿ ಕ್ಷಮೆಯನ್ನು ಕೇಳಿಕೊಂಡಿದೆ. ಗಲಾಟೆ ವೇಳೆ ಕ್ರೀಡಾಂಗಣದ ಬಳಿ ಇದ್ದ ಬ್ಯಾರಿಕೇಡ್ ಗಳನ್ನೂ ಸಹ ಮುರಿದು ಹಾಕಲಾಗಿದೆ.

ಈ ಇಡೀ ಘಟನೆಯ ನಂತ್ರ ಅಫ್ಘಾನಿಸ್ತಾನದ ತಂಡದ ಕ್ಯಾಪ್ಟನ್ ಮೊಹಮ್ಮದ್ ನಬಿ, ಮುಂದಿನ ಪಂದ್ಯಕ್ಕೆ ಟಿಕೆಟ್ ಖರೀದಿ ಮಾಡಿ, ಪಂದ್ಯವನ್ನು ಅರಾಮಾಗಿ ವೀಕ್ಷಿಸಿ ಅಂತಾ ಕ್ರೀಡಾಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ರೋಚಕ ಪಂದ್ಯದಲ್ಲಿ ದುರ್ಬಲ ಅಫ್ಘಾನಿಸ್ತಾನ, ಪಂದ್ಯ ಗೆಲ್ಲುವ ಹಂತದಲ್ಲಿತ್ತು. ಆದರೆ, ಕೊನೆಯ ಓವರ್ ನಲ್ಲಿನ 4 ಸಿಕ್ಸರ್ ಪಾಕಿಸ್ತಾನಕ್ಕೆ ಸುಲಭ ಜಯ ದಾಖಲಿಸುವಲ್ಲಿ ಸಹಾಯ ಮಾಡಿತು. ಈ ಪಂದ್ಯದಲ್ಲಿ ಪಾಕಿಸ್ತಾನ ಆಫ್ಘಾನಿಸ್ತಾನವನ್ನು ಸೋಲಿಸಿ ಟೂರ್ನಿಯಲ್ಲಿ ಸತತ ಮೂರನೇ ಗೆಲುವು ಸಾಧಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com