ಟಿ20 ವಿಶ್ವಕಪ್: ಭಾರತೀಯ ಕ್ರಿಕೆಟ್ ಆಟಗಾರರ ಬೀಚ್ ವಾಲಿಬಾಲ್ ಮಸ್ತಿ: ಸಾಥ್ ನೀಡಿದ ಧೋನಿ 

ಪಾಕ್ ವಿರುದ್ಧದ ಪಂದ್ಯದ ಸೋಲಿನ ಒತ್ತಡದಿಂದ ಹೊರ ಬರಲು ಹಾಗೂ ಆಟಗಾರರಲ್ಲಿ ಹುಮ್ಮಸ್ಸು ಇಮ್ಮಡಿಗೊಳಿಸಲು ಧೋನಿ ಆ್ಯಂಡ್ ಗ್ಯಾಂಗ್ ಮರಳಿನ ಮೇಲೆ ಬಲೆ ಕಟ್ಟಿಕೊಂಡು ವಾಲಿಬಾಲ್ ಆಡಿದ್ದಾರೆ.
ಟೀಮ್ ಇಂಡಿಯಾ ಬೀಚ್ ವಾಲಿಬಾಲ್
ಟೀಮ್ ಇಂಡಿಯಾ ಬೀಚ್ ವಾಲಿಬಾಲ್

ದುಬೈ: ದುಬೈನ ಬೀಚ್ ನಲ್ಲಿ ಧೋನಿ ಹುಡುಗರು ವಾಲಿಬಾಲ್ ಆಡೋದರ ಮೂಲಕ ಕಸರತ್ತು ನಡೆಸಿದ್ದಾರೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಮಾಡು ಇಲ್ಲವೇ ಮಡಿ ಪಂದ್ಯ ಆರಂಭವಾಗಲಿದೆ.

ಪಾಕ್ ವಿರುದ್ಧದ ಪಂದ್ಯದ ಸೋಲಿನ ಒತ್ತಡದಿಂದ ಹೊರ ಬರಲು ಹಾಗೂ ಆಟಗಾರರಲ್ಲಿ ಹುಮ್ಮಸ್ಸು ಇಮ್ಮಡಿಗೊಳಿಸಲು ಧೋನಿ ಆ್ಯಂಡ್ ಗ್ಯಾಂಗ್ ಮರಳಿನ ಮೇಲೆ ಬಲೆ ಕಟ್ಟಿಕೊಂಡು ವಾಲಿಬಾಲ್ ಆಡಿದ್ದಾರೆ. ಎರಡು ಟೀಮ್ ಗಳನ್ನಾಗಿ ವಿಭಜಿಸಿ ಪಂದ್ಯ ಆಡಿ ಆನಂದಿಸಿದ್ದಾರೆ. 


ನಾಯಕ ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ ಮತ್ತು ರಾಹುಲ್ ಚಹಾರ್ ದುಬೈ ಬೀಚ್ ನಲ್ಲಿ ಶಾರ್ಟ್ಸ್‌ ಧರಿಸಿ ಉತ್ಸಾಹದಿಂದ ಆಟದಲ್ಲಿ ಪಾಲ್ಗೊಂಡರು. ತಂಡದ ಮೆಂಟರ್ ಆಗಿರುವ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಉಳಿದವರು ಕೂಡಾಾತದಲ್ಲಿ ಭಾಗಿಯಾಗಿದ್ದು ವಿಶೇಷ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com