ರಾಜಸ್ತಾನ ರಾಯಲ್ಸ್ ಐಪಿಎಲ್ ತಂಡದಿಂದ ಇದೇ ಮೊದಲ ಬಾರಿಗೆ ಬಾಲಕನಿಗೆ ಸೂಪರ್ ಫ್ಯಾನ್ ಪಟ್ಟ

ಸೂಪರ್ ಫ್ಯಾನ್ ಬಾಲಕ ರಾಜಸ್ತಾನ ಮೂಲದವನಲ್ಲವೆನ್ನುವುದು ಅಚ್ಚರಿಯ ಸಂಗತಿ. ರಾಯಲ್ಸ್ ತಂಡದ ಆಲ್ ರೌಂಡರ್ ಕ್ರಿಕೆಟಿಗ ಪರಾಗ್ ರಿಯಾನ್ ಆತನ ಮನೆಗೆ ಸರ್ ಪ್ರೈಸ್ ಭೇಟಿ ನೀಡಿ ವಿಷಯ ತಿಳಿಸಿದ್ದು ವಿಶೇಷ. 
ರಾಜಸ್ತಾನ್ ರಾಯಲ್ಸ್ ಲಾಂಛನ
ರಾಜಸ್ತಾನ್ ರಾಯಲ್ಸ್ ಲಾಂಛನ

ಜೈಪುರ: ಐಪಿಎಲ್ ಕ್ರಿಕೆಟ್ ತಂಡ ರಾಜಸ್ತಾನ್ ರಾಯಲ್ಸ್ ಇದೇ ಮೊದಲ ಬಾರಿಗೆ ಬಾಲಕನೋರ್ವನಿಗೆ ಜೂನಿಯರ್ ಸೂಪರ್ ರಾಯಲ್ ಬಿರುದು ನೀಡಿ ಗೌರವಿಸಿದೆ. ಬಾಲಕ ರಾಜಸ್ತಾನ ಮೂಲದವನಲ್ಲವೆನ್ನುವುದು ಅಚ್ಚರಿಯ ಸಂಗತಿ. 

ಸೂಪರ್ ಫ್ಯಾನ್ ಗೌರವಕ್ಕೆ ಪಾತ್ರನಾದ ಅಮನ್ ಅಗರ್ವಾಲ್ ಗೆ 13 ವರ್ಷ ವಯಸ್ಸು. ಆತ ಅಸ್ಸಾಂ ರಾಜ್ಯದ ಗುವಾಹತಿ ನಗರದ ನಿವಾಸಿ. 8ನೇ ತರಗತಿ ಓದುತ್ತಿದ್ದಾನೆ. ರಾಯಲ್ಸ್ ತಂಡದ ಆಲ್ ರೌಂಡರ್ ಕ್ರಿಕೆಟಿಗ ಪರಾಗ್ ರಿಯಾನ್ ಬಾಲಕನ ಮನೆಗೆ ಸರ್ ಪ್ರೈಸ್ ಭೇಟಿ ನೀಡಿ ವಿಷಯ ತಿಳಿಸಿದ್ದು ವಿಶೇಷ. 

ಪರಾಗ್ ರಿಯಾನ್ ಧುತ್ತನೆ ಅಮನ್ ಮನೆಗೆ ಬಂದಾಗ ಆತ ಸಂತಸದಿಂದ ಕುಣಿದಾಡುವ ವಿಡಿಯೊ ವೈರಲ್ ಆಗಿದೆ. ಅಮನ್ ೨೫ ಮಂದಿ ಸೂಪರ್ ರಾಯಲ್ ಫ್ಯಾನ್ ಗಳ ಜೊತೆ ಅಮನ್ ಒಬ್ಬನೇ ಜೂನಿಯರ್ ರಾಯಲ್. ಆತನ ವಯೋಮಾನದವರನ್ನು ಸೆಳೆಯಲು ರಾಜಸ್ಥಾನ ರಾಯಲ್ಸ್ ತಂಡ ಜೂನಿಯರ್ ಫ್ಯಾನ್ ಗೌರವವನ್ನು ನೀಡುತ್ತಿರುವುದಾಗಿ ತಂಡದ ಮುಖ್ಯಸ್ಥರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com