ಯುಎಇ ಬ್ಯಾಟ್ಸ್‌ಮನ್ ಗುಲಾಂ ಶಬ್ಬೀರ್ ಗೆ ನಾಲ್ಕು ವರ್ಷ ನಿಷೇಧ

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಗುಲಾಂ ಶಬ್ಬೀರ್ ಭ್ರಷ್ಟಾಚಾರ ನಿಗ್ರಹ ಸಂಹಿತೆಯ ಆರು ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಾಲ್ಕು ವರ್ಷಗಳ ನಿಷೇಧ ವಿಧಿಸಿದೆ.
ಗುಲಾಂ ಶಬ್ಬೀರ್ ಗೆ ನಾಲ್ಕು ವರ್ಷ ನಿಷೇಧ
ಗುಲಾಂ ಶಬ್ಬೀರ್ ಗೆ ನಾಲ್ಕು ವರ್ಷ ನಿಷೇಧ

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಗುಲಾಂ ಶಬ್ಬೀರ್ ಭ್ರಷ್ಟಾಚಾರ ನಿಗ್ರಹ ಸಂಹಿತೆಯ ಆರು ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಾಲ್ಕು ವರ್ಷಗಳ ನಿಷೇಧ ವಿಧಿಸಿದೆ.

ಈ ಸಮಯದಲ್ಲಿ ಅವರು ಯಾವುದೇ ರೀತಿಯ ಕ್ರಿಕೆಟ್ ನೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಗುವುದಿಲ್ಲ. ಶಬ್ಬೀರ್ ನಿಷೇಧವನ್ನು ಒಪ್ಪಿಕೊಂಡಿದ್ದಾರೆ ಮತ್ತು ಆಗಸ್ಟ್ 2025 ರ ಮಧ್ಯರಾತ್ರಿಯವರೆಗೆ ನಿಷೇಧಿಸಲಾಗುವುದು. 2019 ರ ಜನವರಿ-ಫೆಬ್ರವರಿಯಲ್ಲಿ ನೇಪಾಳ ವಿರುದ್ಧ ನಂತರ ಏಪ್ರಿಲ್‌ನಲ್ಲಿ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಭ್ರಷ್ಟಾಚಾರದ ಆರೋಪಗಳ ಕುರಿತು ಐಸಿಸಿಯ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ (ಎಸಿಯು) ವರದಿ ಮಾಡದ ಕಾರಣ ಶಬ್ಬೀರ್ ವಿರುದ್ಧ ಅಪರಾಧವನ್ನು ದಾಖಲಿಸಲಾಗಿತ್ತು. ಹೀಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಭ್ರಷ್ಟಾಚಾರ ನಿಗ್ರಹ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದಲ್ಲಿ ಆತನನ್ನು ದೋಷಿ ಎಂದು ಪರಿಗಣಿಸಲಾಗಿದೆ. ಗುಲಾಂ ಶಬ್ಬೀರ್ ಆರು ಆರೋಪಗಳ ಮೇಲೆ ಶಿಕ್ಷೆಗೊಳಗಾಗಿದ್ದಾರೆ. ಜೊತೆಗೆ ಈ ಕ್ರಿಕೆಟಿಗ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಐಸಿಸಿಯು ನೀಡಿದ ಹೇಳಿಕೆಯಲ್ಲಿ, ಶಬ್ಬೀರ್ ಸೆಕ್ಷನ್ 2.4.4 ನಿಯಮವನ್ನು ಅನುಸರಿಸಲಿಲ್ಲ ಮತ್ತು ಭ್ರಷ್ಟಾಚಾರ ವಿರೋಧಿ ಘಟಕಕ್ಕೆ 2019 ರ ಜನವರಿ-ಫೆಬ್ರವರಿ ಅವಧಿಯಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಸ್ತಾಪದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿಲ್ಲ ಎಂದು ಹೇಳಲಾಗಿದೆ. ಇದರ ಹೊರತಾಗಿ, ಏಪ್ರಿಲ್ 2019 ರಲ್ಲಿ ಜಿಂಬಾಬ್ವೆ ವಿರುದ್ಧದ ಸರಣಿಯ ಸಮಯದಲ್ಲಿ, ಅವರು ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳಿವೆ. ಆದರೆ ಅವರು ಈ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಜೊತೆಗೆ ಸಂಬಂಧಿಸಿದ ಮಾಹಿತಿಯನ್ನು ಮರೆಮಾಚುವ ಮೂಲಕ ತನಿಖೆಗೆ ಅಡ್ಡಿಪಡಿಸಿದ್ದಕ್ಕಾಗಿ ತಪ್ಪಿತಸ್ಥನೆಂದು ಕಂಡುಬಂದಿದೆ. ಗುಲಾಂ ಶಬ್ಬೀರ್ ಮೇಲಿನ ನಿಷೇಧ 20 ಆಗಸ್ಟ್ 2025 ಕ್ಕೆ ಕೊನೆಗೊಳ್ಳುತ್ತದೆ.

ಗುಲಾಂ ಶಬ್ಬೀರ್ ಯುಎಇ ಪರ 23 ಏಕದಿನ ಪಂದ್ಯಗಳಲ್ಲಿ 21.73 ರ ಸರಾಸರಿಯಲ್ಲಿ 500 ರನ್ ಗಳಿಸಿದರು ಮತ್ತು 30 ಕ್ಯಾಚ್ ಮತ್ತು ಎರಡು ಸ್ಟಂಪಿಂಗ್ ಮಾಡಿದ್ದಾರೆ. ಜೊತೆಗೆ 17 ಟಿ 20 ಪಂದ್ಯಗಳಲ್ಲಿ 18.90 ಸರಾಸರಿಯಲ್ಲಿ 208 ರನ್ ಗಳಿಸಿದ್ದಾರೆ. ಇಲ್ಲಿ 14 ಕ್ಯಾಚ್‌ಗಳು ಮತ್ತು ಒಂದು ಸ್ಟಂಪಿಂಗ್ ಅವರ ಹೆಸರಿನಲ್ಲಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com