ಐಪಿಎಲ್-2021: ಪಂಜಾಬ್ ಗೆ ಬೃಹತ್ ಗುರಿ ನೀಡಿದ ರಾಜಸ್ಥಾನ ರಾಯಲ್ಸ್

ಹಾಲಿ ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡ ಬೃಹತ್ ಮೊತ್ತ ಪೇರಿಸಿದೆ.
ಪಂಜಾಬ್ ಗೆ ಬೃಹತ್ ಗುರಿ ನೀಡಿದ ರಾಜಸ್ಥಾನ ರಾಯಲ್ಸ್
ಪಂಜಾಬ್ ಗೆ ಬೃಹತ್ ಗುರಿ ನೀಡಿದ ರಾಜಸ್ಥಾನ ರಾಯಲ್ಸ್

ದುಬೈ: ಹಾಲಿ ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡ ಬೃಹತ್ ಮೊತ್ತ ಪೇರಿಸಿದೆ.

ಮಹಿಪಾಲ್​ ಲೋಮ್ರೋರ್​ ಮತ್ತು ಯಶಸ್ವಿ ಜೈಸ್ವಾಲ್​ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ತಾನ್​ ರಾಯಲ್ಸ್​ ತಂಡ ಪಂಜಾಬ್​ ಕಿಂಗ್ಸ್​ಗೆ 186 ರನ್​ಗಳ ಕಠಿಣ ಗುರಿ ನೀಡಿದೆ. ಟಾಸ್​ ಸೋತು ಬ್ಯಾಟಿಂಗ್ ಮಾಡಿದ ರಾಜಸ್ಥಾನ್​ ರಾಯಲ್ಸ್ ​​20 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡ 185 ರನ್​ಗಳಿಗೆ ಆಲೌಟ್ ಆಯಿತು.

ಇಂದೇ ರಾಯಲ್ಸ್​ ಪರ ಪದಾರ್ಪಣೆ ಮಾಡಿದ ಎವಿನ್ ಲೂಯಿಸ್​ ಯುವ ಆಟಗಾರ ಜೈಸ್ವಾಲ್​ ಜೊತೆಗೂಡಿ ಮೊದಲ ವಿಕೆಟ್​ಗೆ 54 ರನ್​ ಸೇರಿಸಿ ಭರ್ಜರಿ ಆರಂಭ ಕೊಟ್ಟರು. ಕೇವಲ 21 ಎಸೆತಗಳಲ್ಲಿ 7 ಬೌಂಡರಿ ಮತ್ತು ಒಂದು ಸಿಕ್ಸರ್​ ಸಹಿತ 36 ರನ್​ಗಳಿಸಿ ಅರ್ಶದೀಪ್ ಸಿಂಗ್​ಗೆ ವಿಕೆಟ್​ ಒಪ್ಪಿಸಿದರು. ನಂತರ ಬಂದ ನಾಯಕ ಸ್ಯಾಮ್ಸನ್​ ಕೇವಲ 4 ರನ್​ಗಳಿಸಿ ಪದಾರ್ಪಣೆ ಬೌಲರ್​ ಇಶಾನ್ ಪೊರೆಲ್​ಗೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು.

3ನೇ ವಿಕೆಟ್​ಗೆ ಜೈಸ್ವಾಲ್ ಜೊತೆಗೂಡಿದ ಲಿವಿಂಗ್​ಸ್ಟೋನ್​(25)48 ರನ್​ ಸೇರಿಸಿ ಅರ್ಶದೀಪ್​ಗೆ 2ನೇ ಬಲಿಯಾದರು. ಇವರ ಬೆನ್ನಲ್ಲೇ 36 ಎಸೆತಗಳಲ್ಲಿ 2 ಸಿಕ್ಸರ್​ ಹಾಗೂ 6 ಬೌಂಡರಿ ಸಹಿತ 49 ರನ್​ಗಳಿಸಿದ್ದ ಜೈಸ್ವಾಲ್ ಹರ್ಪ್ರೀತ್​ ಬ್ರಾರ್​ಗೆ ವಿಕೆಟ್​ ಒಪ್ಪಿಸುವ ಮೂಲಕ ನಿರಾಶೆಯನುಭವಿಸಿದರು.

ಪಂಜಾಬ್ ಕಿಂಗ್ಸ್ ಪರ ಯುವ ಬೌಲರ್ ಅರ್ಶ್​ದೀಪ್​ ಸಿಂಗ್ 32 ರನ್​ ನೀಡಿ 5 ವಿಕೆಟ್ ಪಡೆದರೆ, ಅನುಭವಿ ಶಮಿ 21 ರನ್​ ನೀಡಿ 3 ವಿಕೆಟ್​ ಪಡೆದರು. ಬ್ರಾರ್​ ಮತ್ತು ಪೊರೆಲ್ ತಲಾ ಒಂದು ವಿಕೆಟ್ ಪಡೆದರು. 

ಸಂಕ್ಷಿಪ್ತ ಸ್ಕೋರ್ ವಿವರ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com